ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಮೇ 6: ಭ್ರೂಣ ಲಿಂಗ ಪತ್ತೆ ಮಾಡುವ ಕುರಿತು ಮತ್ತೆ ನಿಷೇಧ ಕುರಿತ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯ ಸೆಕ್ಷನ್ 23(1),(2)ನ್ನು ಪ್ರಶ್ನಿಸಿ ಫೆಡರೇಷನ್ ಆಫ್ ಅಬ್‌ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಿತ್ತು. ಕಾನೂನಿನಲ್ಲಿನ ಅಂಶಗಳು ವೈದ್ಯರಿಗೆ ಕಿರುಕುಳ ನೀಡುತ್ತಿದೆ. ಇ

ದರಿಂದ ಪ್ರಾಮಾಣಿಕವಾಗಿ ವೃತ್ತಿ ಮುಂದುವರಿಸುವುದು ಕಷ್ಟವಾಗುತ್ತಿದೆ ಎಂದು ಸಂಘ ಅಳಲು ತೋಡಿಕೊಂಡಿತ್ತು. ಆದರೆ ಅರ್ಜಿಯನ್ನು ತಿರಸ್ಕರಿಸಿರುವ ನ್ಯಯಮೂರ್ತಿ ಅರುಣ್‌ ಮಿಶ್ರಾ ಹಾಗೂ ನ್ಯಾಯಮೂರ್ತಿ ವಿನೀತ್‌ ಸರಣ್ ನೇತೃತ್ವದ ನ್ಯಾಯಪೀಠ, ಕಾಯ್ದೆಯಲ್ಲಿನ ಕಠಿಣ ನಿಯಮಗಳ ಅಗತ್ಯತೆಯನ್ನು ಸಾರಿದೆ.

SC upholds Constitutionality of provisions of Prohibition of sex Selection Act

ಕಾಯ್ದೆ ಜಾರಿಯಾದ 24 ವರ್ಷಗಳಲ್ಲಿ ಕೇವಲ 4202ಪ್ರಕರಣಗಳ ದಾಖಲಾಗಿದ್ದು, 586 ಶಿಕ್ಷೆಗಳಾಗಿವೆ. ಇದು ಕಾಯ್ದೆ ಅನುಷ್ಠಾನದಲ್ಲಿ ಸರ್ಕಾರಕ್ಕೆ ಸಮಸ್ಯೆ ಆಗುತ್ತಿರುವುದನ್ನು ತಿಳಿಸುತ್ತದೆ.

ಕಾಯ್ದೆಯಲ್ಲಿ ಹೇಳಿರುವ ಕೆಲ ಮಾಹಿತಿ ಸಂಗ್ರಹ ಕಡ್ಡಾಯ. ಅರ್ಜಿ ನಮೂನೆ ಎಫ್‌ನಲ್ಲಿರುವ ಅಂಶಗಳು ಸಮರ್ಪಕವಾಗಿವೆ. ಕಾಯ್ದೆಯು ಲಿಂಗ ಗುರುತು ನಿಷೇಧಿಸಲು ರೂಪಿತವಾಗಿದೆ. ಇದಕ್ಕಾಗಿ ಕೆಲ ಕಠಿಣ ನಿಯಮ ಸೇರಿಸಲಾಗಿದ್ದು, ಇದರ ಅಗತ್ಯವೂ ಇದೆ. ಹೀಗಾಗಿ ಅರ್ಜಿದಾರರ ವಾದ ಒಪ್ಪಲು ಅಸಾಧ್ಯ ಎಂದು ಕೋರ್ಟ್‌ ಹೇಳಿದೆ.

English summary
The Supreme Court has upheld the Constitutional validity of Sections 23(1) and 23(2) of Pre­conception and Pre­natal Diagnostic Techniques (Prohibition of sex Selection) Act, 1994 (Act).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X