ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್‌ ಬೇಹುಗಾರಿಕೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು

|
Google Oneindia Kannada News

ನವದೆಹಲಿ, ಜು.27: ಪತ್ರಕರ್ತರು, ವಕೀಲರು, ಮಂತ್ರಿಗಳು, ಪ್ರತಿಪಕ್ಷದ ರಾಜಕಾರಣಿಗಳು, ಸಾಂವಿಧಾನಿಕ ಕಾರ್ಯಕರ್ತರು ಸೇರಿದಂತೆ 142 ಕ್ಕೂ ಹೆಚ್ಚು ಮಂದಿಯ ಮೇಲೆ ಸಂಭಾವ್ಯ ಪೆಗಾಸಸ್‌ ಕಣ್ಗಾವಲು ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಅಥವಾ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತನಿಖೆಗಾಗಿ ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿ ಕುಮಾರ್ ಒತ್ತಾಯಿಸಿದ್ದಾರೆ.

"ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು ಬಳಸುವ ಇಂತಹ ಸಾಮೂಹಿಕ ಕಣ್ಗಾವಲು ಹಲವಾರು ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ. ನಮ್ಮ ಪ್ರಜಾಪ್ರಭುತ್ವದ ಸ್ಥಾಪನೆಯ ನಿರ್ಣಾಯಕ ಆಧಾರ ಸ್ತಂಭಗಳಾಗಿ ಕಾರ್ಯನಿರ್ವಹಿಸುವ ಸ್ವತಂತ್ರ ಸಂಸ್ಥೆಗಳಿಗೆ ಒಳನುಸುಳುವಿಕೆ, ದಾಳಿ ಮತ್ತು ಅಸ್ಥಿರಗೊಳಿಸುವ ಪ್ರಯತ್ನದ ಭಾಗ ಇದಾಗಿದೆ," ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌

ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಹಾಗೂ ವಾಕ್‌ ಸ್ವಾತಂತ್ಯ್ರಕ್ಕೆ ಮೂಗು ತೂರಿಸುವ ಈ ಬೇಹುಗಾರಿಕೆಗೆ ಸರ್ಕಾರ ಅನುಮತಿ ನೀಡಿದೆಯೇ ಎಂಬ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಕೂಡಾ ಈ ಇಬ್ಬರು ಹಿರಿಯ ಪತ್ರಕರ್ತರು ಆಗ್ರಹಿಸಿದ್ದಾರೆ. ಹಾಗೆಯೇ ಈ ಕಾನೂನುಬಾಹಿರ ಹ್ಯಾಕ್‌ ಸರ್ಕಾರ ಆಜ್ಞೆಯ ಮೇರೆಗೆ ನಡೆದಿದೆಯೇ ಎಂಬ ಬಗ್ಗೆ ಸರ್ಕಾರ ಇನ್ನೂ ನೇರ ಉತ್ತರವನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

 Senior journalists move Supreme Court for probe into Pegasus snooping allegations

"ಪ್ರತಿವಾದಿಗಳು [ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯಗಳು] ತಮ್ಮ ಪ್ರತಿಕ್ರಿಯೆಯಲ್ಲಿ ಕಣ್ಗಾವಲು ನಡೆಸಲು ಪೆಗಾಸಸ್ ಪರವಾನಗಿಗಳನ್ನು ಪಡೆಯುವುದನ್ನು ನಿರ್ದಿಷ್ಟವಾಗಿ ತಳ್ಳಿಹಾಕಿಲ್ಲ. ಈ ಅತ್ಯಂತ ಗಂಭೀರವಾದ ಆರೋಪಗಳ ಬಗ್ಗೆ ವಿಶ್ವಾಸಾರ್ಹ ಮತ್ತು ಸ್ವತಂತ್ರ ತನಿಖೆಯನ್ನು ನಡೆಸುವ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ," ಎಂದು ಅರ್ಜಿಯು ಎತ್ತಿ ತೋರಿಸಿದೆ.

ಈ ಪೆಗಾಸಸ್‌ ಬೇಹುಗಾರಿಕೆ ಮುಕ್ತ ವಾಕ್ ಮತ್ತು ಗೌಪ್ಯತೆಯ ಹಕ್ಕುಗಳ ಮೇಲೆ ಗಂಭೀರವಾದ ಹಲ್ಲೆಗಳನ್ನು ಉಂಟುಮಾಡಿದೆ. ಅದಕ್ಕೆ ಯಾವುದೇ ಕಾನೂನು ಆಧಾರವಿರಲಿಲ್ಲ. ವಾಸ್ತವವಾಗಿ, ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5 (2) ರ ಅಡಿಯಲ್ಲಿ ಕಣ್ಗಾವಲುಗಾಗಿ ಕಾನೂನು ನಿಯಮವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನಾಗರಿಕರನ್ನು ಗುರಿಯನ್ನಾಗಿಸಲಾಗಿದೆ.

ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ

"ಕಣ್ಗಾವಲು / ಪ್ರತಿಬಂಧವು ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿಗಳಲ್ಲಿ ಮಾತ್ರ ಉಪಯೋಗಿಸಬಹುದಾಗಿದೆ. ಅಂತಹ ಪರಿಸ್ಥಿತಿಗಳ ಅಸ್ತಿತ್ವವನ್ನು ಸರಿಯಾಗಿ ಅವಲೋಕಿಸಬೇಕು. ಅದು ಸರ್ಕಾರದ ಮೌಲ್ಯಮಾಪನದ ಮೇಲೆ ಮಾತ್ರ ನಿರ್ಧರಿಸಲಾಗುವುದಿಲ್ಲ. ಹ್ಯಾಕ್ / ಪ್ರತಿಬಂಧ / ಡೀಕ್ರಿಪ್ಶನ್ ಪೆಗಾಸಸ್ ಸ್ಪೈವೇರ್ ಕ್ರಿಮಿನಲ್ ಅಪರಾಧವಾಗಿದೆ," ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇಸ್ರೇಲಿ ಸೈಬರ್-ಆರ್ಮ್ಸ್ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್ ಲಿಮಿಟೆಡ್ ತಯಾರಿಸಿದ ಪೆಗಾಸಸ್ ಸಾಫ್ಟ್‌ವೇರ್ ಅತ್ಯಂತ ಸುಧಾರಿತ ಮತ್ತು ಮಾಲೀಕರೊಂದಿಗೆ ಯಾವುದೇ ಸಂವಹನವಿಲ್ಲದೆ ಮೊಬೈಲ್ ಫೋನ್ / ಸಾಧನವನ್ನು ಹ್ಯಾಕ್‌ ಮಾಡಬಲ್ಲ ಸಾಫ್ಟ್‌ ವೇರ್‌ ಆಗಿದೆ. ಇದನ್ನು ಶೂನ್ಯ ಕ್ಲಿಕ್ ದಾಳಿ ಎಂದೂ ಕರೆಯುತ್ತಾರೆ.

"ಇದರಿಂದಾಗಿ ಕರೆಗಳನ್ನು ಟ್ರ್ಯಾಕಿಂಗ್ ಮತ್ತು ರೆಕಾರ್ಡಿಂಗ್ ಮಾಡುತ್ತದೆ, ಮೆಸೇಜ್‌ಗಳು ಹಾಗೂ ವಾಟ್ಸಾಪ್ ಸಂದೇಶಳನ್ನು ಓದಬಹುದಾಗಿದೆ. ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಬಹುದಾಗಿದೆ. ಇಮೇಲ್‌ಗಳನ್ನು ಓದುಬಹುದಾಗಿದೆ. ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಬಹುದಾಗಿದೆ. ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಸಕ್ರಿಯಗೊಳಿಸುವ ಮೂಲಕ ಆ ಮೊಬೈಲ್‌ ಫೋನ್‌ ಇದ್ದ ಕಡೆಯಲ್ಲಿ ನಡೆಯುವ ಘಟನೆಯನ್ನು ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ. ಉದ್ದೇಶಿತ ಮೊಬೈ‌ಲ್‌ ಫೋನ್‌ಗೆ ಕರೆ ಮಾಡುವ ಮೂಲಕ ಅದನ್ನು ಸರಳವಾಗಿ ಸ್ಥಾಪಿಸಬಹುದಾಗಿದೆ. ಈ ಕರೆಯನ್ನು ಸ್ವೀಕರಿಸದಿದ್ದರೂ ಕೂಡಾ ಮೊಬೈಲ್‌ ಹ್ಯಾಕ್‌ ಮಾಡಬಹುದಾಗಿದೆ," ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

"ಅಪರಾಧ ಮತ್ತು ಭಯೋತ್ಪಾದನೆ" ಯ ವಿರುದ್ಧ ಹೋರಾಡಲು ಪೆಗಾಸಸ್ ಸೇರಿದಂತೆ ತನ್ನ ಉತ್ಪನ್ನಗಳನ್ನು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿ ಎನ್ಎಸ್ಒ ಗ್ರೂಪ್ ಹೇಳಿಕೊಂಡಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸೆಕ್ಯುರಿಟಿ ಲ್ಯಾಬ್‌ನ ಕಣ್ಗಾವಲು ಗುರಿಯನ್ನು ಹೊಂದಿರುವ ಜನರಿಗೆ ಸೇರಿದ ಹಲವಾರು ಮೊಬೈಲ್ ಫೋನ್‌ಗಳ ವಿಧಿವಿಜ್ಞಾನ ವಿಶ್ಲೇಷಣೆಯು ಪೆಗಾಸಸ್ ಪ್ರೇರಿತ ಭದ್ರತಾ ಉಲ್ಲಂಘನೆಯನ್ನು ದೃಢಪಡಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Senior journalists N. Ram and Sashi Kumar have moved the Supreme Court for an independent probe headed by a former or sitting top court judge into the Pegasus snooping allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X