ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆ

|
Google Oneindia Kannada News

ನವದೆಹಲಿ, ಜೂನ್ 24: ಕೊರೊನಾವೈರಸ್ ವಿರುದ್ಧ ಹೋರಾಡಲು ಪತಂಜಲಿಯ 'ಕೊರೊನಿಲ್' ಎಂಬ ಔಷಧವನ್ನು ನಿನ್ನೆಯಷ್ಟೇ ಯೋಗ ಗುರು ಬಾಬಾ ರಾಮ್‌ದೇವ್ ಬಿಡುಗಡೆ ಮಾಡಿದ್ದರು.

ಇದೀಗ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ, ಕೊರೊನಾವೈರಸ್‌ಗೆ ಬಾಬಾ ರಾಮ್‌ದೇವ್ ಔಷಧ ಕಂಡುಹಿಡಿದಿದ್ದು ಉತ್ತಮ ವಿಚಾರ, ಆದರೆ ಅದು ಆಯುಷ್ ಮಂತ್ರಾಲಯದಡಿ ಬರುತ್ತದೆ.

ಕೊರೊನಾ ವೈರಸ್‌ಗೆ ಪತಂಜಲಿಯಿಂದ ಆಯುರ್ವೇದ ಔಷಧ ಬಿಡುಗಡೆಕೊರೊನಾ ವೈರಸ್‌ಗೆ ಪತಂಜಲಿಯಿಂದ ಆಯುರ್ವೇದ ಔಷಧ ಬಿಡುಗಡೆ

ಆಯುಷ್ ಮಂತ್ರಾಲಯವು ಔಷಧದ ಕುರಿತು ಪರೀಕ್ಷೆ ನಡೆಸಬೇಕು, ವರದಿ ನೀಡಬೇಕು ಬಳಿಕ ಔಷಧ ಮಾರಾಟಕ್ಕೆ ಅನುಮತಿ ನೀಡಬೇಕೆ, ಬೇಡವೇ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಆಯುಷ ಮಂತ್ರಿ ಶ್ರೀಪಾದ್ ನಾಯಕ್ ಮಾಹಿತಿ ನೀಡಿದ್ದಾರೆ.

Restriction On Patanjali’s Coronil Advertisement And Sale

ಪತಂಜಲಿಯ ಈ ಕೊರೊನಿಲ್‌ನಿಂದ ಶೇ.100ರಷ್ಟು ಸೋಂಕು ಗುಣವಾಗುತ್ತದೆ ಎಂದು ಹೇಳಿದ್ದರು. ಕೊರೊನಾ ಸೋಂಕು ನಿಯಂತ್ರಣ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಸಕಾರಾತ್ಮಕ ಬಂದಿದೆ. ಕೊರೊನಿಲ್ ಔಷಧ ಸಂಪೂರ್ಣವಾಗಿ ಕ್ಲಿನಿಕಲ್ ಸಂಶೋಧನೆಯ ಆಧಾರವಾಗಿಟ್ಟುಕೊಂಡು ತಯಾರಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಹೇಳಿದೆ.

ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಮೂರು ದಿನಗಳಲ್ಲಿ ಶೇ.69ರಷ್ಟು ಗುಣಮುಖರಾಗುತ್ತಾರೆ. 7 ದಿನಗಳಲ್ಲಿ ಶೇ.100ರಷ್ಟು ರೋಗಿಗಳು ಗುಣಮುಖರಾಗಲಿದ್ದಾರೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ತಿಳಿಸಿದ್ದರು.

ಈ ಔಷಧದಿಂದ 1 ಸಾವಿರ ರೋಗಿಗಳನ್ನು 5-14 ದಿನಗಳಲ್ಲಿ ಗುಣಮುಖರನ್ನಾಗಿ ಮಾಡಬಹುದು ಎಂದು ಹೇಳಿದ್ದ

English summary
After the launch of Patanjali’s Coronil which the company claims to have 100 per cent recovery results landed in soup with the Ayush Ministry asking Patanjali to submit the details of the composition of medicines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X