• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರೀ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಅಲ್ಲಗಳೆದ ಬಿಜೆಪಿ

|

ನವದೆಹಲಿ, ಜನವರಿ 16 : ರಾಷ್ಟ್ರದಲ್ಲಿ ನಿರುದ್ಯೋಗ ಬೃಹತ್ ಪ್ರಮಾಣದಲ್ಲಿ ತಾಂಡವವಾಡುತ್ತಿದೆ ಎಂಬುದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸಾರಾಸಗಟಾಗಿ ನಿರಾಕರಿಸಿದ್ದಾರೆ.

ಯಾವುದೋ ಸಂಬಂಧವಿಲ್ಲದ ಸಮಸ್ಯೆಯನ್ನೇ ಹಿಡಿದುಕೊಂಡು ನಿರುದ್ಯೋಗದ ಬಗ್ಗೆ ಇತ್ಯರ್ಥಕ್ಕೆ ಬರಬಾರದು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ. ಆದರೆ, ಸರಿಯಾದ ಅಂಕಿಸಂಖ್ಯೆಯನ್ನು ಕಲೆಹಾಕಲು ದತ್ತಾಂಶ ಮೂಲಗಳು ವಿಫಲವಾಗಿವೆ. ನಮ್ಮ ಬಳಿ ಉದ್ಯೋಗ ಸೃಷ್ಟಿಸಿದ್ದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದು ಅವರು ಹೇಳಿದರು.

81 ವಿವಿಧ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಕರೆದ ನೈಋತ್ಯ ರೈಲ್ವೆ

ಕೆಲ ಹುದ್ದೆಗಳಿಗಾಗಿ ಇತ್ತೀಚೆಗೆ ಒಂದುವರೆ ಕೋಟಿಗೂ ಅಧಿಕ ಅರ್ಜಿಗಳು ಬಂದಿದ್ದವು. ಭಾರೀ ಪ್ರಮಾಣದಲ್ಲಿ ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅಗಾಧ ಪ್ರಮಾಣದಲ್ಲಿ ನಿರುದ್ಯೋಗ ಇದೆ ಎಂದು ತಿಳಿಯಬಾರದು. ಜೀವನದಲ್ಲಿ ಭದ್ರತೆ ಪಡೆದುಕೊಳ್ಳುವ ದೃಷ್ಟಿಯಿಂದ ಸರಕಾರಿ ಕೆಲಸದತ್ತ ಜನರು ಆಕರ್ಷಿತರಾಗುತ್ತಾರೆ ಎಂದು ಪಿಯೂಶ್ ಗೋಯಲ್ ನುಡಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಪ್ರಕಾಶ್ ಜಾವ್ಡೇಕರ್ ಅವರು, ಜನರು ಕೆಲಸ ಮಾಡಬಾರದೆಂದು ನಿರ್ಧರಿಸಿದರೆ, ಅಂಥವರನ್ನು ನಿರುದ್ಯೋಗದ ಪಟ್ಟಿಗೆ ಸೇರಿಸಬಾರದು. ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ, ಸ್ವಯಂಉದ್ಯೋಗ ಮಾಡುತ್ತಿರುವ ಮತ್ತು ಕೆಲಸ ಮಾಡದಿರುವ ಮಹಿಳೆಯರು ದೇಶದಲ್ಲಿ ಬೇಕಾದಷ್ಟಿದ್ದಾರೆ. ಅವರ ದತ್ತಾಂಶ ಪತ್ತೆ ಹಚ್ಚಲು ಸಾಧ್ಯವಿಲ್ಲ. ಅವರೆಲ್ಲ ನಿರುದ್ಯೋಗಿಗಳೆ? ನಿರುದ್ಯೋಗವನ್ನು ವ್ಯಾಖ್ಯಾನಿಸಲು ನಾನಾ ಆಯಾಮಗಳಿವೆ ಎಂದರು.

ಸರಕಾರಿ ಕೆಲಸ ಗಿಟ್ಟಿಸಲು ಹಲವರು ಯತ್ನಿಸುತ್ತಲೇ ಇರುತ್ತಾರೆ. ಕೆಲವರಿಗೆ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವುದೇ ಜೀವನದ ಧ್ಯೇಯವಾಗಿರುತ್ತದೆ. ಸ್ನಾತಕೋತ್ತರ ಪದವಿ ಗಳಿಸಿದವನೊಬ್ಬ ಏಕೆ ಕಸ ಗುಡಿಸುವ ಸರಕಾರಿ ಕೆಲಸಕ್ಕೆ ಪ್ರಯತ್ನಿಸಬೇಕು ಎಂದು ಪ್ರಕಾಶ್ ಜಾವ್ಡೇಕರ್ ಅವರು ಪ್ರಶ್ನಿಸಿದರು.

ದುಬೈ ವಿದ್ಯಾರ್ಥಿಗಳಿಗೆ ಭಾರತದ ಸಮಗ್ರತೆಯ ಪಾಠ ಮಾಡಿದ ರಾಹುಲ್‌

ಭಾರತದಲ್ಲಿರುವ ನಿರುದ್ಯೋಗದ ಬಗ್ಗೆ ಪ್ರಮುಖವಾಗಿ ರಾಹುಲ್ ಗಾಂಧಿ ಅವರು ದೇಶದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದಾಗಲೆಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆಯಲ್ಲಿ ನೀಡಿದ ಉದ್ಯೋಗ ಸೃಷ್ಟಿಯ ಆಶ್ವಾಸನೆಯನ್ನು ಸಂಪೂರ್ಣ ಮರೆತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ ಎಂದು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಪಿಯೂಶ್ ಗೋಯಲ್ ಮತ್ತು ಪ್ರಕಾಶ್ ಜಾವ್ಡೇಕರ್ ಈ ವಿವರಗಳನ್ನು ನೀಡಿದರು.

ರಾಹುಲ್ ಗಾಂಧಿ ಒಬ್ಬ 'ಸರಣಿ ಸುಳ್ಳುಗಾರ': ಸಚಿವ ಪಿಯೂಷ್ ಗೋಯಲ್

ಲೋಕಸಭೆ ಚುನಾವಣೆಯ ನಂತರ ಭಾರತದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಿಸುವುದಾಗಿ ಅಬುಧಾಬಿಯಲ್ಲಿ ಆಯೋಜಿಸಲಾಗಿದ್ದ 'ದಿ ಐಡಿಯಾ ಆಫ್ ಇಂಡಿಯಾ' ಸಮಾವೇಶದಲ್ಲಿ ಹೇಳಿರುವ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ನುಡಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union railway minister Piyush Goyal and Human Resource minister Prakash Javadekar denied that there is huge unemployment issue in India. They said that, rush for government jobs doesn't mean rising unemployment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more