ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನನಷ್ಟ ಮೊಕದ್ದಮೆ : ಸ್ಮೃತಿ ಇರಾನಿಗೆ ಸುಪ್ರೀಂಕೋರ್ಟಿನಿಂದ ನೋಟಿಸ್

|
Google Oneindia Kannada News

ನವದೆಹಲಿ, ಏಪ್ರಿಲ್ 22: ಕಿರುತೆರೆಯ ಮಾಜಿ ಸ್ಟಾರ್, ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಕಾರ್ಯದರ್ಶಿ ಸಂಜಯ್ ನಿರುಪಮ್ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣ ಮತ್ತೊಮ್ಮೆ ಸುದ್ದಿಯಲ್ಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸ್ಮೃತಿ ಅವರ ಹಿನ್ನೆಲೆ ಬಗ್ಗೆ ಹೇಳ ಹೊರಟ ಸಂಜಯ್ ಅವರು "Till some time ago you were dancing on TV screens and now you have become a psephologist." ಎಂದು ಹೇಳಿ ನಗಾಡಿದ್ದರು.

ಸ್ಮೃತಿ ಇರಾನಿ ಬಗ್ಗೆ 'ಸೆಕ್ಸಿ' ಹೇಳಿಕೆಗೆ ಖಂಡನೆ ಸ್ಮೃತಿ ಇರಾನಿ ಬಗ್ಗೆ 'ಸೆಕ್ಸಿ' ಹೇಳಿಕೆಗೆ ಖಂಡನೆ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದನ್ನು ಸಹಿಸದೆ ಈ ರೀತಿ ಹೇಳಿಕೆ ನೀಡುವ ಸದಸ್ಯರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಅಗ್ರಹಿಸಿತ್ತು. ಕಾಂಗ್ರೆಸ್ ನಲ್ಲೂ ನಿರುಪಮ್ ಅವರ ಹೇಳಿಕೆ ವಿರುದ್ಧ ಕೂಗು ಎದ್ದಿದೆ. ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧುರಿ ಮಾತನಾಡಿ, ಸಂಜಯ್ ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಈ ರೀತಿ ಮನಸ್ಥಿತಿ ಅನೇಕ ಪುರುಷರಲ್ಲಿ ಇದೆ ಇದರ ವಿರುದ್ಧ ಹೋರಾಟ ಅಗತ್ಯ ಎಂದಿದ್ದರು.

SC issues notice to Smriti Irani on Sanjay Nirupams plea

ಮಾಜಿ ಸಂಸದ ಸಂಜಯ್ ನಿರುಪಮ್ ವಿರುದ್ಧ ಸ್ಮೃತಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯವು ಸಂಜಯ್ ನಿರುಪಮ್ ಗೆ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ವಜಾಗೊಳಿಸುವಂತೆ ಕೋರಿ ಸಂಜಯ್ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು(ಏಪ್ರಿಲ್ 22) ಸ್ಮೃತಿ ಇರಾನಿಗೆ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿರುವ ನ್ಯಾಯಪೀಠವು, ಈ ಪ್ರಕರಣದ ಬಗ್ಗೆ ಸ್ಮೃತಿ ಅವರಿಂದ ಸ್ಪಷ್ಟನೆ ಕೇಳಿದೆ.ಸಂಜಯ್ ನಿರುಪಮ್ ಅವರು ಸ್ಮೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ಈ ಪ್ರಕರಣದಲ್ಲಿ ಸ್ಮೃತಿ ವಿರುದ್ಧ ಜಾರಿಗೊಂಡಿದ್ದ ಸಮನ್ಸ್ ಅನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

English summary
The Supreme Court on Monday has issued notice to BJP leader Smriti Irani on an appeal of Congress leader Sanjay Nirupam seeking to set aside the summons issued against him by a trial court in a criminal defamation complaint filed by Irani, th ANI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X