ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 8ಕ್ಕೆ ಕೊರೊನಾ ಲಸಿಕೆಯ ಎರಡನೇ ಡ್ರೈ ರನ್

|
Google Oneindia Kannada News

ನವದೆಹಲಿ, ಜನವರಿ 06: ಕೊರೊನಾ ಲಸಿಕೆಯ ಸಾಮೂಹಿಕ ಕಾರ್ಯಕ್ರಮಕ್ಕೆ ಸಿದ್ಧತೆಯ ಭಾಗವಾಗಿ ಇದೇ ಜನವರಿ 2ರಂದು ಎಲ್ಲಾ ರಾಜ್ಯಗಳಲ್ಲಿ ಲಸಿಕೆಗಳ ಡ್ರೈರನ್ ನಡೆಸಲಾಗಿದೆ. ಮತ್ತೊಂದು ಸುತ್ತಿನ ತಯಾರಿಗೆಂದು ಜನವರಿ 8ರಂದು ಎರಡನೇ ಬಾರಿ ಡ್ರೈ ರನ್ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸೂಚಿಸಿದೆ.

ಕೊರೊನಾ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದೊಂದಿಗೆ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. ಉತ್ತರ ಪ್ರದೇಶ ಹಾಗೂ ಹರಿಯಾಣ ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಎರಡನೇ ಬಾರಿ ಲಸಿಕಾ ಕಾರ್ಯಕ್ರಮದ ಪೂರ್ವಾಭ್ಯಾಸ ನಡೆಸಬೇಕಾಗಿ ಆರೋಗ್ಯ ಸಚಿವಾಲಯದ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರಾದ್ಯಂತ ಶನಿವಾರ ಕೋವಿಡ್-19 ಲಸಿಕೆಯ ಡ್ರೈ ರನ್: ಏನೆಂದು ತಿಳಿಯಿರಿರಾಷ್ಟ್ರಾದ್ಯಂತ ಶನಿವಾರ ಕೋವಿಡ್-19 ಲಸಿಕೆಯ ಡ್ರೈ ರನ್: ಏನೆಂದು ತಿಳಿಯಿರಿ

"ಲಸಿಕಾ ಕಾರ್ಯಕ್ರಮದ ಪರಿಣಾಮಕಾರಿ ನಿರ್ವಹಣೆಗೆ ತಯಾರಿಯಾಗಿ ರಾಜ್ಯಗಳ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನವರಿ 8ರಂದು ಎರಡನೇ ಬಾರಿ ಪೂರ್ವಾಭ್ಯಾಸ ನಡೆಸಲಾಗುತ್ತಿದೆ" ಎಂದು ತಿಳಿಸಿದೆ.

Second Covid 19 Dry Run Will Be Conducted On January 8

ಈ ಬಗ್ಗೆ ಜನವರಿ 7ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸಭೆ ನಡೆಸಿ ಚರ್ಚೆ ಮಾಡುವುದಾಗಿ ತಿಳಿದುಬಂದಿದೆ. ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಪೂರ್ವಾಭ್ಯಾಸ ಕಾರ್ಯಕ್ರಮ ನಡೆಯಬೇಕಾಗಿದ್ದು, ಲಸಿಕಾ ಕಾರ್ಯಕ್ರಮದ ಯೋಜನೆ ಹಾಗೂ ಅದರ ಅನುಷ್ಠಾನಕ್ಕೆ ಅವರೇ ಹೊಣೆ ಎಂದು ತಿಳಿಸಲಾಗಿದೆ.

ಕಳೆದ ವಾರವಷ್ಟೇ ಡಿಸಿಜಿಐ, ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಜನವರಿ 2ರಂದು ಮೊದಲ ಪೂರ್ವಾಭ್ಯಾಸ ನಡೆಸಿದ್ದು, 125 ಜಿಲ್ಲೆಗಳ 28 ಸೆಷನ್ ಗಳನ್ನು ಈ ಕಾರ್ಯಕ್ರಮದಲ್ಲಿ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಸಿಕೆಗಳು ಲಭ್ಯವಾಗಲಿದ್ದು, ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಹಾಗೂ ಕೊರೊನಾ ಸೋಂಕಿನ ಹೋರಾಟದಲ್ಲಿ ಮುನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿದುಬಂದಿದೆ.

ಕೊರೊನಾ ರೋಗಿಗಳೊಂದಿಗೆ, ಮಧುಮೇಹ, ಹೃದಯ ಸಮಸ್ಯೆಗಳನ್ನು ಒಳಗೊಂಡು ಇತರೆ ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆಗಳಿರುವ 50 ವರ್ಷದ ಒಳಗಿನವರಿಗೂ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿದುಬಂದಿದೆ.

Recommended Video

ಎರಡನೇ ಪಂದ್ಯದಲ್ಲಿ ಆದ ಎಡವಟ್ಟಿನಿಂದ ಬುದ್ದಿ ಕಲಿತ Australia | Oneindia Kannada

English summary
India to hold Second covid-19 vaccine dry run on Jan 8, union health minister Harshavardhan will brief state health ministers on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X