ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ ಬೂಸ್ಟರ್‌ ಡೋಸ್‌ಗೆ ಅನುಮತಿ ನೀಡುವಂತೆ DCGIಗೆ ಮನವಿ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಕೊರೊನಾದ ಹೊಸ ರೂಪಾಂತರಿ ಭಯ ದೇಶದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಶೀಲ್ಡ್‌ ಬೂಸ್ಟರ್ ಡೋಸ್‌ಗೆ ಅನುಮತಿ ನೀಡುವಂತೆ ಡಿಜಿಸಿಐಗೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪತ್ರ ಬರೆದಿದೆ.

ಈ ಮಧ್ಯೆ ಕೇಂದ್ರ ಸರ್ಕಾರವೂ ಕೂಡ ಬೂಸ್ಟರ್​ಡೋಸ್​ನ ಅಗತ್ಯತೆ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ತಜ್ಱರ ಸಲಹೆ ಕೇಳಿದೆ ಎಂದು ತಿಳಿದು ಬಂದಿದೆ. ಅಲ್ಲದೇ, 2 ಡೋಸ್​ ಪಡೆದ ಜನರಿಗೆ ಮೂರನೇ ಡೋಸ್​(ಬೂಸ್ಟರ್​ ಡೋಸ್​) ನೀಡುವ ಬಗ್ಗೆ ನಿಮ್ಮ ನಿಲುವು ಏನು ಎಂದು ದೆಹಲಿ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿತ್ತು.

ಬೂಸ್ಟರ್ ಡೋಸ್; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಬೂಸ್ಟರ್ ಡೋಸ್; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಇತ್ತೀಚೆಗೆ ಕೇರಳ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢ ಸರ್ಕಾರ ಕರೋನಾ ಲಸಿಕೆಯ ಬೂಸ್ಟರ್ ಡೋಸ್‌ ನೀಡಲು ಪರಾಮರ್ಶಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿರುವ ಭೀತಿ ದೂರವಾಗಿಲ್ಲ. ಅನೇಕ ರಾಷ್ಟ್ರಗಳು ಕೊರೊನಾದಿಂದ ಬಚಾವ್​ ಆಗಲು ಬೂಸ್ಟರ್​ ಡೋಸ್​ ನೀಡಲು ಮುಂದಾಗಿವೆ. ಇಂಗ್ಲೆಂಡ್​ನಲ್ಲಿ ಅಲ್ಲಿನ ಸರ್ಕಾರ ಈಗಾಗಲೇ ಆಸ್ಟ್ರಾಜೆನಿಕಾ ಲಸಿಕೆಯ ಬೂಸ್ಟರ್​ ಡೋಸ್​ ಅನ್ನು ಜನರಿಗೆ ನೀಡಲು ಮುಂದಾಗಿದೆ.

ಭಾರತದಲ್ಲೂ ಬೂಸ್ಟರ್​ ಡೋಸ್​ ನೀಡಲು ಅನುಮೋದಿಸಿ ಎಂದು ಸೀರಮ್​ ಸಂಸ್ಥೆಯ ಪ್ರಕಾಶ್ ಕುಮಾರ್ ಸಿಂಗ್ ಡಿಸಿಜಿಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. 2 ಡೋಸ್​ ಪಡೆದ ಜನರು ಮೂರನೇ ಬೂಸ್ಟರ್​ ಡೋಸ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ದೇಶದಲ್ಲಿ ಲಸಿಕೆ ಕೊರತೆಯೂ ಇಲ್ಲ ಎಂದು ಸಿಂಗ್​ ತಿಳಿಸಿದ್ದಾರೆ.

 ಬೂಸ್ಟರ್‌ ಡೋಸ್‌ಗೆ ಬೇಡಿಕೆ

ಬೂಸ್ಟರ್‌ ಡೋಸ್‌ಗೆ ಬೇಡಿಕೆ

ಈ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್‌ನಿಂದ ವಂಚಿತರಾಗಬಾರದು ಎಂಬುದು ಈ ಸಮಯದ ಅಗತ್ಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆರಿಗ್ಯದ ಹಕ್ಕಾಗಿದೆ ಎಂದು DCGI ಹೇಳಿದೆ. ಬೂಸ್ಟರ್ ಡೋಸ್‌ಗಳ ಅಗತ್ಯತೆಯ ವೈಜ್ಞಾನಿಕ ಪುರಾವೆಗಳನ್ನು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಪರಿಗಣಿಸುತ್ತಿದೆ ಎಂದು ಕೇಂದ್ರ ಸರ್ಕಾರ ಈ ಮೊದಲು ಸಂಸತ್ತಿನಲ್ಲಿ ತಿಳಿಸಿದೆ. ಇತ್ತೀಚೆಗೆ, ಕೇರಳ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢವು SARS-CoV-2 ನ ಹೊಸ ರೂಪಾಂತರದ ಒಮಿಕ್ರೋನ್‌ನ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಬೂಸ್ಟರ್ ಡೋಸ್‌ಗಳನ್ನು ಅನುಮತಿಸುವ ಬಗ್ಗೆ ನಿರ್ಧರಿಸಲು ಕೇಂದ್ರವನ್ನು ಒತ್ತಾಯಿಸಿವೆ.

 ನ್ಯಾಯಾಲಯದಿಂದಲೂ ಪ್ರಸ್ತಾಪ

ನ್ಯಾಯಾಲಯದಿಂದಲೂ ಪ್ರಸ್ತಾಪ

ಮತ್ತೊಂದೆಡೆ, ದೆಹಲಿ ಹೈಕೋರ್ಟ್ ನವೆಂಬರ್ 25 ರಂದು ಆ ಜನರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಎರಡನೇ ಅಲೆಯ ತರಹದ ಪರಿಸ್ಥಿತಿ ಬರಬಾರದು ಹಾಗಾಗಿ ಎರಡೂ ಡೋಸ್ ಕೊರೊನಾ ವೈರಸ್ ಲಸಿಕೆ ಪಡೆದವರಿಗೆ ಮೂರನೇ ಡೋಸ್ ನೀಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೋರ್ಟ್ ಹೇಳಿತ್ತು.

 ಡಿಸಿಜಿಐಗೆ ಪತ್ರ

ಡಿಸಿಜಿಐಗೆ ಪತ್ರ

ಭಾರತದ ಡಿಸಿಜಿಐಗೆ ಕಳುಹಿಸಿದ ಅರ್ಜಿಯಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರ್ ಈಗಾಗಲೇ ಬೂಸ್ಟರ್ ಡೋಸ್ ಅನ್ನು ಅನುಮೋದಿಸಿದೆ ಎಂದು ಹೇಳಿದೆ. ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಹೇಳಿದೆ. ಕೋವಿಶೀಲ್ಡ್ ಎರಡೂ ಡೋಸ್ ಗಳನ್ನು ಈಗಾಗಲೇ ಪಡೆದಿರುವ ನಾಗರಿಕರು ನಿರಂತರವಾಗಿ ಬೂಸ್ಟರ್ ಡೋಸ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಅದು ಹೇಳಿದೆ.

 ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

ಡಿಸೆಂಬರ್ 2ರಂದು ನವದೆಹಲಿಗೆ ತೆರಳುತ್ತಿದ್ದು, ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ಚರ್ಚಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ" ಎಂದರು.
"ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಸೋಂಕಿನ ವಿರುದ್ಧದ ಮೊದಲ ಮತ್ತು ಎರಡನೇ ಡೋಸ್ ನೀಡಿ 6-7 ತಿಂಗಳುಗಳಾಗಿರುವುದರಿಂದ ಈಗ ಬೂಸ್ಟರ್ ಡೋಸ್ ನೀಡಬಹುದೇ? ಎಂಬುದರ ಕುರಿತು ಚರ್ಚಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.

Recommended Video

ವಿಶ್ವನಾಥ ವಿಚಾರಕ್ಕೆ ಡಿಕೆ ಗರಂ ಆಗಿದ್ದು ಯಾಕೆ? | Oneindia Kannada

English summary
Serum Institute of India has sought from India’s drug regulator approval for Covishield as a booster dose citing adequate stock of the vaccine in the country and a demand for a booster shot due to the emergence of new coronavirus variants, official sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X