ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ

|
Google Oneindia Kannada News

Recommended Video

Surgical Strike 2: ಮಸೂದ್ ಅಜರ್ ಕಂಡ್ರೆ ರಾಹುಲ್‍ಗೆ ಎಷ್ಟು ಇಷ್ಟ ನೋಡಿ... | Oneindia Kannada

ನವದೆಹಲಿ, ಮಾರ್ಚ್ 11: ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನನ್ನು "ಮಸೂದ್ ಅಜರ್ ಜೀ" ಎಂದು ಸಂಬೋಧಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. "ರಾಹುಲ್ ಗೆ ಉಗ್ರರೆಂದರೆ ಪ್ರೀತಿ" ಎಂದಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ರಾಹುಲ್ ಹಾಗೂ ಪಾಕಿಸ್ತಾನ ಮಧ್ಯೆ ಸಾಮಾನ್ಯ ಸಂಗತಿ ಏನೆಂದರೆ 'ಉಗ್ರರ ಮೇಲಿನ ಪ್ರೀತಿ' ಎಂದಿದ್ದಾರೆ.

ಮುಸಲ್ಮಾನನ ಮಗ ಗಾಂಧಿ ಹೇಗಾದ? : ಅನಂತ ಕುಮಾರ್ ಹೆಗಡೆ ಪ್ರಶ್ನೆಮುಸಲ್ಮಾನನ ಮಗ ಗಾಂಧಿ ಹೇಗಾದ? : ಅನಂತ ಕುಮಾರ್ ಹೆಗಡೆ ಪ್ರಶ್ನೆ

ಆರು ಸೆಕೆಂಡ್ ನ ರಾಹುಲ್ ಗಾಂಧಿಯ ಟ್ವಿಟ್ಟರ್ ವಿಡಿಯೋ ಷೇರ್ ಮಾಡಿ, ದಯವಿಟ್ಟು ರಾಹುಲ್ ಜೀ ಉಗ್ರ್ ಮಸೂದ್ ಅಜರ್ ನ ಹೇಗೆ ಸಂಬೋಧಿಸುತ್ತಾರೋ ಗಮನಿಸಿ- ಉಗ್ರರನ್ನು ರಾಹುಲ್ ಪ್ರೀತಿಸುವುದಕ್ಕೆ ಇದು ನಿದರ್ಶನ ಎಂದಿದ್ದಾರೆ.

ಈ ಹಿಂದೆ ವಾಜಪೇಯಿ ಸರಕಾರ ಇರುವಾಗ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಿದ್ದರ ಬಗ್ಗೆ ಪ್ರಸ್ತಾವ ಮಾಡಿ, ಬಿಜೆಪಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವ ಆರು ಸೆಕೆಂಡ್ ನ ವಿಡಿಯೋ ಅದು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ ಜೀ! ಈ ಮುಂಚೆ ದಿಗ್ವಿಜಯ್ ಜೀ ಅಂಥವರು ಒಸಾಮಾ ಜೀ ಮತ್ತು ಹಫೀಜ್ ಸಾಹೇಬ್ ಅಂತೆಲ್ಲ ಕರೆದಿದ್ದರು. ಈಗ ನೀವು ಮಸೂದ್ ಅಜರ್ ಜೀ ಅಂತಿದ್ದೀರಿ. ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಭಯೋತ್ಪಾದಕರ ಹೆಸರಲ್ಲಿ ಯೋಜನೆ

ಮಸೂದ್ ಅಜರ್ ನನ್ನು ರಾಹುಲ್ ಗಾಂಧಿ 'ಮಸೂದ್ ಅಜರ್ ಜೀ' ಎಂದು ಕರೆದಿದ್ದಾರೆ. ಈ ರೀತಿಯಲ್ಲಿ ಗಮನಿಸುವುದಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಆಡಳಿತ ಇರುವ ಕಡೆ ಸರಕಾರಿ ಯೋಜನೆಗಳಿಗೆ ಭಯೋತ್ಪಾದಕರ ಹೆಸರೇ ಇಟ್ಟರೂ ಅಚ್ಚರಿ ಇಲ್ಲ. ಸನ್ನಡತೆ ತೋರಿದಂತೆ ಅಲ್ಲವೆ?

ದೇವರ ದಯೆಯಿಂದ ಜೀ ಅಂತಷ್ಟೇ ಬಳಸಿದ್ದಾರೆ

ನನಗೆ ಬಹಳ ಸಂತೋಷ ಆಗ್ತಿದೆ. ದೇವರ ದಯೆಯಿಂದ 'ಅವರು' (ಜೀ) ಅಂತ ಮಾತ್ರ ಬಳಸಿದ್ದಾರೆ. ನಾನಾ, ದಾದಾ, ಮಾಮು, ಚಾಚಾ ಇತ್ಯಾದಿ ಬಳಸಿಲ್ಲ.

ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ

ಅಖಿಲ ಭಾರತ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ಗೆ ನಾಚಿಕೆ ಆಗಬೇಕು. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.

ಶ್ರೀ ಶ್ರೀ ಶ್ರೀ ಮಸೂದ್ ಅಜರ್ ಅಂತ ಬಳಸಬಹುದು

ತಡೆಯಿರಿ... ಚುನಾವಣೆ ಪ್ರಚಾರ ಮುಂದುವರಿದಂತೆಲ್ಲ ಆತ ಇನ್ನು ಘನತೆವೆತ್ತ, ಗೌರವಾನ್ವಿತ, ಪರಮಪೂಜ್ಯ, ಶ್ರೀ ಶ್ರೀ ಶ್ರೀ ಮಸೂದ್ ಅಜರ್ ಜೀ ಎಂದೆಲ್ಲ ಬಳಸುತ್ತಾರೆ.

English summary
The BJP on Monday attacked Congress president Rahul Gandhi over his reference to terrorist organisation Jaish-e-Mohammad's head as "Masood Azhar ji" and threw "Rahul loves terrorists" barb at him, as the opposition party hit back accusing its rival of deliberately twisting his comments made with sarcasm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X