ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ; ಮೋದಿಗೆ ಪತ್ರ ಬರೆದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

|
Google Oneindia Kannada News

ನವದೆಹಲಿ, ಮಾರ್ಚ್ 21: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಲಹೆ ನೀಡಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

17 ದೇಶಗಳು ಮತ್ತು ಎರಡು ಕೇಂದ್ರ ಬ್ಯಾಂಕುಗಳು ಘೋಷಿಸಿರುವ ಕ್ರಮಗಳನ್ನು ಒಟ್ಟುಗೂಡಿಸಿ ಪತ್ರ ಬರೆದಿರುವ ಸ್ವಾಮಿ "ಕೊರೊನಾ ಸಂಬಂಧ ಈ ಹಂತದಲ್ಲಿ ಆರ್ಥಿಕ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡುವುದು ಬಹಳ ನಿರ್ಣಾಯಕವಾಗಿದೆ. ಮತ್ತು ಅದಕ್ಕಾಗಿಯೇ ನಿಮ್ಮ ಮಾಹಿತಿ ಮತ್ತು ಮೌಲ್ಯಮಾಪನಕ್ಕಾಗಿ ಇತರ ದೇಶಗಳು ಏನು ಮಾಡಿವೆ ಎಂಬುದನ್ನು ನಾನು ಲಗತ್ತಿಸಿದ್ದೇನೆ" ಎಂದಿದ್ದಾರೆ

Coronavirus: ಕ್ವಾರಂಟೈನ್ ನಿಯಮ ಮುರಿದ ಮೇರಿ ಕೋಮ್Coronavirus: ಕ್ವಾರಂಟೈನ್ ನಿಯಮ ಮುರಿದ ಮೇರಿ ಕೋಮ್

ಭಾರತದ ಆರ್ಥಿಕತೆಯ ಮೇಲೆ ಕೊರೊನಾ ವೈರಸ್ ಬಿಕ್ಕಟ್ಟಿನ ಕುಸಿತವನ್ನು ಎದುರಿಸಲು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ವಿಮಾನಯಾನ ಮತ್ತು ಆತಿಥ್ಯ, ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಂತಹ ಕೆಟ್ಟ ಪೀಡಿತ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸಚಿವಾಲಯಗಳೊಂದಿಗೆ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರೂ, ಕಾರ್ಯಪಡೆ ಇನ್ನೂ ಕೆಲಸ ಪ್ರಾರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Senior BJP Leader Subramanian Swamy Letter To PM Modi Ahead Of Coronavirus Panic

ಭಾರತದಲ್ಲಿ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಇದುವರೆಗೆ 283 ಜನರು ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

English summary
Senior BJP Leader Subramanian Swamy Letter To PM Modi Ahead Of Coronavirus Panic. he demand for special package for Coronavirus crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X