ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸೇರಲ್ಲ, ಬಿಜೆಪಿ ಸೇರಿಲ್ಲ ಎಂದ ಸ್ಟಾರ್ ಗಾಯಕಿ

|
Google Oneindia Kannada News

ನವದೆಹಲಿ, ಏಪ್ರಿಲ್ 22: ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ ಎಂದಿದ್ದಾ ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಇಂದು ಬಿಜೆಪಿ ಸೇರಿಲ್ಲ ಎಂದಿದ್ದಾರೆ. ದೆಹಲಿ ಬಿಜೆಪಿ ಮುಖ್ಯಸ್ಥ, ಈಶಾನ್ಯ ದೆಹಲಿ ಅಭ್ಯರ್ಥಿ ಭೋಜ್ ಪುರಿ ನಟ, ಗಾಯಕ ಮನೋಜ್ ತಿವಾರಿ ಅವರ ಜತೆ ಕಾಣಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಪರ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಪ್ನಾ ಅವರು, ನಾನು ಬಿಜೆಪಿ ಸೇರಿಲ್ಲ, ನಟ ಮನೋಜ್ ತಿವಾರಿ ನನ್ನ ಉತ್ತಮ ಗೆಳೆಯ, ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ : ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ : ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ

ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರನ್ನು ಸೋಲಿಸಲು ಸಪ್ನಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಎಲ್ಲಾ ಗಾಳಿ ಸುದ್ದಿಗಳಿಗೂ ಸಪ್ನಾ ತೆರೆ ಎಳೆದಿದ್ದರು. ಇದಾದ ಬಳಿಕ, ಮನೋಜ್ ತಿವಾರಿ ಅವರು ಸಪ್ನಾ ಅವರನ್ನು ಭೇಟಿ ಮಾಡಿ, ಬಿಜೆಪಿ ಪರ ಪ್ರಚಾರ ಮಾಡುವಂತೆ ಆಹ್ವಾನಿಸಿದ್ದರು.

Sapna Chaudhary denies joining BJP, says campaigning for good friend Manoj Tiwari

ಜಾಟ್, ಪೂರ್ವಂಚಲಿ ಮತದಾರರು ಹೆಚ್ಚಾಗಿರುವ ಈಶಾನ್ಯ,ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ ಕ್ಷೇತ್ರಗಳಲ್ಲಿ ಸಪ್ನಾ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ಬಿಜೆಪಿ ಬಳಸಿಕೊಳ್ಳಲು ಇಚ್ಛಿಸಿದೆ. ಆದರೆ, ಸಪ್ನಾ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ವಿಡಿಯೋ : ಹರ್ಯಾನ್ವಿ ಹಾಡಿಗೆ ಹೆಜ್ಜೆ ಹಾಕಿದ ಕ್ರಿಸ್ ಗೇಲ್

ಬಿಗ್ ಬಾಸ್ ರಿಯಾಲಿಟಿ ಶೋ 11ರ ಸ್ಪರ್ಧಿಯಾಗಿದ್ದ ಸಪ್ನ ಅವರು ತಮ್ಮ ಹಾಡು, ನೃತ್ಯಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದವರು. ಗೋರಾ ಗೋರಾ, ಬಹು ಜಮೀದಾರ್ ಕಿ, ಸಾಲಿಡ್ ಬಾಡಿ, 'ತೇರಿ ಅಖ್ಯಾ ಕಾ ಯೋ ಕಾಜಲ್' ಎಂಬ ಹರ್ಯಾನ್ವಿ ಭಾಷೆಯ ಹಾಡು ಅತ್ಯಂತ ಜನಪ್ರಿಯವಾಗಿದೆ. 2018ರ ಗೂಗಲ್ ನ ಅತಿ ಹೆಚ್ಚು ಸರ್ಚ್ ಆಗಿರುವ ವ್ಯಕ್ತಿಗಳ ಪೈಕಿ ಸಪ್ನಾ ಚೌಧರಿಯೂ ಒಬ್ಬರಾಗಿದ್ದರು.

Sapna Chaudhary denies joining BJP, says campaigning for good friend Manoj Tiwari

'ಬಿಗ್ ಬಾಸ್' ಸ್ಪರ್ಧಿಗೆ ಒಲಿದು ಬಂತು ಅದೃಷ್ಟ.! ಯಾರಿಗೆ.? ಏನದು.?

1990ರ ಡಿಸೆಂಬರ್ 25ರಂದು ಹರ್ಯಾಣದ ರೋಹ್ಟಕ್ ನಲ್ಲಿ ಜನಿಸಿದ ಸಪ್ನಾ ಅವರು 12ನೆ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಜೀವನೋಪಾಯಕ್ಕೆ ಹಾಡು ಕುಣಿತ ಶುರು ಮಾಡಿದ ಸಪ್ನಾ ನಂತರ ಸ್ಟಾರ್ ಗಾಯಕಿ ಕಮ್ ನೃತ್ಯಗಾರ್ತಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

English summary
After Sapna Chaudhary was spotted at a roadshow in Delhi alongside Manoj Tiwari, the Haryanvi singer denied joining the Bharatiya Janata Party (BJP) and said that she was there at Tiwaris' rally because of the 'good friendship' that they share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X