ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ವೇಳೆ ದೇಶದಲ್ಲಿ 39,400 ಕೋಟಿ ಪಿಎಫ್ ಹಣ ವಿತ್‌ಡ್ರಾ ಆಗಿದೆ: ಕರ್ನಾಟಕದಲ್ಲಿ ಎಷ್ಟು?

|
Google Oneindia Kannada News

ಕೊರೊನಾವೈರಸ್‌ ಪ್ರೇರಿತ ಲಾಕ್‌ಡೌನ್ ಸಂದರ್ಭದಲ್ಲಿ ಜನಜೀವನ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡರು. ಅನೇಕರು ವೇತನ ಇಲ್ಲದೇ ಪರದಾಡಿದ್ದು ಇದೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ನೌಕರರು ಮಾರ್ಚ್ 25 ಮತ್ತು ಆಗಸ್ಟ್ 31 ರ ನಡುವೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಂದ, 39,400 ಕೋಟಿ ರೂಪಾಯಿ ಹಣವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಸೋಮವಾರ ಲೋಕಸಭೆಗೆ ತಿಳಿಸಿದೆ.

ಇಪಿಎಫ್‌ಒ ಅಚ್ಚರಿಯ ನಿರ್ಧಾರ: ಪಿಎಫ್ ಬಡ್ಡಿದರದಲ್ಲಿ ಬದಲಾವಣೆಇಪಿಎಫ್‌ಒ ಅಚ್ಚರಿಯ ನಿರ್ಧಾರ: ಪಿಎಫ್ ಬಡ್ಡಿದರದಲ್ಲಿ ಬದಲಾವಣೆ

ಈ ಅವಧಿಯಲ್ಲಿ ತಮ್ಮ ನಿವೃತ್ತಿ ಉಳಿತಾಯದ ಹಣವನ್ನು ಒಟ್ಟು 10.4 ಮಿಲಿಯನ್ ಸಂಬಳ ಕಾರ್ಮಿಕರು ಹಿಂಪಡೆದಿದ್ದಾರೆ. ಇದರಲ್ಲಿ 8.2 ಮಿಲಿಯನ್ ಜನರು ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಸಂಬಳವನ್ನು ಗಳಿಸುವವರಾಗಿದ್ದಾರೆ.

EPF Withdrawal: Rs 39,400 crore from EPF accounts between 25 March and 31 August

ಮಾರ್ಚ್ 25 ರಂದು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಆಗಸ್ಟ್ ಅಂತ್ಯದವರೆಗೆ, 39,403 ಕೋಟಿ ಹಿಂಪಡೆಯಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಇದರಲ್ಲಿ ಶೇ. 40ಕ್ಕಿಂತ ಹೆಚ್ಚು ಮೂರು ಕೈಗಾರಿಕಾ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದಿಂದ ಬಂದಿದೆ ಎಂದು ಅದು ಹೇಳಿದೆ.

ಮಹಾರಾಷ್ಟ್ರದ ಇಪಿಎಫ್ ಚಂದಾದಾರರು,7,837.85 ಕೋಟಿಗಳನ್ನು ಹಿಂತೆಗೆದುಕೊಂಡರೆ, ಕರ್ನಾಟಕದಲ್ಲಿ ಈ ಸಂಖ್ಯೆ, 5,743.96 ಕೋಟಿ ಮತ್ತು ಪುದುಚೇರಿ ಸೇರಿದಂತೆ ತಮಿಳುನಾಡಿನಲ್ಲಿ ವಾಪಸಾತಿ ಮೊತ್ತ, 4,984.51 ಕೋಟಿ. ದೆಹಲಿ ಮತ್ತು ತೆಲಂಗಾಣ ಇತರ ಎರಡು ರಾಜ್ಯಗಳಾಗಿದ್ದು, ಇಪಿಎಫ್ ಚಂದಾದಾರರಿಂದ ಹಿಂಪಡೆಯುವಿಕೆಯು ಒಟ್ಟಾರೆಯಾಗಿ, 5,500 ಕೋಟಿಗಿಂತ ಹೆಚ್ಚಾಗಿದೆ.

English summary
Salaried employees withdrew a massive Rs 39,400 crore from EPF accounts between 25 March and 31 August as covid-19 impacted lives and livelihood of millions of workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X