ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೂ ಮುನ್ನ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

By Mahesh
|
Google Oneindia Kannada News

ನವದೆಹಲಿ, ಅಕ್ಟೋಬರ್ 09 : ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೆಹಲಿ ಹಾಗೂ ಎನ್ ಸಿ ಆರ್ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ನವೆಂಬರ್ 01ರ ತನಕ ಈ ಆದೇಶ ಜಾರಿಯಲ್ಲಿರಲಿದೆ.

ನವೆಂಬರ್ 2016ರ ಸುಪ್ರೀಂಕೋರ್ಟ್ ಆದೇಶವನ್ನು ಮತ್ತೊಮ್ಮೆ ಪಾಲಿಸುವಂತೆ ಮಾರಾಟಗಾರರಿಗೆ ಸುಪ್ರೀಂಕೋರ್ಟ್ ಸೋಮವಾರ(ಅಕ್ಟೋಬರ್ 09) ದಂದು ನಿರ್ದೇಶಿಸಿದೆ.

SC bans sale of firecrackers in Delhi-NCR till November 01

ಅಕ್ಟೋಬರ್ 19 ರಂದು ದೀಪಾವಳಿ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ, ಪರಿಸರ ಮಾಲಿನ್ಯದಿಂದ ತತ್ತರಿಸಿರುವ ದೆಹಲಿ ಹಾಗೂ ಎನ್ ಸಿ ಆರ್ ಪ್ರದೇಶದಲ್ಲಿ ಪಟಾಕಿ ಸದ್ದು, ಹೊಗೆ ಕಾಣಿಸದಂತೆ ನಿರ್ಬಂಧ, ನಿಷೇಧ ಜಾರಿಯಲ್ಲಿದೆ.

ನವೆಂಬರ್ 11, 2016 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಪಟಾಕಿ ಮಾರಾಟಗಾರರು(ರೀಟೈಲ್ ಹಾಗೂ ಹೋಲ್ ಸೇಲ್) ಪಟಾಕಿ ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ಮಾರಾಟ ಲೈಸನ್ಸ್ ಹಕ್ಕು ರದ್ದಾಗಲಿದೆ. ಜತೆಗೆ ದಂಡ ಕೂಡಾ ತೆರಬೇಕಾಗುತ್ತದೆ.

English summary
The Supreme Court has brought back the November 2016 ban on sale of firecrackers in the Delhi-NCR region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X