ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಗನದು ಕೊಲೆ ಎಂಬ ಅನುಮಾನ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದ ಎನ್.ಡಿ.ತಿವಾರಿ ಅವರ ರೋಹಿತ್ ಶೇಖರ್ ಸಾವು ಸಹಜವಾಗಿ ಆಗಿಲ್ಲ. ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆ ನಂತರ ಈ ಸಂಗತಿ ಹೊರಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಅಸಹಜ ಸಾವು" ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಂದಿದೆ. ನಲವತ್ತು ವರ್ಷದ ರೋಹಿತ್ ಬುಧವಾರದಂದು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದರು. ತನಿಖೆಯನ್ನು ದೆಹಲಿ ಪೊಲೀಸ್ ಅಪರಾಧ ದಳಕ್ಕೆ ವರ್ಗಾಯಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಲಾಗಿದೆ.

ದಕ್ಷಿಣ ದೆಹಲಿಯಲ್ಲಿ ವಿಲಾಸಿ ಪ್ರದೇಶವಾದ ಡಿಫೆನ್ಸ್ ಕಾಲೋನಿಯಲ್ಲಿನ ರೋಹಿತ್ ಮನೆಯಲ್ಲಿ ಏಳು ಸಿಸಿಟಿವಿ ಕ್ಯಾಮೆರಗಳಿದ್ದು, ಅವುಗಳಲ್ಲಿ ಎರಡು ಕೆಲಸ ಮಾಡಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರಾಖಂಡಕ್ಕೆ ಮತದಾನಕ್ಕೆ ತೆರಳಿದ್ದ ರೋಹಿತ್, ಅಲ್ಲಿಂದ ವಾಪಸಾಗಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿರುವ ಪ್ರಕಾರ ಗೋಡೆಯ ಸಹಾಯ ಪಡೆದು, ರೋಹಿತ್ ನಡೆದು ಬಂದಿದ್ದಾರೆ.

Rohit Shekhar Tiwari, ND Tiwaris son, suspicion of murder: Police

ಉತ್ತರಾಖಂಡದಿಂದ ರೋಹಿತ್ ವಾಪಸ್ ಬಂದ ಮರು ದಿನ ಅವರ ತಾಯಿ ಉಜ್ವಲ ತಿವಾರಿ ಅವರು ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ಅಲ್ಲಿ ಅವರಿಗೆ ಕರೆ ಬಂದಿದೆ. ರೋಹಿತ್ ಗೆ ಮೂಗಿನಿಂದ ರಕ್ತ ಒಸರುತ್ತಿದೆ ಎಂದು ತಿಳಿಸಲಾಗಿದೆ. ಆ ನಂತರ ಅವರು ಆಂಬ್ಯುಲೆನ್ಸ್ ನಲ್ಲಿ ರೋಹಿತ್ ರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.

ಕರೆ ಮಾಡಿದ ವೇಳೆ ರೋಹಿತ್ ಪತ್ನಿ ಅಪೂರ್ವ, ಸೋದರ ಸಂಬಂಧಿ ಸಿದ್ಧಾರ್ಥ್ ಮತ್ತು ಮನೆಗೆಲಸದವರು ಮನೆಯಲ್ಲಿ ಇದ್ದರು. ರೋಹಿತ್ ಶೇಖರ್ ನನ್ನು ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು ಹಾಗೂ ದೇಹದ ಹೊರ ಭಾಗದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ವಿವಾದಿತ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಮಗ ರೋಹಿತ್ ಸಾವುವಿವಾದಿತ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಮಗ ರೋಹಿತ್ ಸಾವು

ಎನ್.ಡಿ.ತಿವಾರಿ ಅವರ ಮಗ ತಾನು ಎಂದು ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಅವರು ಅದರಲ್ಲಿ ಯಶಸ್ಚಿ ಆಗಿದ್ದರು. ಆ ನಂತರ ರೋಹಿತ್ ರ ತಾಯಿಯನ್ನು ಎನ್.ಡಿ.ತಿವಾರಿ ವಿವಾಹ ಸಹ ಆಗಿದ್ದರು.

English summary
Rohit Shekhar Tiwari, the son of former Uttar Pradesh chief minister and Congress stalwart ND Tiwari, did not die a natural death and was most probably killed by being smothered with a pillow, sources in the Delhi Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X