ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳಗ್ಗೆ ಕೂಡ 2 ಗಂಟೆ ಪಟಾಕಿ ಸಿಡಿಸಬಹುದು: ಸುಪ್ರೀಂ

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ದಕ್ಷಿಣದ ರಾಜ್ಯಗಳಲ್ಲಿ ದೀಪಾವಳಿಯಂದು ಬೆಳಗ್ಗೆ ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸಬಹುದು ಎಂದು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆಯಾ ರಾಜ್ಯ ಸರಕಾರಗಳು ಬೇಕಾದರೆ ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಎರಡು ಗಂಟೆಯ ಅವಧಿ ಮೀರುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು? ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ಬೆಳಗ್ಗೆ ಹಾಗೂ ಸಂಜೆ ತಲಾ ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಕು ಎಂದು ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಅನ್ನು ಮನವಿ ಮಾಡಿತ್ತು. "ದೆಹಲಿಯಲ್ಲಿರುವ ದಕ್ಷಿಣ ಭಾರತೀಯರೊಬ್ಬರಿಗೆ ಬೆಳಗಿನ ವೇಳೆ ಪಟಾಕಿ ಸಿಡಿಸಲು ಅನುಮತಿ ನೀಡಲ್ಲ ಅನ್ನೋದಾದರೆ, ಅದೇ ನಿಯಮ ದಕ್ಷಿಣ ಭಾರತದಲ್ಲಿ ವಾಸಿಸುವ ಉತ್ತರ ಭಾರತೀಯರಿಗೂ ಅನ್ವಯಿಸಬೇಕು" ಎಂದು ಕೋರ್ಟ್ ಹೇಳಿತ್ತು.

SC allows all southern states to burst crackers for 2 hours on Deepavali morning

ಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧ ಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧ

ಕಡಿಮೆ ಹೊಗೆ ಉಗುಳುವ ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆ ಮಧ್ಯೆ ಮಾತ್ರ ಸಿಡಿಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಕೋರ್ಟ್ ಹೇಳಿತ್ತು. ಇನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ 35 ನಿಮಿಷಗಳು ಮಾತ್ರ, ಅಂದರೆ ರಾತ್ರಿ 11.55ರಿಂದ 12.30 ತನಕ ಮಾತ್ರ ಪಟಾಕಿ ಸಿಡಿಸಬಹುದು ಎಂದು ಅನುಮತಿ ನೀಡಿತ್ತು.

English summary
The Supreme Court on Tuesday allowed all southern India states to burst crackers for two hours on Deepavali morning. The top court added that if the states want they can scatter the timings but must not breach the 2-hour window.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X