ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ?

|
Google Oneindia Kannada News

ನವದೆಹಲಿ, ಆಗಸ್ಟ್‌ 19: ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹವಾಲ ದಂಧೆ ನಡೆಸುತ್ತಿದ್ದ ಚೀನಾದ ಪ್ರಜೆ ಲುವೋ ಸಾಂಗ್ ಅಲಿಯಾಸ್ ಚಾರ್ಲಿ ಪೆಂಗ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಮನಿ ಲಾಂಡರಿಂಗ್ ಕೇಸ್‌ ದಾಖಲಿಸಿತ್ತು.

ಚೀನಾದ ಪ್ರಜೆಯಾಗಿರುವ 42 ವರ್ಷದ ಲುವೋ ಸಾಂಗ್ ಅಲಿಯಾಸ್ ಚಾರ್ಲಿ ಪೆಂಗ್ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಆತನು ಚೀನಾಕ್ಕೆ ಮತ್ತು ಅಲ್ಲಿಂದ ಹವಾಲಾ ಹಣವನ್ನು ವರ್ಗಾವಣೆ ಮಾಡಲು ಬಳಸುತ್ತಿದ್ದ ಶಾಮ್ ಕಂಪನಿಗಳ ವೆಬ್ ಅನ್ನು ರಚಿಸಿದ್ದಾರೆ ಎಂಬ ಆರೋಪವಿದೆ.

ಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆ

ಈತನ ಗುಂಪು ಕಳೆದ 3 ವರ್ಷಗಳಿಂದ ಈ ದಂಧೆಯನ್ನು ನಡೆಸುತ್ತಿದೆ. ವೈದ್ಯಕೀಯ ಮತ್ತು ಎಲೆಕ್ಟ್ರಾನಿಕ್ ಸರಕುಗಳ ಆಮದು ಮತ್ತು ರಫ್ತು ಮತ್ತು ಇತರ ವಸ್ತುಗಳಲ್ಲೂ ಆತ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

Rs 1000 Crore Hawala Racket Kingpin: Who Is Charli Peng?

ಭಾರತೀಯ ಮಹಿಳೆಯನ್ನೇ ಮದುವೆಯಾದ ನಂತರ ಮಣಿಪುರದಿಂದ ನಕಲಿ ಪಾಸ್‌ಪೋರ್ಟ್ ಪಡೆದಿದ್ದಾನೆ ಎನ್ನಲಾಗಿದೆ. ಜೊತೆಗೆ ನಕಲಿ ಆಧಾರ್ ಕಾರ್ಡ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ದೆಹಲಿಯಲ್ಲಿ ಕೆಲವು ಟಿಬೆಟಿಯನ್ನರಿಗೆ ಲಂಚ ನೀಡಿದ್ದಾರೆ ಮತ್ತು ಅವರ ಮೂಲಕ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಷ್ಟಲ್ಲದೆ ಈತ ಗೂಢಚರ್ಯೆಗಾಗಿ ರಹಸ್ಯ ಶಿಬಿರವನ್ನು ದೆಹಲಿಯ ಮಜ್ನು ಕಾ ತಿಲಾದಲ್ಲಿ ನಿರ್ಮಿಸಲಾಗಿದೆ. ಈತ ಲಂಚ ನೀಡುವ ಮೂಲಕ ಟಿಬೆಟಿಯನ್ ಧಾರ್ಮಿಕ ಮುಖಂಡ ದಲೈ ಲಾಮಾ ಮತ್ತು ಅವರ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದರು.

ಇನ್ನೊಂದು ವಿಷಯ ಏನೆಂದರೆ, 2018 ರಲ್ಲಿ ದೆಹಲಿ ಪೊಲೀಸರು ನಕಲಿ ಪಾಸ್‌ಪೋರ್ಟ್ ಅಡಿಯಲ್ಲಿ ಈತನನ್ನು ಅರೆಸ್ಟ್‌ ಮಾಡಿದ್ದರು. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವನನ್ನು ಬಿಡುಗಡೆ ಮಾಡಲಾಯಿತು. ಇದೀಗ ಹಳೆ ಕೇಸ್ ಆಧರಿಸಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಚಾರ್ಲಿ ಪೆಂಗ್ ಅಲಿಯಾಸ್ ಲೌ ಸಾಂಗ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

English summary
ED Monday registered a case of money laundering against a Chinese national. He has been accused of allegedly running a hawala racket worth Rs 1,000 crore. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X