• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎನ್ ಆರ್ ರಾವ್, ಸಚಿನ್ ಈಗ 'ಭಾರತ ರತ್ನ'

By Mahesh
|

ನವದೆಹಲಿ, ಫೆ.4: ಕರ್ನಾಟಕದ ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್ ಹಾಗೂ ಕ್ರಿಕೆಟ್ ‌ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಮಂಗಳವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 79 ವರ್ಷ ವಯಸ್ಸಿನ ಡಾ.ಸಿ.ಎನ್.ಆರ್.ರಾವ್ ಹಾಗೂ 40 ವರ್ಷದ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಹಾಗೂ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ತೆಂಡೂಲ್ಕರ್ ಪಾತ್ರರಾದರು. ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಖ್ಯಾತ ವಿಜ್ಞಾನಿ ಕನ್ನಡಿಗ ಸಿ.ಎನ್.ಆರ್.ರಾವ್ ಕೂಡ ಭಾರತ ರತ್ನ ಪ್ರಶಸ್ತಿ ಪಡೆದ ಕರ್ನಾಟಕದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.

ಸಮಾರಂಭದಲ್ಲಿ ಪ್ರಧಾನ ಮಂತ್ರಿ ಡಾ.ಮನಮೋಹನ್ ‌ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರತಿಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಕೇಂದ್ರ ಸಚಿವರು, ತೆಂಡೂಲ್ಕರ್ ಮತ್ತು ಸಿ.ಎನ್.ರಾವ್ ಅವರ ಕುಟುಂಬದ ಸದಸ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಬಗ್ಗೆ ಹಾಗೂ ಪ್ರೊ.ಸಿ.ಎನ್.ಆರ್.ರಾವ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಸಂತಸದ ನುಡಿ ಬಗ್ಗೆ ಮುಂದೆ ಓದಿ...

ರಾಷ್ಟ್ರಪತಿ ಪ್ರಣಬ್ ರಿಂದ ತೆಂಡೂಲ್ಕರ್ ಗೆ ಭಾರತರತ್ನ

ರಾಷ್ಟ್ರಪತಿ ಪ್ರಣಬ್ ರಿಂದ ತೆಂಡೂಲ್ಕರ್ ಗೆ ಭಾರತರತ್ನ

2013 ನವೆಂಬರ್ 16ರಂದು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ತೆಂಡೂಲ್ಕರ್ ಅವರ ಸಾಧನೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಭಾರತ ಕ್ರೀಡಾ ಕ್ಷೇತ್ರದ ಜಾಗತಿಕ ರಾಯಭಾರಿಯಾಗಲಿರುವ ತೆಂಡೂಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜ್ಞಾನಕ್ಕೆ ನೀಡುತ್ತಿರುವ ಆದ್ಯತೆ ಕಡಿಮೆ : ಸಿ.ಎನ್.ಆರ್.ರಾವ್

ವಿಜ್ಞಾನಕ್ಕೆ ನೀಡುತ್ತಿರುವ ಆದ್ಯತೆ ಕಡಿಮೆ : ಸಿ.ಎನ್.ಆರ್.ರಾವ್

ಶಿಕ್ಷಣದಲ್ಲಿ ವಿಜ್ಞಾನಕ್ಕೆ ನೀಡುತ್ತಿರುವ ಆದ್ಯತೆ ಕಡಿಮೆಯಾಗುತ್ತಿದೆ. ಇದರಿಂದಾಗಿಯೇ ವಿಜ್ಞಾನದ ಪ್ರಗತಿಯೂ ಕುಂಠಿತಗೊಳ್ಳುತ್ತಿದೆ ಎಂದು ಪ್ರೊ.ಸಿ.ಎನ್.ಆರ್.ರಾವ್ ವಿಷಾದಿಸಿದ್ದಾರೆ. ದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತ ರತ್ನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಐರೋಪ್ಯ ರಾಷ್ಟ್ರಗಳಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ, ಭಾರತದಲ್ಲಿ ಇದರ ಕೊರತೆ ಇದೆ. ಶಾಲಾ ಶಿಕ್ಷಣದಲ್ಲೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಇನ್ನೂ ಹೆಚ್ಚಿನ ಪ್ರಯತ್ನ ನಡೆಸಬೇಕು. ಭಾರತ ರತ್ನ ಸ್ವೀಕರಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಚಿನ್ ಹಾಗೂ ಸಿಎನ್ನಾರ್ ರಾವ್ ಗೆ ಉನ್ನತ ಗೌರವ

ಸಚಿನ್ ಹಾಗೂ ಸಿಎನ್ನಾರ್ ರಾವ್ ಗೆ ಉನ್ನತ ಗೌರವ

ಪ್ರಧಾನಿ ಕಾರ್ಯಾಲಯದ ವಿಜ್ಞಾನ ಸಲಹಾ ಸಮಿತಿ ಮಂಡಳಿಯ ಮುಖ್ಯಸ್ಥರಾಗಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಆನೇಕ ಪ್ರಬಂಧಗಳು, 1,400 ಸಂಶೋಧನೆಗಳು, 45 ಪುಸ್ತಕಗಳನ್ನು ರಚಿಸಿದ್ದ ಸಿ.ಎನ್.ಆರ್.ರಾವ್ ಭಾರತ ರತ್ನ ಪ್ರಶಸ್ತಿ ಪಡೆದ ಮೂರನೆ ವಿಜ್ಞಾನಿಯಾಗಿದ್ದಾರೆ. ಈ ಹಿಂದೆ ಈ ಪ್ರಶಸ್ತಿಯನ್ನು ಖ್ಯಾತ ವಿಜ್ಞಾನಿ ಸರ್.ಸಿ.ವಿ.ರಾಮನ್, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೂ ನೀಡಲಾಗಿತ್ತು.

2013 ನವೆಂಬರ್ 16ರಂದು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ತೆಂಡೂಲ್ಕರ್ ಅವರ ಸಾಧನೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಭಾರತ ಕ್ರೀಡಾ ಕ್ಷೇತ್ರದ ಜಾಗತಿಕ ರಾಯಭಾರಿಯಾಗಲಿರುವ ತೆಂಡೂಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತ ರತ್ನರು

ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತ ರತ್ನರು

ದೇಶದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್, ಮೊಟ್ಟ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರು, ಸರ್ವಪಲ್ಲಿ ರಾಧಾಕೃಷ್ಣ, ಚಕ್ರವರ್ತಿ ರಾಜಗೋಪಾಲಚಾರಿ, ಖ್ಯಾತ ವಿಜ್ಞಾನಿ ಹಾಗೂ ಕನ್ನಡಿಗರಾದ ಸರ್.ಸಿ.ವಿ.ರಾಮನ್, ಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ಗೋವಿಂದ್ ಬಲ್ಲದ್ ‌ಪಂಥ್, ಡಾ.ಬಿ.ಆರ್.ಅಂಬೇಡ್ಕರ್, ಡಾ.ಜಾಕಿರ್ ಹುಸೇನ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ವಿ.ವಿ.ಗಿರಿ, ಮದರ್ ತೆರೇಸಾ, ಸರ್ದಾರ್ ವಲ್ಲಭಭಾಯ್ ಪಟೇಲ್, ನೆಲ್ಸನ್ ಮಂಡೇಲಾ, ರಾಜೀವ್‌ಗಾಂಧಿ, ಜೆ.ಆರ್.ಡಿ.ಟಾಟಾ, ಜಯಪ್ರಕಾಶ್ ನಾರಾಯಣ್, ಲತಾ ಮಂಗೇಶ್ಕರ್, ಭೀಮಸೇನ್ ಜೋಷಿ ಸೇರಿದಂತೆ ಅನೇಕರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್ ಅವರ ಜತೆ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರಿರುವ ಚಿತ್ರ

ಭಾರತ ರತ್ನ ಸಚಿನ್ ಹೇಳಿದ ಮಾತುಗಳು

ಭಾರತ ರತ್ನ ಸಚಿನ್ ಹೇಳಿದ ಮಾತುಗಳು

ನಾನು ಈ ಸುಂದರ ದೇಶದಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ. ನನ್ನ ಏಳಿಗೆಗೆ ಸಹಕರಿಸಿದ ಎಲ್ಲಾ ಅಭಿಮಾನಿಗಳು, ಆಪ್ತರಿಗೆ ನಾನು ಋಣಿಯಾಗಿದ್ದೇನೆ,. ಪ್ರೊ. ಸಿಎನ್ ಆರ್ ರಾವ್ ಅವರ ಜತೆಯಲ್ಲಿ ಭಾರತ ರತ್ನ ಪಡೆಯುತ್ತಿರುವುದು ನನ್ನ ಸೌಭಾಗ್ಯ. ಈ ಅತ್ಯುನ್ನತ ಗೌರವವನ್ನು ನನ್ನ ತಾಯಿಗಷ್ಟೇ ಆಲ್ಲ ದೇಶ ಎಲ್ಲಾ ಅಮ್ಮಂದಿರಿಗೆ ಅರ್ಪಿಸುತ್ತಿದ್ದೇನೆ. ಅವರ ತ್ಯಾಗ, ಪ್ರೀತಿಯಿಂದ ಮಾತ್ರ ನಾವು ಈ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್ ಅವರ ಜತೆ ರಾಷ್ಟ್ರಪತಿ

ಭಾರತ ರತ್ನ ಸಿಎನ್ ಆರ್ ರಾವ್

ಭಾರತ ರತ್ನ ಸಿಎನ್ ಆರ್ ರಾವ್

ಸಿಎನ್ ಆರ್ ರಾವ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಭಾರತರತ್ನ ಪ್ರಶಸ್ತಿ ಪ್ರದಾನ

ಭಾರತ ರತ್ನ ಸಚಿನ್ ತೆಂಡೂಲ್ಕರ್

ಭಾರತ ರತ್ನ ಸಚಿನ್ ತೆಂಡೂಲ್ಕರ್

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 40 ವರ್ಷದ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್

ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಸಚಿನ್ ಅವರ ನಡುವೆ ಕುಶಲ ಸಂಭಾಷಣೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi : Legendary cricketer Sachin Tendulkar and eminent scientist CNR Rao Tuesday were conferred the Bharat Ratna, India's highest civilian award, by President Pranab Mukherjee at the Rashtrapati Bhavan here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more