ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾನಿಟರಿ ನ್ಯಾಪ್ ಕಿನ್ ತೆರಿಗೆ ಮುಕ್ತವಾಗಲಿ: ಸಂಸದೆ ಸುಷ್ಮಿತಾ ದೇವ್

ಮಹಿಳೆಯರು ಪ್ರತಿ ತಿಂಗಳು ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ತೆರಿಗೆ ಮುಕ್ತಗೊಲಿಸಬೇಕೆಂದು ಸಂಸದೆ ಸುಷ್ಮಿತಾ ದೇವ್ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.

|
Google Oneindia Kannada News

ನವದೆಹಲಿ, ಏಪ್ರಿಲ್ 5: ಮಹಿಳೆಯರು ಪ್ರತಿ ತಿಂಗಳೂ ಬಳಸಲೇ ಬೇಕಾದ ಸ್ಯಾನಿಟರಿ ನ್ಯಾಫ್ ಕಿನ್ ಗಳ ಮೇಲೆ ಹೇರುವ ತೆರಿಗೆಗೆ ಜಿಎಸ್ ಟಿ ಕಾಯ್ದೆಯಡಿ ವಿನಾಯಿತಿ ನೀಡಬೇಕೆಂದು ಕಾಂಗ್ರೆಸ್ ಸಂಸದೆ ಸು‌ಷ್ಮಿತಾ ದೇವ್ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಯೋಚಿಸಿದರೆ ಸ್ಯಾನಿಟರಿ ನ್ಯಾಪ್ ಕಿನ್ ಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರತೀ ತಿಂಗಳು ಋತುಸ್ರಾವದ ಸಮಯದಲ್ಲಿ ಮಹಿಳೆಯರು ಬಳಸುವ ಈ ನ್ಯಾಪ್ ಕಿನ್ ಗಳು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ. ದುಬಾರಿ ಎಂಬ ಕಾರಣಕ್ಕಾಗಿಯೇ ಇದನ್ನು ಬಳಸದೆ, ಎಷ್ಟೋ ಮಹಿಳೆಯರು ತಮ್ಮ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ.[ಗ್ರಾಮೀಣ ಹೆಣ್ಣುಮಕ್ಕಳಿಗೆ ಕೇವಲ ರು.1ಕ್ಕೆ ನ್ಯಾಪ್ ಕಿನ್]

Sanitary napkins should be taxfree: MP Sushmita Dev

ಅಚ್ಚರಿ ಎಂಬಂತೆ ನಮ್ಮ ದೇಶದಲ್ಲಿ ಗರ್ಭನಿರೋಧಕಗಳು ತೆರಿಗೆ ಮುಕ್ತವಾಗಿವೆ. ಆದರೆ ಸ್ಯಾನಿಟಿರಿ ನ್ಯಾಪ್ ಕಿನ್ ಅನ್ನು ಸಹ ತೆರಿಗೆ ಮುಕ್ತಗೊಳಿಸಲಾಗಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರ ಬಳಿ ಮಾತನಾಡಿದ್ದೇನೆ. ಅವರೂ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಸು‌ಷ್ಮಿತಾ ದೇವ್ ತಿಳಿಸಿದ್ದಾರೆ.[ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?]

ಈ ವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಸು‌ಷ್ಮಿತಾ ದೇವ್ ಭೇಟಿ ಮಾಡಲಿದ್ದು, ಅದಕ್ಕೂ ಮೊದಲು ಅವರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ತೆರಿಗೆ ಮುಕ್ತಗೊಳಿಸುವ ಪರವಾಗಿ ಮೂರು ಲಕ್ಷಕ್ಕೂ ಹೆಚ್ಚು ಜನರ ಸಹಿಯ ಅಗತ್ಯವಿದೆ. ಅದಕ್ಕೆಂದೇ ಈ ಆನ್ ಲೈನ್ ಅಭಿಯಾನ ನಡೆಯುತ್ತಿದೆ.

ಋತುಸ್ರಾವದ ಸಮಯದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುವ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಗಳ ಬೆಲೆ ಮತ್ತೊಂದು ತಲೆಬಿಸಿ ಎನ್ನಿಸಬಾರದು, ಮಹಿಳೆಯರ ಆರೋಗ್ಯ, ಸ್ವಚ್ಛತೆಯ ದೃಷ್ಟಿಯಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ಅಸ್ಸಾಮಿನ ಸಿಲ್ಚಾರ್ ನ ಸಂಸದೆ ಸುಷ್ಮಿತಾ ಹೇಳಿದ್ದಾರೆ.

English summary
Women use sanitary napkins every month for the majority of their lives. They are a health necessity! Yet sanitary napkins are taxed making them expensive for the middle-class and unaffordable for rural women. sushmita Dev, an MP from Congress has started an online campaign to get rid from such problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X