ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.5 ರವರೆಗೆ ED ಯಿಂದ ಬಂಧನ ಭೀತಿಯಿಲ್ಲ, ಪಿ.ಚಿದಂಬರಂಗೆ ತಾತ್ಕಾಲಿಕ ರಿಲೀಫ್

|
Google Oneindia Kannada News

ನವದೆಹಲಿ, ಆಗಸ್ಟ್ 29: ಜಾರಿ ನಿರ್ದೇಶನಾಲಯ(ED)ವು ತಮ್ಮನ್ನು ಬಂಧಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ಸೆ.5 ಕ್ಕೆ ಕಾಯ್ದಿರಿಸಿದೆ.

ಈ ಮೂಲಕ ಜಾರಿ ನಿರ್ದೇಶನಾಲಯದಿಂದ ಸೆಪ್ಟೆಂಬರ್ 5 ರವರೆಗೆ ಪಿ. ಚಿದಂಬಂರಂ ಬಂಧನಕ್ಕೊಳಗಾಗುವಂತಿಲ್ಲ. ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ವಶದಲ್ಲಿರುವ ಚಿದಂಬರಂ ಅವರು ಜಾರಿ ನಿರ್ದೇಶನಾಲಯದಿಂದ ತಾವು ಬಂಧನಕ್ಕೊಳಗಾಗುವ ಭೀತಿಯಿಂದ ತಪ್ಪಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿರುವುದರಿಂದ ಅವರಿಗೆ ED ಬಂಧನ ಭೀತಿಯಿಂದ ತಾತ್ಕಾಲಿಕ ರಿಲೀಪ್ ದೊರೆತಂದಾಗಿದೆ.

ಕಳೆದ ವಾರದಿಂದ ಪಿ.ಚಿದಂಬರಂ ಅವರು ಸಿಬಿಐ ವಶದಲ್ಲಿದ್ದಾರೆ. ಜಾರಿ ನಿರ್ದೇಶನಾಲಯವು ದಾಖಲಿಸಿರುವ ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅವರನ್ನು ಬಂಧಿಸಲು ಉದ್ದೇಶಿಸಿತ್ತು. ಆದರೆ ಸುಪ್ರೀಂ ಕೋರ್ತ್ ಆದೇಶವನ್ನು ಕಾಯ್ದಿರಿಸಿರುವುದರಿಂದ ಇಡಿಗೆ ಹಿನ್ನಡೆಯಾದಂತಾಗಿದೆ.

Recommended Video

ಪಾಪದ ಕೊಡ ತುಂಬಿ ಮೈತ್ರಿ ಸರ್ಕಾರ ಬಿದ್ದಿದೆ: ಕೆಎನ್ ರಾಜಣ್ಣ
SC To Decide P Chidambarams Appeal Protection from Arrest By ED On Sep 5

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮನ್ನು 'ಕಿಂಗ್‌ಪಿನ್' ಎಂದು ಸಂಬೋಧಿಸಿರುವುದಲ್ಲದೆ, ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದೇನೆ ಎಂದು ಹೇಳುವ ಮೂಲಕ ದೆಹಲಿ ಹೈಕೋರ್ಟ್ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಚಿದಂಬರಂ ಸುಪ್ರೀಂಕೋರ್ಟ್ ನಲ್ಲಿ ಅರೋಪಿಸಿದ್ದರು.

English summary
Supreme Court will be taken decision on former Union Minister P Chidambaram's appeal seeking protection from arrest by ED on Sep 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X