ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂಗಳಲ್ಲಿ ಶೀಘ್ರ ರೂ.50 ರೂ.20ರೂ. ನೋಟುಗಳು

ಚಿಲ್ಲರೆ ಸಮಸ್ಯೆ ಪರಿಹಾರಕ್ಕಾಗಿ ಇನ್ನು ಮುಂದೆ ಎಟಿಎಂ ಗಳಲ್ಲಿ ರೂ.50 ಹಾಗು ರೂ20 ಮುಖಬೆಲೆಯ ನೋಟುಗಳನ್ನು ಪರಿಚಯಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಮುಂದಾಗಿದೆ.

By Prithviraj
|
Google Oneindia Kannada News

ನವದೆಹಲಿ, ನವೆಂಬರ್, 14: ಚಿಲ್ಲರೆ ಸಮಸ್ಯೆ ಪರಿಹರಿಸಲು ಎಟಿಎಂಗಳ ಮೂಲಕ 50 ಹಾಗೂ 20ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಘೋಷಿಸಿದೆ.

ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ನಂತರ ದೇಶದಾದ್ಯಂತ ಚಿಲ್ಲರೆ ಸಮಸ್ಯೆ ವಿಪರೀತವಾಗಿ ತಲೆದೋರಿರುವುದರಿಂದ ಎಸ್ ಬಿ ಐ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.[ನಾಳೆಯಿಂದ ಎಟಿಎಂಗಳಲ್ಲಿ 2 ಸಾವಿರ ರೂ. ನೋಟು]

SBI brings cheer: ATMs to dispense Rs 50, 20 notes soon

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ ಬಿ ಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಅವರು "ಚಿಲ್ಲರೆ ಸಮಸ್ಯೆ ಪರಿಹಾರಕ್ಕಾಗಿ ಇನ್ನು ಮುಂದೆ ಎಸ್ ಬಿ ಐ ಎಟಿಂಎಂಗಳಲ್ಲಿ 50 ಹಾಗೂ 20 ರೂ ಮುಖಬೆಲೆಯ ನೋಟುಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ಐದು ದಿನದಲ್ಲಿ 83 ಸಾವಿರ ಕೋಟಿ ಸಂಗ್ರಹ

ನೋಟು ನಿಷೇಧ ಕ್ರಮ ಘೋಷಣೆಯಾದ ನಂತರ ಕೇವಲ ಐದು ದಿನಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಒಟ್ಟು 83.702 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದು ಬ್ಯಾಂಕ್ ಘೋಷಿಸಿದೆ.[ಹಳೆ ನೋಟುಗಳ ನಿಷೇಧ ಫೋನ್ ಕೊಳ್ಳುವವರಿಗೆ ವರದಾನ]

ನವೆಂಬರ್ 10ರಿಂದ 14ರ ವರೆಗೆ ಕೇವಲ ನಾಲ್ಕು ದಿನಗಳಲ್ಲಿ 4.146 ಹಳೆ ನಿಷೇಧಿತ ನೋಟುಗಳು ವಿನಿಮಯವಾಗಿವೆ ಎಂದು ಬ್ಯಾಂಕ್ ತಿಳಿಸಿದೆ.

ಸೋಮವಾರ ಗುರುನಾನಕ್ ಜಯಂತಿ ನಿಮಿತ್ತ ಸಾರ್ವತ್ರಿಕ ರಜೆ ಘೋಷಿಸಿದ್ದರಿಂದ ಭಾರತೀಯ ಸ್ಟೇಟ್ ಬ್ಯಂಕ್ ನ ಹಲು ಕಚೇರಿಗಳು ಸೋಮವಾರ ತೆರೆದಿರಲಿಲ್ಲ ಇಲ್ಲದಿದ್ದರೆ ಇನ್ನಷ್ಟು ವಹಿವಾಟು ನಡೆಯುವ ಸಾಧ್ಯತೆ ಇತ್ತು ಎನ್ನಲಾಗಿದೆ.

ನವೆಂಬರ್ 10ರಿಂದ ಒಟ್ಟು 9.342 ಕೋಟಿರೂ. ಹಣವನ್ನು ಗ್ರಾಹಕರು ವಿತ್ ಡ್ರಾ ಮಾಡಿದ್ದಾರೆ. ಕೇವಲ ಎಟಿಎಂ ಗಳ ಮೂಲಕ ಒಟ್ಟು 1,958ಕೋಟಿ ರೂ. ವಿತ್ ಡ್ರಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

English summary
After almost a week of cash deficit, much to the relief of the citizens State Bank of India today announced that Rs 50 and Rs 20 notes too will be dispensed from ATMs soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X