ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದಿಂದ ಹೊಸ ಇಮ್ಯುನಿಟಿ ಬೂಸ್ಟರ್ ಉತ್ಪನ್ನಗಳ ಬಿಡುಗಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಜನರಲ್ಲಿನ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಹೊಸ ಇಮ್ಯುನಿಟಿ ಬೂಸ್ಟರ್ ಉತ್ಪನ್ನಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ಎಂಟು ಪೋಷಕಾಂಶಯುತ- ಪ್ರತಿರಕ್ಷಣಾ ವೃದ್ಧಿ ಉತ್ಪನ್ನಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಗುರುವಾರ ಬಿಡುಗಡೆ ಮಾಡಿದರು.

ಬಸ್‌ನಲ್ಲಿ ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್; ಡಬಲ್ ಚಾರ್ಜ್!ಬಸ್‌ನಲ್ಲಿ ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್; ಡಬಲ್ ಚಾರ್ಜ್!

ಈ ಸಾಮರ್ಥ್ಯ ವೃದ್ಧಿಯ ಉತ್ಪನ್ನಗಳನ್ನು ದೇಶದಾದ್ಯಂತ ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಪೌಷ್ಟಿಕಾಂಶಯುಕ್ತ ಉತ್ಪನ್ನಗಳು ಕೊರೊನಾ ವೈರಸ್ ಸೋಂಕಿನ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಉತ್ಪನ್ನಗಳು ಜನರಲ್ಲಿ ವೈರಸ್ ಎದುರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸದಾನಂದ ಗೌಡ ತಿಳಿಸಿದರು.

 Sadananda Gowda Launches 8 Nutraceutical-Immunity Boosting Products Under PMBJP

ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿನ ಇತರೆ ಉತ್ಪನ್ನಗಳಿಗಿಂತ ಅಧಿಕ ಗುಣಮಟ್ಟ ಮತ್ತು ಮಾರುಕಟ್ಟೆ ದರಕ್ಕಿಂತ ಶೇ 26ರಷ್ಟು ಅಗ್ಗವಾಗಿದೆ. ಜನೌಷಧಿ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಈ ಇಮ್ಯುನಿಟಿ ವೃದ್ಧಿಸುವ ಪ್ರೊಟೀನ್ ಉತ್ಪನ್ನಗಳು ಹೆಚ್ಚಿನ ಜನರಿಗೆ ತಲುಪಲಿದ್ದು, ಜನರ ಆರೋಗ್ಯ ಉತ್ತಮಗೊಳ್ಳಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 Sadananda Gowda Launches 8 Nutraceutical-Immunity Boosting Products Under PMBJP

ನವದೆಹಲಿಯಲ್ಲಿ ಕೊವಿಡ್-19 ಎರಡನೇ ಅಲೆ ಬಗ್ಗೆ ಸಚಿವರ ಸ್ಪಷ್ಟನೆ ನವದೆಹಲಿಯಲ್ಲಿ ಕೊವಿಡ್-19 ಎರಡನೇ ಅಲೆ ಬಗ್ಗೆ ಸಚಿವರ ಸ್ಪಷ್ಟನೆ

ದೇಶದ ಜನರ ಒಟ್ಟಾರೆ ಆರೋಗ್ಯ ಮತ್ತು ಪೌಷಿಕತೆಯ ಸ್ಥಿತಿಯನ್ನು ಸುಧಾರಿಸಲು ಪ್ರೊಟೀನ್ ಸಪ್ಲಿಮೆಂಟ್‌ಗಳು, ಧಾನ್ಯ ಆಧಾರಿತ ಪೌಷ್ಟಿಕ ಪೇಯಗಳು, ಇಮ್ಯನಿಟಿ ಬೂಸ್ಟರ್‌ಗಳು ಮುಂತಾದ ಪೌಷ್ಟಿಕಾಂಶ ಉತ್ಪನ್ನಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು.

English summary
Sadananda Gowda on Thursday launches 8 Nutraceutical-immunity boosting products under PMBJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X