ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೀದಿಗೆ ಮಹಿಳೆಯರ ಪ್ರವೇಶ: 'ಶಬರಿಮಲೆ'ಗಾಗಿ ವಿಚಾರಣೆಗೆ ಅಸ್ತು ಎಂದ SC!

|
Google Oneindia Kannada News

ನವದೆಹಲಿ, ಏಪ್ರಿಲ್ 16: "ಶಬರಿಮಲೆ ತೀರ್ಪಿನ ಕಾರಣಕ್ಕಾಗಿ ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನೂ ತಾನು ಕೈಗೆತ್ತಿಕೊಳ್ಳುತ್ತೇನೆ" ಎಂದು ಸುಪ್ರೀಂ ಕೋರ್ಟ್ ದ್ವಂದ್ವಾತ್ಮಕ ಹೇಳಿಕೆ ನೀಡಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಈ ಕುರಿತು ತಾನು ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ್ದು, "ನಾವು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವುದಕ್ಕೆ ಕಾರಣ ಶಬರಿಮಲೆ ತೀರ್ಪು..." ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಶಬರಿಮಲೆ ದೇವಲಾಯಕ್ಕೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದ್ವಂದ್ವ ಹೇಳಿಕೆ

ದ್ವಂದ್ವ ಹೇಳಿಕೆ

"ಮತ್ತೊಬ್ಬ ಮನುಷ್ಯ ನಿಮ್ಮನ್ನು ಸಮಾನತೆಯಿಂದ ಕಾಣಬೇಕು ಎಂದು ಬೇಡಿಕೆ ಇಡುತ್ತೀರಾ? ಅದು ವೈಯಕ್ತಿಕವಾಗಿಯೂ ಅನ್ವಯವಾಗುತ್ತದೆಯಾ? ಮತ್ತೊಬ್ಬ ವ್ಯಕ್ತಿಯಿಂದ ಸಮಾನತೆಯನ್ನು ಗೋಗರೆದು ಪಡೆಯಬೇಕೆ? ಯಾವುದೇ ರಾಜ್ಯ ಸಮಾನತೆಯ ಹಕ್ಕನ್ನು ಹತ್ತಿಕ್ಕುವುದಿಲ್ಲ. ಆದರೆ ಚರ್ಚ್ ಅಥವಾ ಮಸೀದಿ ಒಂದು ರಾಜ್ಯವೇ? ಯಾರಾದರೂ ನೀವು ತಮ್ಮ ಮನೆಗೆ ಬರುವುದನ್ನು ತಡೆದರೆ, ಅಥವಾ ಬೇಡವೆಂದರೆ ನೀವು ಆಗ ಪೊಲೀಸರನ್ನು ಕರೆಯುತ್ತೀರಾ?" ಎಂದು ಕೋರ್ಟು ಪ್ರಶ್ನಿಸಿದೆ. ಆದರೆ ಇದೇ ಮಾತು ಶಬರಿಮಲೆಗೆ ಏಕೆ ಅನ್ವಯವಾಗುವುದಿಲ್ಲ ಎಂಬುದು ಶಬರಿಮಲೆ ಅಯ್ಯಪ್ಪ ಭಕ್ತರ ಪ್ರಶ್ನೆ.

ಮೂಲಭೂತ ಹಕ್ಕು

ಮೂಲಭೂತ ಹಕ್ಕು

ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶಿಸಿ, ನಮಾಜ್ ಮಾಡುವುದಕ್ಕೆ ಅವಕಾಶ ನೀದಿರುವುದು ಅವರ ಮೂಲಭೂತ ಹಕ್ಕನ್ನೇ ಕಸಿದಂತೆ. ಆದ್ದರಿಂದ ಸಂವಿಧಾನ ನೀಡಿದ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡಬೇಕು ಎಂದು ಓರ್ವ ದಂಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತ್ತು.

ಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗ

ಖುರಾನ್ ನಲ್ಲಿ ಅದರ ಉಲ್ಲೇಖವಿಲ್ಲ

ಖುರಾನ್ ನಲ್ಲಿ ಅದರ ಉಲ್ಲೇಖವಿಲ್ಲ

ಖುರಾನ್ ನಲ್ಲಾಗಲೀ, ಪ್ರವಾದಿ ಮೊಹಮ್ಮದ್ದರಾಗಲೀ ಎಲ್ಲಿಯೂ ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಬಾರದು ಎಂದು ಹೇಳಿಲ್ಲ. ಹೀಗಿರುವಾಗ ಅವರನ್ನು ಮಸೀದಿಯಿಂದ ದೂರವಿಡುವುದು ಮತ್ತು ಅವರು ಮಸೀದಿಗೆ ಬಂದು ಪ್ರಾರ್ಥಿಸುವುದಕ್ಕೆ ಅವಕಾಶ ನೀಡದಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

ಎಲ್ಲೆಲ್ಲಿ ಪ್ರವೇಶ

ಎಲ್ಲೆಲ್ಲಿ ಪ್ರವೇಶ

ಸದ್ಯಕ್ಕೆ ಜಮಾತ್-ಇ-ಇಸ್ಲಾಮಿ ಹಾಗೂ ಮುಜಾಹಿದ್ ಗೆ ಸೇರಿದ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಆದರೆ ಸುನ್ನಿ ಪಂಗಡಕ್ಕೆ ಸೇರಿದ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಕೆಲವು ಮಸೀದಿಗಳಲ್ಲಿ ಮಾತ್ರ ಮಹಿಳೆಯರು ಪ್ರವೇಶಿಸಿ, ನಮಾಜ್ ಮಾಡಬಹುದು. ಅಲ್ಲೂ ಮಹಿಳೆಯರಿಗೇ ಪ್ರವೇಶಕ್ಕೆ ಬೇರೆ ದ್ವಾರವಿರುತ್ತದೆ!

ಹೊಸ ಮೈಲಿಗಲ್ಲು ನಿರ್ಮಿಸಿದ 2018 ರ ಸುಪ್ರೀಂ ಐತಿಹಾಸಿಕ ತೀರ್ಪುಗಳುಹೊಸ ಮೈಲಿಗಲ್ಲು ನಿರ್ಮಿಸಿದ 2018 ರ ಸುಪ್ರೀಂ ಐತಿಹಾಸಿಕ ತೀರ್ಪುಗಳು

English summary
The Supreme Court of India said it is ready to hear a public interest litigation (PIL) seeking permission for Muslim women to enter and offer namaz inside mosques, only because of 'Sabarimala'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X