ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BREAKING: ಹೈಕೋರ್ಟ್ ಅನುಮತಿ ಇಲ್ಲದೆ ಸಂಸದರು, ಶಾಸಕರ ವಿರುದ್ಧದ ಕೇಸ್‌ ಹಿಂಪಡೆಯುವುದಕ್ಕೆ ಸುಪ್ರೀಂ ಬ್ರೇಕ್‌

|
Google Oneindia Kannada News

ನವದೆಹಲಿ, ಆ.10: ಸಂಬಂಧಿತ ರಾಜ್ಯದ ಹೈಕೋರ್ಟ್ ಅನುಮತಿಯಿಲ್ಲದೆ ಸಂಸದರು ಮತ್ತು ಶಾಸಕರ ವಿರುದ್ಧದ ಯಾವುದೇ ಮೊಕದ್ದಮೆಯನ್ನು ಹಿಂಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸುವ ಮೂಲಕ ಮಹತ್ವದ ಆದೇಶ ನೀಡಿದೆ.

ವಿಶೇಷ ನ್ಯಾಯಾಲಯಗಳಲ್ಲಿ ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶದವರೆಗೆ ತಮ್ಮ ಪ್ರಸ್ತುತ ಹುದ್ದೆಗಳಲ್ಲಿ ಮುಂದುವರಿಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. ಈ ನಿರ್ದೇಶನವು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ನಿವೃತ್ತಿ ಅಥವಾ ಮರಣಕ್ಕೆ ಒಳಪಟ್ಟಿರುತ್ತದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ವಿನೀತ್ ಶರಣ್‌ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಸಂಸದರು ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಮತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮನವಿಯನ್ನು ಆಲಿಸುವಾಗ ಈ ನಿರ್ದೇಶನವನ್ನು ನೀಡಿದೆ.

SC Bars Withdrawal Of Criminal Prosecution Against MPs/MLAs Without Permission Of HC

"ಪ್ರಕರಣಗಳ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 321 ರ ಅಡಿಯಲ್ಲಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ ಎಂಬುವುದು ಮೊದಲ ವಿಷಯವಾಗಿದೆ. ನಮ್ಮ ಶಾಸನಗಳ ಪ್ರಕಾರ ಸುಮೋಟೋ ಪ್ರಕರಣದಲ್ಲಿ ಹೈಕೋರ್ಟ್‌ನ ಒಪ್ಪಿಗೆ ಇಲ್ಲದೆ ಎಂಪಿ ಎಂಎಲ್‌ಎ ವಿರುದ್ಧದ ಯಾವುದೇ ಮೊಕದ್ದಮೆಯನ್ನು ಹಿಂಪಡೆಯಬಾರದು ಎಂದು ನಿರ್ದೇಶಿಸುವುದು ನಮ್ಮ ಸೂಕ್ತ ಆದೇಶ," ಎಂದು ನ್ಯಾಯಾಲಯ ನಿರ್ದೇಶಿಸಿದೆ.

"ಬಾಕಿ ಇರುವ ಪ್ರಕರಣಗಳ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಲು, ಈ ನ್ಯಾಯಾಲಯವು ವಿಶೇಷ ನ್ಯಾಯಾಲಯಗಳ ಅಧ್ಯಕ್ಷ ಅಧಿಕಾರಿಗಳನ್ನು ನಿರ್ದೇಶಿಸುವುದು ಅಗತ್ಯವಾಗಿದೆ. ಹಾಗೆಯೇ ಸಿಬಿಐ ನ್ಯಾಯಾಲಯಗಳು ಎಂಪಿ ಶಾಸಕರ ವಿಚಾರಣೆಯಲ್ಲಿ ತೊಡಗಿದ್ದು ಮುಂದಿನ ಆದೇಶದವರೆಗೆ ತಮ್ಮ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ನಿರ್ದೇಶಿಸುವುದು ಅಗತ್ಯವಾಗಿದೆ. ನ್ಯಾಯಾಂಗ ಅಧಿಕಾರಿಗಳನ್ನು ತಡೆಯುವ ಈ ನ್ಯಾಯಾಲಯದ ಇಂತಹ ನಿರ್ದೇಶನವು ಅವರ ನಿವೃತ್ತಿ ಅಥವಾ ಮರಣಕ್ಕೆ ಒಳಪಟ್ಟಿರುತ್ತದೆ,"ಎಂದು ಪೀಠ ಹೇಳಿದೆ.

ಅಗತ್ಯವಿದ್ದಲ್ಲಿ, ನ್ಯಾಯಾಧೀಶರ ವರ್ಗಾವಣೆಯ ವಿರುದ್ಧ ಈ ಷರತ್ತು ಸಡಿಲಿಕೆ ಕೋರಿ ಅರ್ಜಿಗಳನ್ನು ಸಲ್ಲಿಸಲು ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ಪೀಠವು ಸ್ವಾತಂತ್ರ್ಯವನ್ನು ನೀಡಿದೆ.

ಹೈಕೋರ್ಟ್‌ನ ಸಮ್ಮತಿ ಇಲ್ಲದೆ ಸಂಸತ್ ಸದಸ್ಯ ಅಥವಾ ಶಾಸಕಾಂಗ ಸಭೆ/ ಕೌನ್ಸಿಲ್ (ಹಾಲಿ ಮತ್ತು ಮಾಜಿ) ಸದಸ್ಯರ ವಿರುದ್ಧ ಸೆಕ್ಷನ್ 321 ಸಿಆರ್ ಪಿಸಿ ಅಡಿಯಲ್ಲಿ ಯಾವುದೇ ಪ್ರಾಸಿಕ್ಯೂಶನ್ ಅನ್ನು ಹಿಂಪಡೆಯಲು ಅನುಮತಿಸಬಾರದು ಎಂದು ಅಮಿಕಸ್ ಕ್ಯೂರಿಯ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಪೀಠವು ಈ ನಿರ್ದೇಶನವನ್ನು ನೀಡಿದೆ.

ಅಮಿಕಸ್ ಕ್ಯೂರಿ ವಕೀಲೆ ಸ್ನೇಹಾ ಕಲಿತಾರ ಸಹಾಯದೊಂದಿಗೆ ಸಿದ್ಧಪಡಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹಾಗೆಯೇ ಪ್ರಕರಣ ಹಿಂಪಡೆಯಲು ಯತ್ನ ನಡೆಯುತ್ತಿರುವ ಹಾಗೂ ಪ್ರಕರಣ ಹಿಂಪಡೆಯಲು ಯತ್ನ ನಡೆಸುತ್ತಿರುವ ಕೆಲವು ಪ್ರಕರಣಗಳನ್ನು ಉಲ್ಲೇಖ ಮಾಡಿದ್ದಾರೆ.

ಯುಪಿ ರಾಜ್ಯವು ಶಾಸಕರಾದ ಸಂಗೀತ ಸೋಮ್, ಸುರೇಶ್ ರಾಣಾ, ಕಪಿಲ್ ದೇವ್, ಸಾಧ್ವಿ ಪ್ರಾಚಿ ಅವರ ಮುಜಾಫರ್‌ ನಗರ ಗಲಭೆಗೆ ಸಂಬಂಧಿಸಿದ ಪ್ರಕರಣಗಳ ಆರೋಪಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. 2020 ರ ಆಗಸ್ಟ್‌ 31 ರಂದು ಕರ್ನಾಟಕ ರಾಜ್ಯ ಸರ್ಕಾರವು 61 ಪ್ರಕರಣಗಳನ್ನು ಹಿಂಪಡೆಯಲು ಸೂಚನೆಗಳನ್ನು ನೀಡಿದೆ, ಅವುಗಳಲ್ಲಿ ಹಲವು ರಾಜ್ಯ ವಿಧಾನಸಭೆಯ ಚುನಾಯಿತ ಪ್ರತಿನಿಧಿಗಳ ವಿರುದ್ದದ ಪ್ರಕರಣವಾಗಿದೆ. 2019 ಡಿಸೆಂಬರ್ 31ಕ್ಕಿಂತ ಮೊದಲು ನೋಂದಾಯಿಸಲಾದ ಕಾರ್ಯಕರ್ತರ ವಿರುದ್ಧದ ರಾಜಕೀಯ ಪ್ರಕರಣಗಳನ್ನು ಮಹಾರಾಷ್ಟ್ರ ರಾಜ್ಯವು ಹಿಂಪಡೆಯುತ್ತಿದೆ ಎಂದು ವರದಿಯಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಸಿಜೆಐ ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಅಮಿಕಸ್ ಕ್ಯೂರಿ ವಕೀಲ ವಿಜಯ್ ಹನ್ಸಾರಿಯಾ ಶುಕ್ರವಾರ ತುರ್ತು ವಿಚಾರಣೆಯ ಕೋರಿಕೆಯನ್ನು ಸಲ್ಲಿಸಿದ ನಂತರ ಪ್ರಸ್ತುತ ವಿಷಯವನ್ನು ಇಂದು ಪಟ್ಟಿ ಮಾಡಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Supreme Court Bars Withdrawal Of Criminal Prosecution Against MPs/MLAs Without Permission Of High Court of the concerned state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X