ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇವಾರಿ ಅತ್ಯಾಚಾರ: ಆರೋಪಿಗಳ ಮಾಹಿತಿಗೆ ಲಕ್ಷ ರೂ. ಇನಾಮು

|
Google Oneindia Kannada News

ರೇವಾರಿ, ಸೆಪ್ಟೆಂಬರ್ 15: ರಾಷ್ಟ್ರಪತಿ ಪ್ರಶ್ಸ್ತಿ ಪುರಸ್ಕೃತ ವಿದ್ಯಾರ್ಥಿನಿ ಮೇಲೆ 12 ಜನ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಸರ್ಕಾಋ ಶನಿವಾರ ಆರೋಪಿಗಳ ಪತ್ತೆಗೆ 1 ಲಕ್ಷ ರೂ ಬಹುಮಾನ ಘೋಷಿಸಿದೆ.

19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಮುಖ ಆರೋಪಿ ರಕ್ಷಣಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಆತನ ಬಂಧನಕ್ಕಾಗಿ ವಾರೆಂಟ್ ಪಡೆಯಲಾಗತ್ತಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ತಲಾ ಆರೋಪಿಯ ತಲೆಗೆ ಒಂದು ಲಕ್ಷ ರೂ. ಘೋಷಿಸಿರುವುದಾಗಿ ಹರಿಯಾಣದ ಪೊಲೀಸ್ ಮಹಾ ನಿರ್ದೇಶಕರಾದ ಬಿ.ಎಸ್. ಸಂಧು ಹೇಳಿದ್ದಾರೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

ಪ್ರಕರಣದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ವಿಶೇಷ ತನಿಖಾ ದಳ ಎಸ್‌ಐಟಿ ರಚಿಸಿದ್ದು, ನೂಹ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಜನೀನ್ ಭಾಸಿನ್ ಶನಿವಾರ ಸಂತ್ರಸ್ತ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳ ಸಂತ್ರಸ್ತ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Rewari rape case: SIT announces Rs.1 lakh for information

ಎಸ್‌ಐಟಿ ಮುಖ್ಯಸ್ಥ ನಜನೀನ್ ಭೇಟಿ ವೇಳೆ ಘಟನೆ ಕುರಿತು ಮಾಹಿತಿ ನೀಡಿರುವ ವಿದ್ಯಾರ್ಥಿನಿ 12 ಜನ ಯುವಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದು, ಟ್ಯೂಷನ್ ನಿಂದ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾಳೆ.

ವಿದ್ಯಾರ್ಥಿನಿ ವೈದ್ಯಕೀಯ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದು ಖಚಿತ ಪಟ್ಟಿದ್ದು, ತದ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಅಲ್ಟ್ರಾ ಸೌಂಡ್ ಹಾಗೂ ಎಕ್ಸ್‌ ರೇ ವರದಿಗಳ ಅನುಸಾರ ಆಕೆಯ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿದುಬಂದಿದೆ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್ ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ ಶನಿವಾರ ಬೆಳಗ್ಗೆ ಹರಿಯಾಣ ಸರ್ಕಾರಕ್ಕೆ ಪತ್ರ ಬರೆದು 19 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕುರಿತು ಸಮಗ್ರ ವರದಿ ನೀಡುವಂತೆ ಸೂಚಿಸಿದೆ. ವಿದ್ಯಾರ್ಥಿನಿಯನ್ನು ಬೆಳಗ್ಗೆ 8 ಗಂಟೆಗೆ ಟ್ಯೂಷನ್ ಕೇಂದ್ರದ ಬಳಿ ಅಪಹರಿಸಿ ಸಂಜೆ 5 ಗಂಟೆ ಸುಮಾರಿಗೆ ಕನೀನಾ ಬಸ್‌ ನಿಲ್ದಾಣ ಬಳಿ ಆಕೆಯನ್ನು ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.

Rewari rape case: SIT announces Rs.1 lakh for information

ಆ ಬಳಿಕ ವಿದ್ಯಾರ್ಥಿಯನ್ನು ಪಾಲಕರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿದ್ದರೂ ಗುರುವಾರ ಸಂಜೆಯವರೆಗೂ ಯಾವುದೇ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸರಲಿಲ್ಲ, ಹೀಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹರಿಯಾಣ ಸರ್ಕಾರದ ವಿರುದ್ಧ ಕೆಂಗಣ್ಣು ಬೀರಿದೆ.

ಘಟನೆ ಮಹೇಂದ್ರಗಢ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಕನೀನಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ನ್ನು ನಂತರ ಮಹೇಂದ್ರ ಗಢಕ್ಕೆ ವರ್ಗಾವಣೆ ಮಾಡಲಾಗಿದೆ.

English summary
Haryana SIT has announced that Rs.1 lakh award for any information about accused of Rewari rape case in Haryana on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X