ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಸಂತ್ರಸ್ತೆಗೆ 26 ವಾರಗಳ ನಂತರ ಗರ್ಭಪಾತ? ವರದಿ ಕೇಳಿದ ಸುಪ್ರೀಂ

|
Google Oneindia Kannada News

ನವದೆಹಲಿ, ಮಾರ್ಚ್ 02: ಹದಿನಾಲ್ಕು ವರ್ಷದ ಅತ್ಯಾಚಾರ ಸಂತ್ರಸ್ತೆಗೆ, ಗರ್ಭಧಾರಣೆಯ 26 ವಾರಗಳ ನಂತರ ಗರ್ಭಪಾತ ಮಾಡುವುದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹರಿಯಾಣದ ಕರ್ನಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯು ವೈದ್ಯಕೀಯ ಸಮಿತಿ ರಚಿಸಬೇಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಸಿಜೆಐ ಎಸ್‌.ಎ.ಬೊಬ್ಡೆ, ಎ.ಎಸ್.ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಮೂವರು ವೈದ್ಯರನ್ನೊಳಗೊಂಡ ವೈದ್ಯಕೀಯ ಸಮಿತಿ ರಚಿಸಬೇಕು ಹಾಗೂ ಬಾಲಕಿಗೆ 26 ವಾರಗಳ ನಂತರ ಗರ್ಭಪಾತ ಮಾಡುವುದು ಸುರಕ್ಷಿತವೇ ಎಂದು ವಿಶ್ಲೇಷಣೆ ನಡೆಸಿ ಶುಕ್ರವಾರದ ಒಳಗೆ ವರದಿ ನೀಡಬೇಕು ಎಂದು ಆದೇಶಿಸಿದೆ.

Explainer: ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020Explainer: ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020

ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿ ಅರ್ಜಿ ಸಲ್ಲಿಸಿದ್ದಾಳೆ. ಹರಿಯಾಣದ 14 ವರ್ಷದ ಬಾಲಕಿ ತನ್ನ ಸೋದರ ಸಂಬಂಧಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದು, ಗರ್ಭಿಣಿಯಾಗಿದ್ದಾಳೆ. ಆದರೆ ಗರ್ಭಧಾರಣೆಯಿಂದ ಮಗು ಹಾಗೂ ಬಾಲಕಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಗೋಚರಿಸುತ್ತಿದ್ದು, ಬಾಲಕಿ ಮಾನಸಿಕ ಸಮಸ್ಯೆಗೂ ಒಳಗಾಗುವ ಸಾಧ್ಯತೆಯಿದೆ ಎಂದು ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

SC Ordered To Set Up Medical Board Over Abortion After 26 weeks For Rape Victim

ವೈದ್ಯಕೀಯ ಗರ್ಭಪಾತ ಕಾಯ್ದೆಯ 3 (2) (b) ಸೆಕ್ಷನ್ ಪ್ರಕಾರ, ನ್ಯಾಯಾಲಯದ ಸಮ್ಮತಿಯಿಲ್ಲದೇ 20 ವಾರಗಳ ನಂತರ ಗರ್ಭಪಾತ ಮಾಡುವುದು ನಿಷೇಧಿತ. ಶುಕ್ರವಾರದ ಒಳಗೆ ಈ ಸಂಬಂಧ ಉತ್ತರ ನೀಡಬೇಕೆಂದು ಹರಿಯಾಣ ಸರ್ಕಾರಕ್ಕೂ ನ್ಯಾಯಾಲಯ ನೋಟಿಸ್ ನೀಡಿದೆ.

English summary
Supreme court ordered haryana hospital to set up medical board to examine the feasibility of termination of 14 year old rape survivor’s pregnancy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X