• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮಂತ್ ಗೋಯೆಲ್ RAW, ಅರವಿಂದ್ ಕುಮಾರ್ ಗುಪ್ತಚರ ಇಲಾಖೆ ಚೀಫ್

|
Google Oneindia Kannada News

ನವದೆಹಲಿ, ಜೂನ್ 26: ಭಾರತದ ಎರಡು ಗುಪ್ತಚರ ಇಲಾಖೆ ವಿಭಾಗಗಳಿಗೆ ಬುಧವಾರ ಸರಕಾರವು ಹೊಸ ಮುಖ್ಯಸ್ಥರನ್ನು ನೇಮಿಸಿದೆ. ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅಥವಾ RAWದ ಭಾರತದ ಹೊರಗಿನ ಗುಪ್ತಚರ ಕಾರ್ಯ ಚಟುವಟಿಕೆಯ ಮುಖ್ಯಸ್ಥರಾಗಿದ್ದ ಸಮಂತ್ ಗೋಯೆಲ್ ಅವರು ಈಗ ಸಂಸ್ಥೆಯ ಮುಖ್ಯಸ್ಥರಾಗಲಿದ್ದಾರೆ. ಈ ವರೆಗೆ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ್ದವರು ಅನಿಲ್ ಧಮ್ಸಾನ.

ಇನ್ನು ಗುಪ್ತಚರ ಇಲಾಖೆಯ ಕಾಶ್ಮೀರ್ ಡೆಸ್ಕ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದ ಅರವಿಂದ್ ಕುಮಾರ್ ಅವರು ಸಂಸ್ಥೆಯ ಮುಖ್ಯಸ್ಥರಾಗಲಿದ್ದು, ಈ ವರೆಗೆ ಆ ಹುದ್ದೆಯಲ್ಲಿದ್ದ ರಾಜೀವ್ ಜೈನ್ ರ ಸ್ಥಾನವನ್ನು ತುಂಬಲಿದ್ದಾರೆ. ನೇಮಕಾತಿಯ ಕಡತಕ್ಕೆ ಗೃಹ ಸಚಿವರು ಸಹಿ ಹಾಕಿದ್ದು, ಅದನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ಇಬ್ಬರೂ ಅಧಿಕಾರಿಗಳು ಜೂನ್ ಮೂವತ್ತನೇ ತಾರೀಕು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ

ಸಮಂತ್ ಗೋಯೆಲ್ ಹಾಗೂ ಅರವಿಂದ್ ಕುಮಾರ್ ಇಬ್ಬರೂ 1984ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಗಳು. 1990ರ ದಶಕದಲ್ಲಿ ಪಂಜಾಬ್ ನಲ್ಲಿ ಭಯೋತ್ಪಾದಕರನ್ನು ನಿಗ್ರಹಿಸಲು ಗೋಯೆಲ್ ಕೆಲಸ ಮಾಡಿದ್ವರು. ದುಬೈ ಹಾಗೂ ಲಂಡನ್ ನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ದುಬೈ ಹಾಗೂ ಲಂಡನ್ ರಾಯಭಾರ ಕಚೇರಿಯಲ್ಲಿ ಉಸ್ತುವಾರಿ ಆಗಿ ನೇಮಕ ಆಗಿದ್ದರು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಅರವಿಂದ್ ಕುಮಾರ್ ಅವರು ಅಸ್ಸಾಮ್- ಮೇಘಾಲಯ ಕೇಡರ್ ನ ಅಧಿಕಾರಿ. ಬಿಹಾರದಲ್ಲಿ ಸಂಸ್ಥೆ ನೇತೃತ್ವ ವಹಿಸಿದ್ದರು. ಅದಕ್ಕೂ ಮುನ್ನ ದೀರ್ಘ ಕಾಲ ಆಡಳಿತ ಹಾಗೂ ವಿಚಾರಣೆ ಶಾಖೆಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.

English summary
Samant Goel appointed as RAW chief, Arvind Kumar Intelligence bureau chief by union government on Wednesday. Both will take charge on June 30th. Appointment file signed by home minister and sent to PMO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X