• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ನಿಜಕ್ಕೂ ಅಚ್ಛೇ ದಿನ್ ನೀಡುತ್ತಿದ್ದಾರೆ ಎಂದ ಸೌದಿ ಅರೇಬಿಯಾ

|

ನವದೆಹಲಿ, ಅಕ್ಟೋಬರ್ 16: ಭಾರತದ ತೈಲ ಬೇಡಿಕೆಯ ಹೆಚ್ಚಳಕ್ಕೆ ಅನುಗುಣವಾಗಿ ತೈಲ ಪೂರೈಸಲು ಬದ್ಧವಾಗಿರುವುದಾಗಿ ಹೇಳಿರುವ ಸೌದಿ ಅರೇಬಿಯಾ, ಭಾರತದಲ್ಲಿ ತೈಲ ಮಾರಾಟ ಮತ್ತು ಪೆಟ್ರೋಕೆಮಿಕಲ್ ಉದ್ಯಮಗಳ ಸ್ಥಾಪನೆಗೆ ಭಾರಿ ಪ್ರಮಾಣದ ಹೂಡಿಕೆ ಮಾಡಲು ಆಸಕ್ತಿ ವಹಿಸಿರುವುದಾಗಿ ಹೇಳಿದೆ.

ಸೋಮವಾರ ನಡೆದ ಭಾರತೀಯ ಇಂಧನ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಸೌದಿ ಅರೇಬಿಯಾದ ತೈಲ ಸಚಿವ ಖಾಲಿದ್ ಅಲ್ ಫಾಲಿಹ್, ಸೌದಿಗೆ ಭಾರತದಲ್ಲಿ ವ್ಯವಹಾರ ವಹಿವಾಟುಗಳನ್ನು ನಡೆಸಲು ಇದ್ದ ಅಡೆತಡೆಗಳನ್ನು ಸಡಿಲಿಸುವ ಮೂಲಕ ಸುಗಮ ಹಾದಿ ನಿರ್ಮಿಸಿಕೊಟ್ಟು, 'ಅಚ್ಛೇ ದಿನ್' ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಭಾರತಕ್ಕೆ ನನ್ನ ನಿರಂತರ ಭೇಟಿಯು ಜಾಗತಿಕ ಮಟ್ಟದಲ್ಲಿ ಪ್ರಮುಖ ಪ್ರಭಾವಿ ದೇಶದೊಂದಿಗಿನ ಸೌದಿ ಅರೇಬಿಯಾದ ಬಾಂಧವ್ಯದ ಮಹತ್ವವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ!

ಇರಾನ್ ಮೇಲಿನ ನಿರ್ಬಂಧ ಜಾರಿಯಾಗುತ್ತಿರುವುದರಿಂದ ಭಾರತ ಭಾರಿ ಪ್ರಮಾಣದಲ್ಲಿ ತೈಲದ ಕೊರತೆ ಎದುರಿಸಲಿದೆ. ಆ ಕೊರತೆಯನ್ನು ನೀಗಿಸಲು ಭಾರತಕ್ಕೆ ಎರಡನೆಯ ಅತಿ ದೊಡ್ಡ ತೈಲ ಪೂರೈಕೆದಾರನಾಗಿರುವ ಸೌದಿ ಅರೇಬಿಯಾ ಬದ್ಧವಾಗಿದೆ ಎಂದರು.

ಭಾರತದಲ್ಲಿ ಹೂಡಿಕೆ ಮುಂದುವರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದೇನೆ. ಭಾರತದ ತೈಲ ಬೇಡಿಕೆಯನ್ನು ಪೂರೈಸಲು ಮತ್ತು ಇಲ್ಲಿ ಹೂಡಿಕೆಯನ್ನು ಮುಂದುವರಿಸಲು ನಮ್ಮ ಪೂರ್ಣ ಪ್ರಮಾಣದ ಬದ್ಧತೆಯ ಭರವಸೆಯನ್ನು ನೀಡುತ್ತೇವೆ ಎಂದು ಫಾಲಿಹ್ ತಿಳಿಸಿದರು.

ಶೇ 50ರಷ್ಟು ಷೇರು

ಶೇ 50ರಷ್ಟು ಷೇರು

ಸೌದಿಯ ರಾಷ್ಟ್ರೀಯ ತೈಲ ಕಂಪೆನಿ ಸೌದಿ ಅರಮ್ಕೊ ಮತ್ತು ಅಬುದಾಬಿಯ ರಾಷ್ಟ್ರೀಯ ತೈಲ ಕಂಪೆನಿ (ಎಡಿಎನ್ಓಸಿ) ಜಂಟಿಯಾಗಿ ಪ್ರಸ್ತಾಪಿತ 44 ಬಿಲಿಯನ್ ಡಾಲರ್‌ಗಳಲ್ಲಿ ಶೇ 50ರಷ್ಟು ಹೂಡಿಕೆ ಮಾಡಲಿದ್ದು, ಮಹಾರಾಷ್ಟ್ರದಲ್ಲಿ 60 ಮಿಲಿಯನ್ ಟನ್ ಸಾಮರ್ಥ್ಯದ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಘಟಕದಲ್ಲಿ ಹೂಡಿಕೆ ಮಾಡಲಿದೆ. ಇದು ಭಾರತ-ಸೌದಿ ಅರೇಬಿಯಾದ ಬೆಳೆಯುತ್ತಿರುವ ಬಾಂಧವ್ಯದ ಆರಂಭದ ಉದಾಹರಣೆ ಎಂದರು.

ಸರ್ಕಾರ ಮಾಡಿದ ಕಡಿತವೆಲ್ಲ ವ್ಯರ್ಥ: ಮತ್ತೆ ಏರಿತು ಡೀಸೆಲ್, ಪೆಟ್ರೋಲ್ ಬೆಲೆ

ಇದೊಂದೇ ಅಲ್ಲ, ಇನ್ನೂ ಇವೆ

ಇದೊಂದೇ ಅಲ್ಲ, ಇನ್ನೂ ಇವೆ

ಭಾರತದಲ್ಲಿ ಇದೊಂದೇ ಹೂಡಿಕೆ ಅಲ್ಲ. ಇದು ಆರಂಭ ಮಾತ್ರ. ಸೌದಿ ಅರಮ್ಕೊ ಚಿಲ್ಲರೆ ತೈಲ ಮತ್ತು ಪೆಟ್ರೋಕೆಮಿಕಲ್‌ಗಳಂತಹ ಗ್ರಾಹಕ ಮುಖಿ ವಲಯಗಳಲ್ಲಿಯೂ ಹೂಡಿಕೆ ಮಾಡಲು ಬಯಸಿದೆ. ಭಾರತದಲ್ಲಿ ಸಮಗ್ರ ಮತ್ತು ತಳಮಟ್ಟದ ವ್ಯವಹಾರವನ್ನು ಬೆಳೆಸುವ ಆಸಕ್ತಿ ಜತೆಗೆ, ಭಾರತದಲ್ಲಿನ ಕಚ್ಚಾ ತೈಲ ಸಂಗ್ರಹಾಗಾರಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ತ್ವರಿತ ಹಾಗೂ ಬೇಡಿಕೆಗೆ ತಕ್ಕಂತೆ ಪರಿಣಾಮಕಾರಿ ತೈಲ ಪೂರೈಕೆಗೆ ಬದ್ಧರಾಗಿರುವುದಾಗಿ ಹೇಳಿದರು.

ಅಚ್ಛೇ ದಿನ್ ನಡೆಯುತ್ತಿದೆ

ಅಚ್ಛೇ ದಿನ್ ನಡೆಯುತ್ತಿದೆ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ವ್ಯವಹಾರ ನಡೆಸುವುದು ಈಗ ಸುಲಭವಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಾಗಿದೆ. ಮತ್ತು ಹಣದುಬ್ಬರ ನಿಯಂತ್ರಣದಲ್ಲಿದೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಮೋದಿ ಅವರು ತಮ್ಮ ಭರವಸೆಯಾದ ಅಚ್ಛೇ ದಿನ್‌ಅನ್ನು ಈಡೇರಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಉತ್ತಮ ದಿನಗಳು ನಡೆಯುತ್ತಿವೆ. ನಾವು ಭಾರತದಲ್ಲಿ ಒಳ್ಳೆಯ ದಿನಗಳನ್ನು ನೋಡಲಿದ್ದೇವೆ ಎಂದು ಹೇಳಿದರು.

ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ

ದರ ಕಡಿಮೆ ಮಾಡಿ

ದರ ಕಡಿಮೆ ಮಾಡಿ

ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ತೈಲ ಉತ್ಪಾದನಾ ದೇಶಗಳ ನಡುವೆ ಸಹಕಾರವನ್ನು ಬಯಸಿದರು. ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಸವಾಲುಗಳ ಹೆಚ್ಚಳವನ್ನು ಎದುರಿಸಲು ತೈಲ ಗ್ರಾಹಕ ದೇಶಗಳ ನಡುವೆ ಸೇತು ನಿರ್ಮಿಸಲು ನೆರವಾಗಲಿದೆ ಎಂದು ಹೇಳಿದರು.

ಸೌದಿ ಅರೇಬಿಯಾದಂತಹ ದೇಶಗಳ ಅಧಿಕ ಕಚ್ಚಾ ತೈಲ ಬೆಲೆಯು ಜಾಗತಿಕ ಆರ್ಥಿಕತೆಗೆ ಹೊಡೆತ ನೀಡುತ್ತಿದೆ. ಹೀಗಾಗಿ ಸೂಕ್ತ ಬೆಲೆ ನಿಗದಿ ಮತ್ತು ಸ್ಥಳೀಯ ಕರೆನ್ಸಿಗಳಿಗೆ ತಾತ್ಕಾಲಿಕ ಉಪಶಮನ ನೀಡುವಂತಹ ಪಾವತಿ ನಿಯಮಗಳ ಪರಾಮರ್ಶೆ ಮಾಡುವಂತೆ ಕೋರಿದರು.

ನಮ್ಮ ಕೈಯಲ್ಲಿಲ್ಲ

ನಮ್ಮ ಕೈಯಲ್ಲಿಲ್ಲ

ಭಾರತದಲ್ಲಿ ಹೂಡಿಕೆ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ ಸೌದಿ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಅಥವಾ ಇಳಿಕೆ ಮಾಡುವುದು ತನ್ನ ಕೈಯಲ್ಲಿಲ್ಲ ಎಂದು ಹೇಳಿತು.

ಅನೇಕ ವಿಚಾರಗಳು ನಮ್ಮಂತಹ ತೈಲ ಉತ್ಪಾದಕರ ನಿಯಂತ್ರಣದಾಚೆಗೇ ಇರುತ್ತವೆ. ನಾವು ಪೂರೈಕೆಯನ್ನು ಮಾತ್ರ ನಿಯಂತ್ರಿಸುತ್ತೇವೆ ಎಂದು ಫಾಲಿಹ್ ತಿಳಿಸಿದರು.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saudi Arabia has assured that it is keen to invest in India sector and also committed to supply its required crude oil demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more