ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆಐ ಕ್ಲೀನ್‌ ಚಿಟ್‌ಗೆ ದೂರುದಾರ ಮಹಿಳೆ ಅಸಮಾಧಾನ

|
Google Oneindia Kannada News

ನವದೆಹಲಿ, ಮೇ 7: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಗೆ ಸುಪ್ರೀಂಕೋರ್ಟ್ ಆಂತರಿಕ ಸಮಿತಿ ಕ್ಲೀನ್ ಚಿಟ್ ನೀಡಿರುವುದಕ್ಕೆ ದೂರುದಾರ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

''ಕ್ಲೀನ್‌ಚಿಟ್‌ನಿಂದ ತೀವ್ರ ಬೇಸರವಾಗಿದೆ, ಖಿನ್ನತೆಗೆ ಒಳಗಾಗಿದ್ದೇನೆ'' ಎಂದು ಪ್ರತಿಕ್ರಿಯಿಸಿದ್ದಾಳೆ.ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ನೇತೃತ್ವದ ಆಂತರಿಕ ಸಮಿತಿ ಸಿಜೆಐಗೆ ಕ್ಲೀನ್ ಚಿಟ್ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ದೂರುದಾರ ಮಹಿಳೆ ನಾನು ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ.

ಲೈಂಗಿಕ ಕಿರುಕುಳ ಆರೋಪ: ಸಿಜೆಐ ರಂಜನ್‌ ಗೊಗೊಯ್‌ಗೆ ಕ್ಲೀನ್‌ಚಿಟ್ ಲೈಂಗಿಕ ಕಿರುಕುಳ ಆರೋಪ: ಸಿಜೆಐ ರಂಜನ್‌ ಗೊಗೊಯ್‌ಗೆ ಕ್ಲೀನ್‌ಚಿಟ್

ಪ್ರಭಾವಿಗಳನ್ನು ಎದುರಿಸಿ ನಿಂತಾಗ ನಮ್ಮ ವ್ಯವಸ್ಥೆಯು ಸಾಮಾನ್ಯರಿಗೆ ನ್ಯಾಯ ಕೊಡುತ್ತದೆ ಎನ್ನುವುದು ಸುಳ್ಳಾಗಿದೆ ಎಂದು ಹೇಳಿಕೊಂಡಿದ್ದಾಳೆ.ಇದಕ್ಕೂ ಮುನ್ನ ವಿಚಾರಣೆ ಆರಂಭದಲ್ಲಿಯೇ ತನ್ನ ದೂರನ್ನು ಈ ಮಹಿಳೆ ಹಿಂಪಡೆದಿದ್ದಳು. ಆಂತರಿಕ ಸಮಿತಿಯು ತನಗೆ ನ್ಯಾಯ ದೊರಕಿಸುತ್ತಿಲ್ಲ, ವಿಚಾರಣೆ ಏಕಮುಖವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಳು.

Scared Dejected Says Ex-Staffer after CJI clean chit

ಆಂತರಿಕ ಸಮಿತಿ ಮುಂದೆ ಹಾಜರಾಗಿದ್ದ ಸಿಜೆಐ ದುರುದ್ದೇಶಪೂರ್ವಕವಾಗಿ ದೂರು ನೀಡಲಾಗಿದೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ, ಕೆಲ ಪ್ರಮುಖ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವಂತೆ ಮಾಡಲು ಷಡ್ಯಂತ್ರ ರಚಿಸಲಾಗಿದೆ ಗಂಭೀರ ಆರೋಪ ಮಾಡಿದ್ದರು.

English summary
The Supreme Court’s in-house committee has cleared Chief Justice Ranjan Gogoi of sexual harassment allegations raised by a former employee, saying it found “no substance” in the woman’s complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X