ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಿತ್ ದೋವಲ್ ಮನೆ ಭದ್ರತಾ ಲೋಪ: 3 SSG ಕಮಾಂಡೋ ವಜಾ

|
Google Oneindia Kannada News

ನವದೆಹಲಿ, ಆಗಸ್ಟ್ 18: ರಾಷ್ಟ್ರೀಯ ಭದ್ರತಾ ಸಲಹೆಗಾರ(NSA) ಅಜಿತ್ ದೋವಲ್ ಅವರ ನವದೆಹಲಿಯ ನಿವಾಸದಲ್ಲಿ ನಡೆದಿದ್ದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಮೂವರು ಸಿಐಎಸ್ಎಫ್ SSG ಕಮಾಂಡೋಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 2022ರ ಫೆಬ್ರವರಿ ತಿಂಗಳಿನಲ್ಲಿ ವ್ಯಕ್ತಿಯೊಬ್ಬ ದೋವಲ್ ಮನೆಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾಗ ಈ ಮೂವರು ಕಮ್ಯಾಂಡೋಗಳು ಕರ್ತವ್ಯ ನಿರತರಾಗಿದ್ದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಸಚಿವರ ಶ್ರೇಣಿಯ ಭದ್ರತೆ ಇದ್ದು, ಸಿಐಎಸ್ಎಫ್‌ನ SSG ಕಮ್ಯಾಂಡೋ, ದೆಹಲಿ ಪೊಲೀಸರು ಅವರ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.ವಿಐಪಿಗಳಿಗೆ ಸಿಗುವ ಝಡ್ ಪ್ಲಸ್ ಸೆಕ್ಯುರಿಟಿಯನ್ನು ಅಜಿತ್ ದೋವಲ್ ಹೊಂದಿದ್ದಾರೆ.

2022ರ ಫೆಬ್ರವರಿ 16ರಂದು ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಕೆಂಪು ಬಣ್ಣದ SUV ಮೂಲಕ ವೇಗವಾಗಿ ಚಲಿಸುತ್ತಾ ಅಜಿತ್ ದೋವಲ್ ಮನೆಗೆ ನುಗ್ಗಲು ಯತ್ನಿಸಿದ್ದ, ಆದರೆ, ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದರು. ಆರೋಪಿಯನ್ನು ಶಂತನು ರೆಡ್ಡಿ ಎಂದು ಗುರುತಿಸಲಾಗಿತ್ತು,ನೋಯ್ಡಾದಿಂದ SUV ಬಾಡಿಗೆಗೆ ಪಡೆದು ದೆಹಲಿಗೆ ಬಂದಿದ್ದ, ಅಜಿತ್ ದೋವಲ್ ಮನೆಗೆ ನುಗ್ಗಲು ವಿಫಲ ಯತ್ನ ನಡೆಸಿ ಸಿಕ್ಕಿಬಿದ್ದಿದ್ದ.

Security breach at NSA Ajit Dovals residence: Three SSG commandos dismissed

ದೆಹಲಿ ಪೊಲೀಸ್ ವಿಶೇಷ ವಿಭಾಗದ ಸಿಬ್ಬಂದಿಗಳು ವ್ಯಕ್ತಿಯ ವಿಚಾರಣೆ ನಡೆಸಿದ್ದರು. ಆರೋಪಿ ಮಾನಸಿಕವಾಗಿ ಅಸ್ವಸ್ಥ ಎಂದು ಪೊಲೀಸರು ವರದಿ ನೀಡಿದ್ದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ಕೂಡಾ ಈ ಬಗ್ಗೆ ತನಿಖೆ ನಡೆಸಿ, ತನ್ನ ಸಿಬ್ಬಂದಿಯ ಭದ್ರತಾ ವೈಫಲ್ಯವು ಸಾಬೀತಾಗಿರುವುದನ್ನು ಉಲ್ಲೇಖಿಸಿ ವರದಿ ನೀಡಿತ್ತು. ಜೊತೆಗೆ ಮೂವರು ಕಮಾಂಡೋಗಳನ್ನು ವಜಾಗೊಳಿಸಲು ಸೂಚಿಸಿತ್ತು.

ವಿಶೇಷ ಭದ್ರತಾ ಗುಂಪಿನ (ಎಸ್‌ಎಸ್‌ಜಿ) ಮೂವರು ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ವಿವಿಐಪಿ ಭದ್ರತಾ ಘಟಕದ ಮುಖ್ಯಸ್ಥರಾಗಿರುವ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಕೌಶಿಕ್ ಗಂಗೂಲಿ ಮತ್ತು ಅವರ ಎರಡನೇ ಕಮಾಂಡ್, ಹಿರಿಯ ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ನವದೀಪ್ ಸಿಂಗ್ ಹೀರಾ ಅವರನ್ನು ವಜಾಗೊಳಿಸಲಾಗಿದೆ. ಇಬ್ಬರ ಬದಲಿ ಅಧಿಕಾರಿಗಳನ್ನು ಇತ್ತೀಚೆಗೆ ಎಸ್‌ಎಸ್‌ಜಿಗೆ ನಿಯೋಜಿಸಲಾಗಿದೆ.

English summary
Security breach at NSA Ajit Doval's New Delhi residence: Three SSG commandos dismissed from service, two senior officers transferred
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X