ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಪೋಟೋ ಕಳುಹಿಸುವ ವ್ಯಕ್ತಿಗೆ ಬಹುಮಾನ: ನಿತಿನ್ ಗಡ್ಕರಿ

|
Google Oneindia Kannada News

ನವದೆಹಲಿ ಜೂನ್ 17: ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಚಿತ್ರಗಳನ್ನು ಕಳುಹಿಸುವ ವ್ಯಕ್ತಿಗೆ ಬಹುಮಾನ ಬಹುಮಾನ ನೀಡಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನೋ ಪಾರ್ಕಿಂಗ್‌ನಲ್ಲಿ ನಿಲುಗಡೆ ಮಾಡಿದ ವಾಹನ ನಿಲ್ಲಿಸುವ ವ್ಯಕ್ತಿಗೆ ದಂಡ 1,000 ರೂ.ಗಳಾಗಿದ್ದರೆ ಶೀಘ್ರದಲ್ಲೇ ನೋ ಪಾರ್ಕಿಂಗ್‌ನಲ್ಲಿ ನಿಲುಗಡೆ ಮಾಡಿದ ವಾಹನದ ಭಾವಚಿತ್ರವನ್ನು ಕಳುಹಿಸುವ ವ್ಯಕ್ತಿ 500 ರೂ ಬಹುಮಾನವನ್ನು ಪಡೆಯಬಹುದು ಎಂದು ನಿತಿನ್ ಗಡ್ಕರಿ ಗುರುವಾರ ತಿಳಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ತಮ್ಮ ಸ್ಪಷ್ಟ ನಿಲುವುಗಳಿಗೆ ಹೆಸರುವಾಸಿಯಾಗಿದ್ದಾರೆ. ರಸ್ತೆಗಳಲ್ಲಿ ತಪ್ಪಾಗಿ ವಾಹನಗಳನ್ನು ನಿಲ್ಲಿಸುವ ಅಭ್ಯಾಸವನ್ನು ತಡೆಯಲು ಕಾನೂನನ್ನು ಆಲೋಚಿಸುತ್ತಿದ್ದೇನೆ. ಇದು ಆಗಾಗ್ಗೆ ರಸ್ತೆಗಳ ಅಡಚಣೆಗೆ ಕಾರಣವಾಗುತ್ತದೆ ಎಂದು ಹೇಳಿದರು.

Rs 500 reward to person sending pics of wrongly parked vehicle in offing says Nitin Gadkari

"ನೋ ಪಾರ್ಕಿಂಗ್‌ನಲ್ಲಿ ನಿಲುಗಡೆ ಮಾಡಿದ ವಾಹನ ನಿಲ್ಲಿಸುವ ವ್ಯಕ್ತಿಗೆ ದಂಡ 1,000 ರೂ.ಗಳಾಗಿದ್ದರೆ ಶೀಘ್ರದಲ್ಲೇ ನೋ ಪಾರ್ಕಿಂಗ್‌ನಲ್ಲಿ ನಿಲುಗಡೆ ಮಾಡಿದ ವಾಹನದ ಭಾವಚಿತ್ರವನ್ನು ಕಳುಹಿಸುವ ವ್ಯಕ್ತಿ 500 ರೂ. ಬಹುಮಾನವನ್ನು ಪಡೆಯಬಹುದು. ಇದರಿಂದ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಲಾಗುವುದು'' ಎಂದಿದ್ದಾರೆ. ಜನರು ತಮ್ಮ ವಾಹನಗಳನ್ನು ಸರಿಯಾದ ಸ್ಥಳದಲ್ಲಿ ಪಾರ್ಕ್ ಮಾಡದೇ ಅವರ ವಾಹನಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ ಎಂದು ಸಚಿವರು ವಿಷಾದಿಸಿದರು.

Rs 500 reward to person sending pics of wrongly parked vehicle in offing says Nitin Gadkari

''ನಾಗ್ಪುರದಲ್ಲಿ ನನ್ನ ಅಡುಗೆಯವರು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಆದರೀಗ ನಾಲ್ಕು ಸದಸ್ಯರ ಕುಟುಂಬವು ಆರು ವಾಹನಗಳನ್ನು ಹೊಂದಿದೆ. ನಾವು ಅವರ ವಾಹನಗಳ ನಿಲುಗಡೆಗೆ ರಸ್ತೆ ಮಾಡಿರುವುದರಿಂದ ದೆಹಲಿಯ ಜನರು ಅದೃಷ್ಟವಂತರು ಎಂದು ತೋರುತ್ತದೆ. ಯಾರೂ ಪಾರ್ಕಿಂಗ್ ಸ್ಥಳಗಳನ್ನು ಮಾಡುವುದಿಲ್ಲ, ಅವರಲ್ಲಿ ಹೆಚ್ಚಿನವರು ತಮ್ಮ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸುತ್ತಾರೆ" ಎಂದು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Union Road Transport and Highways Minister Nitin Gadkari has said that a person who sends pictures of a wrongly parked vehicle will be rewarded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X