ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪರ ಪ್ರಚಾರಕಿಯಾಗಿ ಜನಪ್ರಿಯ ಗಾಯಕಿ, ಡ್ಯಾನ್ಸರ್ ಸಪ್ನಾ

|
Google Oneindia Kannada News

ನವದೆಹಲಿ, ಏಪ್ರಿಲ್ 02: 'ನಾನು ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ, 'ಪ್ರಿಯಾಂಕಾ ಜತೆಗಿನ ಫೋಟೊ ಹಳೆ ಚಿತ್ರವಾಗಿದೆ', ನಾನು ಯಾವ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದಿದ್ದ ಹರ್ಯಾನ್ವಿ ಗಾಯಕಿ, ಡ್ಯಾನ್ಸರ್ ಸಪ್ನಾ ಸೌಧರಿ ಅವರು ಈಗ ಬಿಜೆಪಿ ಪರ ಪ್ರಚಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರನ್ನು ಸೋಲಿಸಲು ಸಪ್ನಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಎಲ್ಲಾ ಗಾಳಿ ಸುದ್ದಿಗಳಿಗೂ ಸಪ್ನಾ ತೆರೆ ಎಳೆದಿದ್ದರು.

ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ : ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ : ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ

ಆದರೆ, ಈಗ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರ ಜೊತೆ ಮಾತುಕತೆ ನಡೆಸಿರುವ ಸಪ್ನಾ ಅವರು ಪಕ್ಷ ಸೇರುವುದಿಲ್ಲ ಆದರೆ, ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವೆ ಎಂಬ ಭರವಸೆ ನೀಡಿದ್ದಾರೆ ಎಂಬ ಮಾಹಿತಿಯಿದೆ. ಈ ನಡುವೆ ಎಎಪಿಯಿಂದ ಮುನಿಸಿಕೊಂಡಿರುವ ಕವಿ ಕುಮಾರ್ ವಿಶ್ವಾಸ್ ಅವರನ್ನು ಸೆಳೆಯಲು ಮನೋಜ್ ತಿವಾರಿ ಯತ್ನಿಸುತ್ತಿದ್ದಾರೆ.

Sapna Chaudhary likely to campaign for BJP after ditching Congress

ಬಿಗ್ ಬಾಸ್ ರಿಯಾಲಿಟಿ ಶೋ 11ರ ಸ್ಪರ್ಧಿಯಾಗಿದ್ದ ಸಪ್ನ ಅವರು ತಮ್ಮ ಹಾಡು, ನೃತ್ಯಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದವರು. 'ತೇರಿ ಅಖ್ಯಾ ಕಾ ಯೋ ಕಾಜಲ್' ಎಂಬ ಹರ್ಯಾನ್ವಿ ಭಾಷೆಯ ಹಾಡು ಅತ್ಯಂತ ಜನಪ್ರಿಯವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಪ್ನಾ ಅವರು ಕೈಜೋಡಿಸಿದರೆ ಜಾತ್, ಪೂರ್ವಾಂಚಲ ಮತದಾರರನ್ನು ಸೆಳೆಯಲು ಅನುಕೂಲವಾಗಲಿದೆ ಎಂಬ ಆಶಯವಿದೆ. ಈಶಾನ್ಯ, ವಾಯವ್ಯ, ದಕ್ಷಿಣ ದೆಹಲಿಯ ಮತದಾರರನ್ನು ಸೆಳೆಯಲು ಸಪ್ನಾ ನೆರವಾಗಬಹುದು.

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರುಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರು

ಏಪ್ರಿಲ್ 11 ರಿಂದ ಮೇ 19 ತನಕ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ದೆಹಲಿಯಲ್ಲಿ ಮೇ12ರಂದು ಮತದಾನ ನಡೆಯಲಿದ್ದು, ಅಂತಿಮ ಫಲಿತಾಂಶ ಮೇ 23ರಂದು ಹೊರ ಬರಲಿದೆ.

English summary
Haryanvi dancer Sapna Chaudhary is likely to campaign for the BJP in the Lok Sabha elections even though she might not join the party, for now, sources said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X