ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

|
Google Oneindia Kannada News

ನವದೆಹಲಿ, ಏಪ್ರಿಲ್.26: ಕೊರೊನಾ ವೈರಸ್ ಹರಡುವಿಕೆ ಭೀತಿಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅಂತಾರಾಷ್ಟ್ರೀಯ ಗಡಿರೇಖೆಗಳೆಲ್ಲ ಬಂದ್ ಆಗಿದ್ದು ಜಾಗತಿಕ ವಿಮಾನಯಾನ ಸಂಚಾರಕ್ಕೆ ಭಾರಿ ಹೊಡೆತ ಬಿದ್ದಿದೆ.

ಕಳೆದ ಎರಡ್ಮೂರು ತಿಂಗಳಿನಿಂದ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಗಡಿರೇಖೆಯನ್ನು ಬಂದ್ ಮಾಡಿವೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತಕ್ಕೆ ಮೃತದೇಹ ಬಂದರೂ ವಿಮಾನದಿಂದ ಕೆಳಗಿಳಿಸದೆ ವಾಪಸ್ಭಾರತಕ್ಕೆ ಮೃತದೇಹ ಬಂದರೂ ವಿಮಾನದಿಂದ ಕೆಳಗಿಳಿಸದೆ ವಾಪಸ್

ಅಂತಾರಾಷ್ಟ್ರೀಯ ಫ್ಲೈಟ್ ಟ್ರ್ಯಾಕಿಂಗ್ ಆಪ್ ಆಗಿರುವ ಫ್ಲೈಟ್ ರಾಡರ್ ಪ್ರಕಾರ ಅಂತಾರಾಷ್ಟ್ರೀಯ ಸಂಚಾರದ ಪ್ರಮಾಣದಲ್ಲಿ ಶೇ.55ರಷ್ಟು ಇಳಿಮುಖವಾಗಿದೆ. ಕೊರೊನಾ ವೈರಸ್ ಹರಡುವ ಆತಂಕದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಲಾಕ್ ಡೌನ್ ಅಂತ್ಯದವರೆಗೂ ವಿಮಾನ ಸಂಚಾರ ಇಲ್ಲ

ಲಾಕ್ ಡೌನ್ ಅಂತ್ಯದವರೆಗೂ ವಿಮಾನ ಸಂಚಾರ ಇಲ್ಲ

ಕೊರಾನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಿಸಿದ್ದಾರೆ. ಈ ಹಿನ್ನೆಲೆ ಮೇ.03ರ ಲಾಕ್ ಡೌನ್ ಅಂತ್ಯದವರೆಗೂ ವಿಮಾನ ಹಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ

ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ

ದೇಶಾದ್ಯಂತ ಲಾಕ್ ಡೌನ್ ಘೋಷಿಸುವುದು, ವಿಮಾನ ನಿಲ್ದಾಣಗಳನ್ನೇ ಬಂದ್ ಮಾಡುವುದು, ಸಂಚಾರಿ ಮಾರ್ಗಸೂಚಿ ರಚಿಸಿ, ಅದನ್ನು ಪಾಲಿಸುವಂತೆ ಸೂಚಿಸುವುದು ಹಾಗೂ ದೇಶದ ಗಡಿರೇಖೆ ಪ್ರವೇಶಿಸದಂತೆ ನಿರ್ಬಂಧ ವಿಧಿಸುವುದು. ಹೀಗೆ ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳು ಕೊರೊನಾ ವೈರಸ್ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿವೆ.

ವಿಶ್ವದಲ್ಲೇ 29 ಲಕ್ಷ ಜನರಿಗೆ ಕೊರೊನಾ ಮಹಾಮಾರಿ

ವಿಶ್ವದಲ್ಲೇ 29 ಲಕ್ಷ ಜನರಿಗೆ ಕೊರೊನಾ ಮಹಾಮಾರಿ

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ 29,23,191 ಜನರಿಗೆ ಸೋಂಕು ಇರುವುದು ಸ್ಪಷ್ಟವಾಗಿದ್ದು, 2,03,308 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. 8,37,527 ಕೊರೊನಾ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಸ್ಪೇನ್, ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ಇಂದಿಗೂ ಕೊವಿಡ್-19 ಮಹಾಮಾರಿಯ ಸುಳಿಗೆ ಸಿಲುಕಿ ನರಳುತ್ತಿವೆ.

ಯಾವ ರಾಷ್ಟ್ರಗಳಲ್ಲಿ ವಿಮಾನ ಸಂಚಾರಕ್ಕೆ ನಿರ್ಬಂಧ?

ಯಾವ ರಾಷ್ಟ್ರಗಳಲ್ಲಿ ವಿಮಾನ ಸಂಚಾರಕ್ಕೆ ನಿರ್ಬಂಧ?

ಡೆಡ್ಲಿ ಕೊರೊನಾ ವೈರಸ್ ದಾಳಿಗೆ ವಿಶ್ವದಾದ್ಯಂತ 210ಕ್ಕೂ ಅಧಿಕ ರಾಷ್ಟ್ರಗಳು ಸಿಕ್ಕು ನಲುಗಿವೆ. ಯಾವ ರಾಷ್ಟ್ರಗಳಲ್ಲಿ ಎಷ್ಟು ಜನರಿಗೆ ಸೋಂಕು ಯಾವಾಗ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಯಾವ ರಾಷ್ಟ್ರಗಳು ಡೇಂಜರ್ ಝೋನ್ ನಲ್ಲಿವೆ. ವಿಮಾನಯಾನಕ್ಕೆ ನಿರ್ಬಂಧ ವಿಧಿಸಿರುವ ರಾಷ್ಟ್ರಗಳು ಯಾವುವು ಎಂಬುದರ ಕುರಿತು ವಿಶೇಷ ತಾಣವನ್ನು ಒನ್ ಇಂಡಿಯಾ ಸಿದ್ಧಪಡಿಸಿದೆ. ಈ ಕೆಳಗಿನ ಲಿಂಕ್ ನಲ್ಲಿ ನಿರ್ಬಂಧ ವಿಧಿಸಿರುವ ರಾಷ್ಟ್ರಗಳು ಯಾವುವು ಎಂಬುದರ ನೀಲನಕ್ಷೆ ಕಾಣಸಿಗುತ್ತದೆ.

READ IN ENGLISH

English summary
Restriction On Global Traffic For Control Of Corona Virus Spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X