ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯ ದೆಹಲಿ ಗಲಭೆ; ಕೊಲೆ ಆರೋಪಿ ಬಂಧಿಸಿದ ಎಸ್‌ಐಟಿ

|
Google Oneindia Kannada News

ನವದೆಹಲಿ, ಮಾರ್ಚ್ 08 : ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂದರ್ಭದಲ್ಲಿ ಕೊಲೆ ಮಾಡಿದ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 47 ಜನರು ಮೃತಪಟ್ಟಿದ್ದರು.

ಬಂಧಿತ ಆರೋಪಿಯನ್ನು 27 ವರ್ಷದ ಶಿವ ವಿಹಾರ್ ಎಂದು ಗುರುತಿಸಲಾಗಿದೆ. ಫೆಬ್ರವರಿ 24ರಂದು ಸ್ವೀಟ್ ಅಂಗಡಿ ಮಾಲೀಕ ದಿಲ್‌ಬುರ್ ಸಿಂಗ್ ಎಂಬಾತನನ್ನು ಶಿವ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ದೆಹಲಿ ಗಲಭೆಯ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.

ದೆಹಲಿ ಗಲಭೆಗೂ ಮುನ್ನ ವಾಟ್ಸಾಪ್ ಗ್ರೂಪ್‌ಗಳಲ್ಲಿ ನಡೆದಿತ್ತು ಸಂಚು!ದೆಹಲಿ ಗಲಭೆಗೂ ಮುನ್ನ ವಾಟ್ಸಾಪ್ ಗ್ರೂಪ್‌ಗಳಲ್ಲಿ ನಡೆದಿತ್ತು ಸಂಚು!

ದೆಹಲಿಯಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಹಲವರು ಶಿವ ವಿಹಾರ್ ಗುರುತು ಹಿಡಿದಿದ್ದರು. ಶಿವ ಕೇವಲ ಕೊಲೆ ಮಾಡಿಲ್ಲ, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ, ಅಂಗಡಿಗಳಿಗೆ ಬೆಂಕಿಯನ್ನು ಹಚ್ಚಿದ್ದ ಎಂದು ಆರೋಪಿಸಲಾಗಿದೆ.

ದೆಹಲಿ ಗಲಭೆ; ಸರ್ಕಾರದ ಸಂತ್ರಸ್ತರ ಕೇಂದ್ರಕ್ಕೆ ಜನರ ಮೆಚ್ಚುಗೆ ದೆಹಲಿ ಗಲಭೆ; ಸರ್ಕಾರದ ಸಂತ್ರಸ್ತರ ಕೇಂದ್ರಕ್ಕೆ ಜನರ ಮೆಚ್ಚುಗೆ

Riot In Northeast Delhi Murder Accused Arrested

ಸ್ವೀಟ್ ಅಂಗಡಿಯಲ್ಲಿ ಫೆಬ್ರವರಿ 26ರಂದು ದಿಲ್‌ಬುರ್ ಸಿಂಗ್ ಶವ ಪತ್ತೆಯಾಗಿತ್ತು. ಸಿಂಗ್ ಕೊಲೆ ಮಾಡಿದ್ದಲ್ಲದೆ ಆತನ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಆಧರಿಸಿ ಶಿವ ವಿಹಾರ್ ಬಂಧಿಸಲಾಗಿದೆ.

ದೆಹಲಿ; ಗುಪ್ತಚಾರಿ ಅಧಿಕಾರಿ ಕೊಲೆ, ಆಪ್ ಕಾರ್ಯಕರ್ತ ಬಂಧನದೆಹಲಿ; ಗುಪ್ತಚಾರಿ ಅಧಿಕಾರಿ ಕೊಲೆ, ಆಪ್ ಕಾರ್ಯಕರ್ತ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆ ಪರ, ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಘರ್ಷಣೆ ಆರಂಭವಾಗಿತ್ತು. ಬಳಿಕ ಇದು ಕೋಮು ಗಲಭೆಯ ಸ್ವರೂಪ ಪಡೆದಿತ್ತು. ಗಲಭೆಯಲ್ಲಿ ಇದುವರೆಗೂ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ದೆಹಲಿ ಸರ್ಕಾರ ಗಲಭೆಯ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ನೇಮಕ ಮಾಡಿದೆ. ಗಲಭೆಯಲ್ಲಿ 300 ಜನರು ಗಾಯಗೊಂಡಿದ್ದಾರೆ. ಇದುವರೆಗೂ 690 ಎಫ್‌ಐಆರ್ ದಾಖಲು ಮಾಡಲಾಗಿದೆ. 2193 ಜನರನ್ನು ವಶಕ್ಕೆ ಪಡೆಯಲಾಗಿದೆ.

English summary
Delhi police arrested 27-year-old Shiva Vihar on charges of murder and rioting in Northeast Delhi. Shiv Vihar killed 20 year old employee of a sweet shop on February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X