ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡ್ಸೆಯನ್ನು ಹೊಗಳಿದ ಪ್ರಗ್ಯಾ ಸಿಂಗ್‌ಗೆ ಪಾಠ ಕಲಿಸಿದ ಬಿಜೆಪಿ

|
Google Oneindia Kannada News

ನವದೆಹಲಿ, ನವೆಂಬರ್ 28: ರಕ್ಷಣಾ ಸಂಸದೀಯ ಸಮಾಲೋಚನಾ ಸಮಿತಿಯಿಂದ ಸಂಸದೆ ಪ್ರಗ್ಯಾ ಸಿಂಗ್ ಅವರನ್ನು ಕೈಬಿಡಲಾಗಿದೆ.

ಸಂಸತ್ ಅಧಿವೇಶನದಲ್ಲಿ ಗಾಂಧ ಹಂತಕ ನಾಥೂತಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಪ್ರಗ್ಯಾ ಸಿಂಗ್ ಅವರನ್ನು ರಕ್ಷಣಾ ಸಂಸದೀಯ ಸಮಾಲೋಚನೆ ಸಮಿತಿಯಿಂದ ತೆಗೆದುಹಾಕಲಾಗಿದೆ.

 ಭದ್ರತಾ ಸಮಿತಿಯಲ್ಲಿ ಸಾದ್ವಿ ಪ್ರಗ್ಯಾ, ವಿಪರ್ಯಾಸ ಎಂದ ಕಾಂಗ್ರೆಸ್ ಭದ್ರತಾ ಸಮಿತಿಯಲ್ಲಿ ಸಾದ್ವಿ ಪ್ರಗ್ಯಾ, ವಿಪರ್ಯಾಸ ಎಂದ ಕಾಂಗ್ರೆಸ್

ಪ್ರಗ್ಯಾ ಸಿಂಗ್ ಅವರ ಹೇಳಿಕೆಗೆ ವಿರೊಧಪಕ್ಷಗಳ ಸೇರಿದಂತೆ ದೇಶಾದ್ಯಾಂತ ವಿರೋಧ ವ್ಯಕ್ತವಾಗಿದೆ. ಸಂಸತ್​ ಸಭೆಯಲ್ಲಿ ಗೋಡ್ಸೆಯನ್ನು ಹೊಗಳಿದ ಅವರ ನಡೆಗೆ ಬಿಜೆಪಿ ಪಕ್ಷ ಕೂಡ ಸಿಟ್ಟಾಗಿದೆ. ಇದರ ಪರಿಣಾಮವಾಗಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ ಸಂಸದೀಯ ಸಮಾಲೋಚನ ಸಮಿತಿಯಿಂದ ವಜಾಗೊಳಿಸಲಾಗಿದೆ.

Sadhvi Pragya Singh Out Of Defence Panel

ಸೆ.21ರಂದು ಮಲೆಗಾಂವ್​ ಸ್ಪೋಟದ ಆರೋಪಿಯಾಗಿದ್ದ ಭೋಪಾಲ್​ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಅವರನ್ನು ರಕ್ಷಣಾ ಸಚಿವಾಲಯದ 21 ಜನರ ಸಂಸದರ ಈ ಸಮಿತಿಗೆ ನೇಮಕ ಮಾಡಲಾಗಿತ್ತು.

ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?

ಇನ್ನು ಅವರ ಹೇಳಿಕೆ ವಿರೋಧಿಸಿರುವ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ, 'ಠಾಕೂರ್​ ಹೇಳಿಕೆ ಖಂಡನೀಯ. ಬಿಜೆಪಿ ಈ ರೀತಿಯ ಸಿದ್ಧಾಂತ ಅಥವಾ ಹೇಳಿಕೆಗಳನ್ನು ಎಂದು ಬೆಂಬಲಿಸುವುದಿಲ್ಲ' ಎಂದಿದ್ದಾರೆ.

ಗಾಂಧಿಯನ್ನು ಹತ್ಯೆಗೈದ ಹಂತಕನನ್ನು ಭಯೋತ್ಪಾದಕರು ಮಾತ್ರ ದೇಶಭಕ್ತ ಎಂದು ಹೇಳಲು ಸಾಧ್ಯ ಎಂದು ರಾಹುಲ್‌ ಗಾಂಧಿ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗಾಂಧಿ ಕೊಂದ ಗೋಡ್ಸೆಯನ್ನು ಹೊಗಳಿದ ಪ್ರಗ್ಯಾರನ್ನು ಸದನದಿಂದ ತಕ್ಷಣವೇ ವಜಾಗೊಳಿಸಬೇಕು ಎನ್ನುವ ಒತ್ತಡ ಕೇಳಿಬಂದಿತ್ತು. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇವಲ ರಕ್ಷಣಾ ಸಮಿತಿಯಿಂದ ಮಾತ್ರವಲ್ಲ ಪ್ರಗ್ಯಾ ಠಾಕೂರ್ ಅವರನ್ನು ಸಂಸದೀಯ ಸಭೆಯಿಂದಲೂ ಕೂಡ ಹೊರಕ್ಕೆ ಹಾಕಲಾಗಿದೆ.

English summary
Sadhvi Pragya Singh Out Of Defence Panel After after she described Mahatma Gandhi's assassin, Nathuram Godse, as a Patriot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X