ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್: ಮಾರ್ಚ್ 31ರವರೆಗೂ ದೇಶಾದ್ಯಂತ ರೆಸ್ಟೋರೆಂಟ್ ಬಂದ್

|
Google Oneindia Kannada News

ದೆಹಲಿ, ಮಾರ್ಚ್ 18: ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿರುವ ಕೊರೊನಾ ವೈರಸ್‌ಗೆ ಭಾರತ ದೇಶವೂ ಸಿಲುಕಿಕೊಂಡಿದೆ. ಕೊರೊನಾ ಹರಡುವಿಕೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅನೇಕ ರಾಜ್ಯಗಳು ಶಾಲೆ, ಕಾಲೇಜು, ಮಾಲ್, ಚಿತ್ರಮಂದಿರ, ಶಾಪಿಂಗ್ ಮಾಲ್, ಪಬ್, ಕ್ಲಬ್ ಎಲ್ಲವನ್ನು ಬಂದ್ ಮಾಡಿದೆ.

ಇದೀಗ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (NRAI) ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಮಾರ್ಚ್ 31ರ ವರೆಗೂ ಮುಚ್ಚಲು ಸೂಚಿಸಿದೆ.

ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯ

ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ರೆಸ್ಟೋರೆಂಟ್ ಮಾಲೀಕರು ಕೈಜೋಡಿಸಿದ್ದು, ರೆಸ್ಟೋರೆಂಟ್ ಅಸೋಸಿಯೇಶನ್ ಅಡಿಯಲ್ಲಿ ಬರುವ ಪಬ್, ಬಾರ್, ಕೆಫೆಗಳ ಕಾರ್ಯ ಸ್ಥಗಿತಗೊಳಿಸಲಿದೆ.

Restaurants Across India Shut Down Till March 31

''ಬಹುತೇಕ ನಗರದ ರೆಸ್ಟೋರೆಂಟ್ ಮಾಲೀಕರು ಈ ಕುರಿತು ಒಮ್ಮತ ಸೂಚಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಗಮನಹರಿಸಬೇಕಾಗಿದೆ. ರೆಸ್ಟೋರೆಂಟ್ ಮುಚ್ಚುವುದು ಸ್ವಯಂಪ್ರೇರಿತವಾಗಿರುತ್ತೆ, ಇಲ್ಲಿ ಒತ್ತಾಯವಿರುವುದಿಲ್ಲ'' ಎಂದು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಅನುರಾಗ್ ಕಟ್ರಿಯಾರ್ ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರತ್ತಲೇ ಇದೆ. ಇದುವರೆಗೂ ಸುಮಾರು 147ಕ್ಕೂ ಅಧಿಕ ಕೇಸ್‌ಗಳು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಮೂರು ಸಾವು ಸಂಭವಿಸಿದ್ದು, ಕಲುಬುರ್ಗಿ, ದೆಹಲಿ ಮತ್ತು ಮಹಾರಷ್ಟ್ರದಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ.

ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!

2018-19ರಲ್ಲಿ ಭಾರತೀಯ ರೆಸ್ಟೋರೆಂಟ್ ಉದ್ಯಮವು 7.3 ಮಿಲಿಯನ್ ಜನರಿಗೆ ಉದ್ಯೋಗ ನೀಡಿದೆ. 2022-23ರ ವೇಳೆಗೆ ಆಹಾರ ಸೇವೆಗಳ ಉದ್ಯಮವು 4.2 ಲಕ್ಷ ಕೋಟಿ ತೆರಿಗೆ ಮತ್ತು ಶೇಕಡಾ 9 ರಷ್ಟು ಬೆಳವಣಿಗೆಯಾಗುವ ಮುನ್ಸೂಚನೆ ಇದೆ. ಈ ನಿಟ್ಟಿನಲ್ಲಿ ಕೊರೊನಾ ವೈರಸ್ ಸೋಂಕು ರೆಸ್ಟೋರೆಂಟ್ ಉದ್ಯಮದ ಲೆಕ್ಕಾಚಾರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

English summary
In view of rising health risks following the spread of coronavirus, the National Restaurant Association of India on Wednesday asked all members to shut down their restaurants till March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X