ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ?

|
Google Oneindia Kannada News

ನವದೆಹಲಿ, ಫೆಬ್ರವರಿ 07: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಉದ್ಯಮಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಗುರುವಾರವೂ ವಿಚಾರಣೆ ನಡೆಸಲಿದೆ.

ಬುಧವಾರ ಸುಮಾರು 5 ಗಂಟೆಗೂ ಹೆಚ್ಚು ಕಾಲ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತವಾಗಿ ವಿಚಾರಣೆಗೊಳಪಡಿಸಿದ್ದರು. ಇಂದು ಬೆಳಿಗ್ಗೆ 110:30 ರಿಂದ ಮತ್ತೆ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.

ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ

Robert Vadra to be questioned today also

ಲಂಡನ್ ಮತ್ತು ಇತರೆಡೆ ಅಕ್ರಮವಾಗಿ ಆಸ್ತಿ ಹೊಂದಿರುವ ಆರೋಪ ವಾದ್ರಾ ಅವರ ಮೇಲಿದೆ. 2005-2010 ರ ಅವಧಿಯಲ್ಲಿ ಸುಮಾರು ಐದಕ್ಕೂ ಹೆಚ್ಚು ಮನೆಗಳನ್ನು ವಾದ್ರಾ ಖರೀದಿಸಿದ್ದು, ಅವುಗಳಲ್ಲಿ ಎರಡು ಐಷಾರಾಮಿ ವಿಲ್ಲಾ ಬೆಲೆಯೇ 83 ಕೋಟಿ ರೂ.ನಷ್ಟಾಗುತ್ತದೆ ಎನ್ನಲಾಗಿದೆ.

ಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರುಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರು

ಈ ಮಧ್ಯೆ, 'ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮನೆಗಳನ್ನು ಕಿಕ್ ಬ್ಯಾಕ್ ಮೂಲಕ ವಾದ್ರಾ ಪಡೆದಿದ್ದಾರೆ' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಲು ಹೊರಟಿದ್ದ ರಾಬರ್ಟ್ ವಾದ್ರಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮತ್ತು ಭಾವ ರಾಹುಲ್ ಗಾಂಧಿ ಮತ್ತು ಪತ್ನಿ ಪ್ರಿಯಾಂಕಾ ಗಾಂಧಿ ಸಾಥ್ ನೀಡಿದ್ದು, 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಭರವಸೆ ನೀಡಿದ್ದಾರೆ.

English summary
Businessman Robert Vadra, who was questioned on Wednesday for more than five hours by the Enforcement Directorate, will be questioned again today around 10:30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X