ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿರ್ವಹಣೆ: ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ಮೇ 13ಕ್ಕೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಮೇ 10: ತಾಂತ್ರಿಕ ದೋಷದಿಂದಾಗಿ ಕೊರೊನಾ ನಿರ್ವಹಣೆ ಕುರಿತಂತೆ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿರುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯನ್ನು ತಾಂತ್ರಿಕ ತೊಂದರೆಗಳು ಸ್ಥಗಿತಗೊಳಿಸುವ ಮೊದಲು, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುದ್ದಿ ವರದಿಯನ್ನು ಉಲ್ಲೇಖಿಸಿ, ನ್ಯಾಯಪೀಠದ ಇಬ್ಬರು ನ್ಯಾಯಾಧೀಶರು ಸೋಮವಾರ ಬೆಳಗ್ಗೆ ಕೇಂದ್ರದ ಅಫಿಡವಿಟ್ ಪಡೆದರು ಎಂದು ತಿಳಿಸಿದರು.

ಲಾಕ್ ಡೌನ್ ವಿರುದ್ಧ ಗ್ರಾಮೀಣ ಭಾಗದಲ್ಲಿ ದಂಗೆಯಾಗಲಿದೆ: ಸಿದ್ದರಾಮಯ್ಯ ಲಾಕ್ ಡೌನ್ ವಿರುದ್ಧ ಗ್ರಾಮೀಣ ಭಾಗದಲ್ಲಿ ದಂಗೆಯಾಗಲಿದೆ: ಸಿದ್ದರಾಮಯ್ಯ

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠವು ನಮ್ಮ ಸರ್ವರ್ ಇಂದು ಡೌನ್ ಆಗಿದೆ. ನಾವು ನ್ಯಾಯಾಧೀಶರು ನಮ್ಮ ನಡುವೆ ಚರ್ಚೆ ನಡೆಸಿ ಗುರುವಾರ ವಿಚಾರಣೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

SC Adjourns Covid-19 Management Hearing To May 13 Due To Technical G litches

ಏಪ್ರಿಲ್ 30 ರಂದು, ಉನ್ನತ ನ್ಯಾಯಾಲಯವು ರಾಜ್ಯಗಳ ಸಹಯೋಗದೊಂದಿಗೆ ತುರ್ತು ಉದ್ದೇಶಗಳಿಗಾಗಿ ಆಮ್ಲಜನಕದ ಬಫರ್ ಸ್ಟಾಕ್ ಅನ್ನು ಸಿದ್ಧಪಡಿಸುವಂತೆ ಮತ್ತು ಹಂಚಿಕೆ ಸ್ಥಳ ವಿಕೇಂದ್ರೀಕರಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತ್ತು, ಇದರಿಂದಾಗಿ ಆಕ್ಸಿಜನ್ ಸಾಮಾನ್ಯ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡರೆ ಅದು ತಕ್ಷಣ ಲಭ್ಯವಾಗುತ್ತದೆ ಎಂದು ಹೇಳಿತ್ತು.

ಈ ಮಧ್ಯೆ ನ್ಯಾಯಾಧೀಶರು ಕಳೆದ ತಡರಾತ್ರಿ ಸಲ್ಲಿಸಿದ ಕೇಂದ್ರದ ಅಫಿಡವಿಟ್ ಅನ್ನು ಪರಿಶೀಲಿಸಲು ಮತ್ತು ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯ ಪ್ರತಿಕ್ರಿಯೆ ಪಡೆಯಲು ಹೆಚ್ಚಿನ ಸಮಯ ಸಿಗಲಿದೆ ಎಂದು ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಫಿಡವಿಟ್ ಸಲ್ಲಿಸಿದ ನಂತರ ಅದನ್ನು ರಾಜ್ಯಗಳಿಗೆ ಕಳುಹಿಸಲಾಗಿತ್ತು. ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು ಎಂದು ತಿಳಿದುಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದರು.

Recommended Video

ರಾಜ್ಯದಲ್ಲಿ ಇಂದು 31,796 ಸೋಂಕಿತರು ಗುಣಮುಖ, ಮಹಾಮಾರಿ ಅಬ್ಬರಕ್ಕೆ 490 ಮಂದಿ ಬಲಿ! | Oneindia Kannada

English summary
The Supreme Court Monday said it will hear on May 13 the suo motu case on management of COVID-19 on account of technical glitches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X