ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!

|
Google Oneindia Kannada News

ನವದೆಹಲಿ, ಏಪ್ರಿಲ್ 04: ವಿಶ್ವದಾದ್ಯಂತ 11 ಲಕ್ಷಕ್ಕೂ ಅಧಿಕ ಮಂದಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ. 59 ಸಾವಿರಕ್ಕೂ ಹೆಚ್ಚು ಜನ ಕೋವಿಡ್-19 ನಿಂದ ಜೀವ ಕಳೆದುಕೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಪ್ರಮಾಣ ಮತ್ತು ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವಾಗಲೇ ಒಂದು ಆಘಾತಕಾರಿ ಅಂಶ ಬಯಲಾಗಿದೆ.

ಡೆಡ್ಲಿ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ವಿಜ್ಞಾನಿಗಳು ಆಘಾತಕಾರಿ ವಿಷಯ ಬಹಿರಂಗ ಪಡಿಸಿದ್ದಾರೆ. ಉಸಿರಾಡುವಾಗ ಮತ್ತು ಮಾತನಾಡುವಾಗಲೂ ಕೊರೊನಾ ವೈರಸ್ ಹಬ್ಬುವ ಸಾಧ್ಯತೆ ಇದೆ ಎಂದು ಈಗ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO! ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

ಉಸಿರಾಟದ ಹನಿಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು. ಆದ್ರೀಗ, ಕೋವಿಡ್-19 ಹಬ್ಬಲು ಮಾತು ಅಥವಾ ಉಸಿರಾಡಿದರೂ ಸಾಕು.!

ಹುಷಾರು.. ಹುಷಾರು..

ಹುಷಾರು.. ಹುಷಾರು..

ಮಾತನಾಡುವಾಗ ಮತ್ತು ಉಸಿರಾಡುವಾಗ ಕೊರೊನಾ ವೈರಸ್ ಗಾಳಿಯಲ್ಲಿ ಸುಲಭವಾಗಿ ಹರಡುತ್ತಿದೆ. ಹೀಗಾಗಿ, ಕೋವಿಡ್-19 Airborne ಇರಬಹುದು. ಜನ ಉಸಿರನ್ನು ಹೊರ ಹಾಕಿದಾಗ, ಗಾಳಿಯಲ್ಲಿ ವೈರಸ್ ಗಳು ಸೇರಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೀಮಿತ ಸಂಶೋಧನೆ

ಸೀಮಿತ ಸಂಶೋಧನೆ

ಗಾಳಿಯಲ್ಲಿ ಕೊರೊನಾ ವೈರಸ್ ಹಬ್ಬುವ ಕುರಿತು ನಡೆದಿರುವ ಸಂಶೋಧನೆಗಳು ಸೀಮಿತವಾಗಿದ್ದು, ಲಭ್ಯವಿರುವ ಅಧ್ಯಯನಗಳ ಪ್ರಕಾರ, ವೈರಸ್ ಗಳು ಗಾಳಿಯಿಂದ ಹಬ್ಬುತ್ತದೆ ಎಂದು ನ್ಯಾಷನಲ್ ಅಕಾಡೆಮಿಕ್ಸ್ ಆಫ್ ಸೈನ್ಸಸ್, ಎಂಜಿನಿಯರಿಂಗ್ ಅಂಡ್ ಮೆಡಿಸಿನ್ ನ ಮುಖ್ಯಸ್ಥ ಡಾ.ಹಾರ್ವೆ ಫಿನ್ಬರ್ಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತಕ್ಕೆ ಅಪಾಯ

ಭಾರತಕ್ಕೆ ಅಪಾಯ

ವಾಯುವಿನಿಂದ ಕೊರೊನಾ ವೈರಸ್ ಹರಡುವುದು ದಿಟವೇ ಆಗಿದ್ದರೆ, ಭಾರತಕ್ಕೆ ದೊಡ್ಡ ಅಪಾಯ ಕಾದಿದೆ. ಯಾಕಂದ್ರೆ, ಮುಂಬೈನಂತಹ ನಗರಗಳಲ್ಲಿ ಅದರಲ್ಲೂ ಧಾರಾವಿಯಂಥ ದೊಡ್ಡ ಕೊಳಗೇರಿ ಪ್ರದೇಶದಲ್ಲಿ ವಾಯುಗಾಮಿ ವೈರಸ್ ಗಳಿಂದ ಈಗಾಗಲೇ ಹಲವರು ನರಳುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ

ಕೊರೊನಾ ವೈರಸ್ ಹೆಚ್ಚು ಗಂಟೆಗಳ ಕಾಲ ಗಾಳಿಯಲ್ಲಿ ಬದುಕಬಲ್ಲದು ಎಂದು ಅಧ್ಯಯನದಿಂದ ತಿಳಿದುಬಂದ ಮೇಲೆ, ವೈದ್ಯಕೀಯ ವೃತ್ತಿಪರರು Airborne precautions ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು.

ಉಸಿರಾಟದ ಹನಿಗಳ ಮೂಲಕ ಹರಡುತ್ತದೆ

ಉಸಿರಾಟದ ಹನಿಗಳ ಮೂಲಕ ಹರಡುತ್ತದೆ

ಸೋಂಕು ಪೀಡಿತ ರೋಗಿಗಳಿಗೆ Intubation (ಉಸಿರಾಟಕ್ಕೆ ಸಹಕಾರಿಯಾಗುವ ಹಾಗೆ ರೋಗಿಯ ಗಂಟಲೊಳಗೆ ಟ್ಯೂಬ್ ಹಾಕುವುದು) ನಂತಹ ಕಾರ್ಯವಿಧಾನ ಮಾಡುವಾಗ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಯಾಕಂದ್ರೆ, ವೈರಸ್ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತವೆ. ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ ಈ ಹಿಂದೆ ತಿಳಿಸಿದ್ದರು.

English summary
Scientists say Coronavirus could spread through Talking and Breathing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X