ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಮುಖ್ಯಸ್ಥರಾಗಿ ಮನೋಜ್ ಮುಕುಂದ ನರವಾನೆ

|
Google Oneindia Kannada News

ನವದೆಹಲಿ, ಜನವರಿ 1: ಜನರಲ್ ಬಿಪಿನ್ ರಾವತ್ ನಿರ್ಗಮನದ ನಂತರ ಭಾರತೀಯ ಸೇನಾ ಮುಖ್ಯಸ್ಥರಾಗಿ (ಜನರಲ್) ಹಿರಿಯ ಸೇನಾಧಿಕಾರಿ ಮನೋಜ್ ಮುಕುಂದ ನರವಾನೆ ನೇಮಕಗೊಂಡಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಇವರು ಭಾರತೀಯ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಚೀಫ್‌ ಡಿಫೆನ್ಸ್‌ ಸ್ಟಾಫ್ ಹುದ್ದೆಗೆ ನಿವೃತ್ತಿ ನಿಯಮ ಅಂತಿಮಚೀಫ್‌ ಡಿಫೆನ್ಸ್‌ ಸ್ಟಾಫ್ ಹುದ್ದೆಗೆ ನಿವೃತ್ತಿ ನಿಯಮ ಅಂತಿಮ

28 ನೇ ಜನರಲ್ ಆಗಿರುವ ಮನೋಜ್ ಮುಕುಂದ ನರವಾನೆ ಅವರು ಜನವರಿ 1 ರಂದು ಅಧಿಕಾರ ವಹಿಸಿಕೊಂಡರು. 'ದೊಡ್ಡ ಜವಾಬ್ದಾರಿ ನೀಡಿರುವುದು ದೇಶ ನನಗೆ ನೀಡಿರುವ ಗೌರವ ಎಂದುಕೊಳ್ಳುತ್ತೇನೆ. ಕಠಿಣ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ನಮ್ಮ ಸೈನಿಕರ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ನಾನು ಹೆಚ್ಚು ಗಮನ ಹರಿಸುತ್ತೇನೆ. ಈಗ ಅದಕ್ಕೆ ಸಮಯ ಕೂಡಿ ಬಂದಿದೆ ಎಂದು' ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Senior Army Officer Manoj Mukund Naravane Takes Charge As Army General

ಭಾರತೀಯ ಸೇನೆಯಲ್ಲಿ ಸತತ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮನೋಜ್ ಮುಕುಂದ ನರವಾನೆ, ಈ ಮೊದಲು ಲೆಪ್ಟಿನಂಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ರೀಲಂಕಾ ಹಾಗೂ ಮಯನ್ಮಾರ್ ನಲ್ಲಿ ಶಾಂತಿ ಸ್ಥಾಪನೆ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ನಾಯಕರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಲು ಇವರ ಪ್ರಯತ್ನ ಗಮನ ಸೆಳೆದಿತ್ತು. ಡಿ.31 ರಂದು ಜನರಲ್ ಹುದ್ದೆಯಿಂದ ನಿವೃತ್ತಿಗೊಂಡ ಬಿಪಿನ್ ರಾವತ್ ಅವರು ಇನ್ಮುಂದೆ ಮೂರೂ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಕಾರ್ಯನಿರ್ವಹಿಸಲಿದ್ದಾರೆ.

English summary
Senior Army Officer Manoj Mukund Naravane takes charge as Chief of Army Staff. (General). He is the 28th Chief of Army Staff for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X