ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದ ವಿವಾದ: ಶುಕ್ರವಾರ ಸುಪ್ರೀಂಕೋರ್ಟ್ ತೀರ್ಪು

By ವಿಕ್ಕಿ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 13: ವಿವಾದದ ಜೊತೆ ತೀವ್ರ ಕುತೂಹಲ ಕೆರಳಿಸಿರುವ ರಫೇಲ್ ಒಪ್ಪಂದದ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸಲಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ಕಳೆದ ತಿಂಗಳು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ನೇತೃತ್ವದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ರಫೇಲ್ ಹಗರಣದ ತನಿಖೆ: ಕಾಂಗ್ರೆಸ್ ಆನ್‌ಲೈನ್ ಅಭಿಯಾನಕ್ಕೆ ಸಹಿ ಹಾಕ್ತೀರಾ?ರಫೇಲ್ ಹಗರಣದ ತನಿಖೆ: ಕಾಂಗ್ರೆಸ್ ಆನ್‌ಲೈನ್ ಅಭಿಯಾನಕ್ಕೆ ಸಹಿ ಹಾಕ್ತೀರಾ?

ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದರ ಬಗ್ಗೆ ನ್ಯಾಯಾಲಯ ನಿಗಾವಣೆಯಲ್ಲಿ ತನಿಖೆ ನಡೆಸಬೇಕೆಂಬ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ಶುಕ್ರವಾರ ಪರಿಶೀಲಿಸಲಿದೆ.

SC verdict on Rafale deal tomorrow

ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯು ರಿಲಯನ್ಸ್ ಜೊತೆ ಮಾಡಿಕೊಂಡಿರುವ ಒಪ್ಪಂದದ ಮಾಹಿತಿ ಬಿಡುಗಡೆಗೆ ಕೋರಿ ಒಂದು ಅರ್ಜಿ ಸಲ್ಲಿಕೆಯಾಗಿದೆ.

ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್

ವಕೀಲ ಎಂಎಲ್ ಶರ್ಮಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ರಫೇಲ್ ಜೆಟ್ ಹಗರಣದಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಒಪ್ಪಂದಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ.

ರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

36 ರಫೇಲ್ ವಿಮಾನಗಳನ್ನು ಖರೀದಿಸುವ ಅಂತರ್ ಸರ್ಕಾರಿ ಒಪ್ಪಂದವು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಮತ್ತು ಅದು 223ನೇ ವಿಧಿ ಪ್ರಕಾರ ಸಂಸತ್ ಅನುಮೋದನೆ ಪಡೆದುಕೊಳ್ಳದ ಕಾರಣ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಶರ್ಮಾ ಮನವಿ ಮಾಡಿದ್ದಾರೆ.

English summary
The Supreme Court will deliver its verdict in the Rafale case tomorrow. The court had reserved its verdict in the Rafale Deal case last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X