ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯುವ ಕೆಲವೇ ಕ್ಷಣ ಮೊದಲು ಬಕ್ರೀದ್ ಶುಭಾಶಯ ಹೇಳಿದ್ದ ಕಾಂಗ್ರೆಸ್ ಮುಖಂಡ

|
Google Oneindia Kannada News

ನವದೆಹಲಿ, ಆಗಸ್ಟ್ 22:"ಈದ್ ಅಲ್ ಆಧಾ ಆಚರಿಸುತ್ತಿರುವ ನನ್ನೆಲ್ಲಾ ಸ್ನೇಹಿತರಿಗೆ ಈದ್ ಮುಬಾರಕ್. ನಿಮ್ಮ ಎಲ್ಲಾ ಪ್ರಾರ್ಥನೆ ನೆರವೇರಲಿ. ಶಾಂತಿ, ಸಂಭ್ರಮ, ಸಂತೋಷ ನಿಮ್ಮೆಲ್ಲರ ಮನೆಗಳಿಂದ ಎಂದಿಗೂ ದೂರವಾಗದಿರಲಿ..." ಹಾಗೆಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಗುರುದಾಸ್ ಕಾಮತ್ ಅವರಿಗೆ ಅದೇ ತಮ್ಮ ಕೊನೆಯ ಟ್ವೀಟ್ ಎಂಬ ಊಹೆಯೂ ಇರಲಿಲ್ಲ!

ಆದರೆ ವಿಧಿಬರಹ ಘೋರ. ಅವರು, 'ಶಾಂತಿ ಎಲ್ಲೆಲ್ಲೂ ನೆಲೆಸಲಿ' ಎಂದು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಶ್ವತ ಶಾಂತಿ ಪಡೆದಿದ್ದಾರೆ. ಹೌದು, 63 ವರ್ಷ ವಯಸ್ಸಿನ ಗುರುದಾಸ್ ಕಾಮತ್ ಇನ್ನಿಲ್ಲ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುರುದಾಸ್ ಕಾಮತ್ ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ರಾಜ್ಯ ಬಿಜೆಪಿ ನಾಯಕರು ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ರಾಜ್ಯ ಬಿಜೆಪಿ ನಾಯಕರು

63 ವರ್ಷ ವಯಸ್ಸಿನ ಕಾಮತ್ ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು ಬಕ್ರೀದ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಆರೋಗ್ಯವಂತರಾಗಿಯೇ ಇದ್ದ ಕಾಮತ್ ಅವರು ಇದ್ದಕ್ಕಿದ್ದಂತೇ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದು, ಅವರ ನಿಧನಕ್ಕೆ ಕಾಂಗ್ರೆಸ್ಸಿನ ನಾಯಕರು ಸೇರಿದಂತೆ ದೇಶದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ದೆಹಲಿಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಾಮತ್ ಅವರ ಅಂತಿಮ ದರ್ಶನ ಪಡೆದರು.

Senior Congress leader Gurudas Kamat passes away

ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕಾಮತ್, 2009 ರಿಂದ 2011 ರವರೆಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮೃತರು ಪತ್ನಿ ಮಹಾರೂಖ್ ಕಾಮತ್ ಮತ್ತು ಪುತ್ರ ಡಾ.ಸುನಿಲ್ ಕಾಮತ್ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

English summary
Senior Congress leader and former union minister Gurudas Kamat passed away on Wednesday at a private hospital in New Delhi. He was 63. He has tweeted Bakrid wishes few hours before his death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X