ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್‌ ಗೆ ಸುಪ್ರೀಂ ಚಾಟಿಏಟು?

By Nayana
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ನ್ಯಾಯಾಲಯದಲ್ಲಿ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸುವುದನ್ನು ನೋಡಿದ್ದೇವೆ ಆದರೆ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಯನ್ನು ವಾಟ್ಸಪ್ ಮೂಲಕ ನಡೆಸಿದ ಅಧೀನ ನ್ಯಾಯಾಲಯದ ಕ್ರಮವನ್ನು ಸುಪ್ರೀಂಕೋರ್ಟ್ ಖಂಡಿಸಿದೆ.

ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವುದು ಹೇಗೆ? ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವುದು ಹೇಗೆ?

ಜಾರ್ಖಂಡ್ ನ ಮಾಜಿ ಸಚಿವ ಯೋಗೇಂದ್ರ ಸಾವೋ ಅವರ ಪತ್ನಿ ಈಗಿನ ಶಾಸಕಿ ನಿರ್ಮಲಾ ದೇವಿ ಅವರನ್ನೊಳಗೊಂಡ ವ್ಯಾಜ್ಯವೊಂದು ಹಜಾರಿಬಾಗ್ ನ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಬಂದಿತ್ತು. ಆರೋಪಿಗಳಿಗೆ ವಾಟ್ಸಪ್ ಕರೆ ಮಾಡುವ ಮೂಲಕ ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ನ್ಯಾಯಾಧೀಶರು ಅನುಮತಿ ನೀಡಿದ್ದರು.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ? ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

2016ರಲ್ಲಿ ದಾಖಲಾದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ವರ್ಷ ಅವರಿಗೆ ಉನ್ನತ ನ್ಯಾಯಾಲಯ ‍ರತ್ತು ಬದ್ಧ ಜಾಮೀನು ನೀಡಿತ್ತು, ಆರೋಪಿಗಳು ಭೋಪಾಲ್ ನಲ್ಲೇ ಇರಬೇಕು ಮತ್ತು ಕೋರ್ಟ್ ವಿಚಾರಣೆಗೆ ಹಾಜರಾಗಲೇಬೇಕು ಎಂದು ತಿಳಿಸಿತ್ತು.

SC anguish over trail court hearing through WhatsApp

ಈಗ ತಮ್ಮ ವಿರುದ್ಧ ವಾಟ್ಸಪ್ ಮೂಲಕ ಆರೋಪಪಟ್ಟಿ ದಾಖಲಿಸಿದ್ದನ್ನು ಆಕ್ಷೇಪಿಸಿ ಇಬ್ಬರು ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎ. ಬೋಡ್ಬೆ ಮತ್ತು ಎಲ್ ಎನ್ ರಾವ ಅವರ ಪೀಠ, ವಾಟ್ಸಪ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಮಾಡುವ ಹಂತಕ್ಕೆ ಬಂದಿದ್ದೇವೆ, ಇದು ಯಾವ ಬಗೆಯ ವಿಚಾರಣೆ, ಇದೇನು ತಮಾಷೆಯೇ ಎಂದು ತರಾಟೆಗೆ ತೆಗೆದುಕೊಂಡಿತು.

English summary
Supreme court has expressed displeasure with trail court in Jarkhand which conducted hearing through WhatsApp and asked whether the court was joking with judicial system in a criminal case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X