ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣದಲ್ಲಿದೆ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 19: ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಶನಿವಾರ 1133 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಕಳೆದ ವಾರ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು.

24 ಗಂಟೆಗಳಲ್ಲಿ 25,153 ಹೊಸ ಪ್ರಕರಣ ದಾಖಲು24 ಗಂಟೆಗಳಲ್ಲಿ 25,153 ಹೊಸ ಪ್ರಕರಣ ದಾಖಲು

ಇದನ್ನು ನೋಡಿದರೆ ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಮುಕ್ತಾಯವಾದಂತೆ ಕಾಣುತ್ತಿದೆ. ದೆಹಲಿಯಲ್ಲಿ ನಿತ್ಯ 90 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ದೆಹಲಿಯಲ್ಲೇ ಅತಿ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ.

Seems Third Covid Wave Brought Under Control In Delhi: Arvind Kejriwal

ನವೆಂಬರ್‌ನಲ್ಲಿ ನಿತ್ಯ 8600ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೂ ಹೆಚ್ಚಿನ ಆತಂಕವಾಗಲಿಲ್ಲ, ಯಾಕೆಂದರೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆಯೂ ಇತ್ತು. ಇಂದು 1133 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ನವೆಂಬರ್ 11ರಂದು 8589 ಪ್ರಕರಣಗಳು ಪತ್ತೆಯಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ 25,153 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 10,004,599ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಶುಕ್ರವಾರ 347 ಮಂದಿ ಸೋಂಕಿತರು ವೈರಸ್‌ನಿಂದ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,45,136ಕ್ಕೆ ತಲುಪಿದೆ.

ದೇಶದಲ್ಲಿ ಇದುವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ತಗ್ಗಿದೆ.

700ಕ್ಕೂ ಅಧಿಕ ಜಿಲ್ಲೆಗಳಿರುವ ಭಾರತದಲ್ಲಿ ಅರ್ಧದಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ 47 ಜಿಲ್ಲೆಗಳಲ್ಲಿಯೇ ವರದಿಯಾಗಿವೆ.

English summary
Delhi appears to have cleared the third wave of the coronavirus pandemic, Chief Minister Arvind Kejriwal said Saturday, as the city reported 1,133 new cases, far below a peak of over 8,000 last month, and a positivity rate of less than 1.5 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X