ಶೀಘ್ರದಲ್ಲಿ 20 ರೂ ನೋಟು ಚಾಲ್ತಿಗೆ, ಏನಿದರ ವಿಶೇಷತೆ?
ನವದೆಹಲಿ, ಡಿಸೆಂಬರ್ 25: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 20 ರೂಪಾಯಿ ನೋಟನ್ನು ಬಿಡುಗಡೆ ಮಾಡಲಿದೆ.
ನೋಟು ಅಮಾನ್ಯೀಕರಣದ ಬಳಿಕ ಆರ್‌ಬಿಐ 50, 100,500, 200,2000 ರೂ ನೋಟುಗಳನ್ನು ಮುದ್ರಿಸಿತ್ತು. 20 ರೂ ನೋಟಿನಲ್ಲಿ ಕೆಲವು ವೈಶಿಷ್ಟ್ಯತೆಗಳು ಇರಲಿವೆ ಎಂದು ಬ್ಯಾಂಕ್ ಮೂಲ ತಿಳಿಸಿದೆ.
ಸಾಲಗಾರರಿಗೆ ಗುಡ್ ನ್ಯೂಸ್! ರೆಪೋ ದರ ಬದಲಾವಣೆ ಸಾಧ್ಯತೆ ಕಡಿಮೆ
2016ರ ನವೆಂಬರ್ನಿಂದ ಈ ಹೊಸರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ. ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಅಳತೆಯಲ್ಲಿ ತುಂಬ ವ್ಯತ್ಯಾಸವಿದೆ.ಒಟ್ಟಾರೆ ನೋಟುಗಳ ಪ್ರಸರಣದಲ್ಲಿ ಶೇ.9.8ರಷ್ಟು 20 ರೂಪಾಯಿ ನೋಟುಗಳ ಪ್ರಸರಣವಿದೆ ಎನ್ನಲಾಗಿದೆ.
2016ರ ಮಾರ್ಚ್ 31ರಲ್ಲಿ ಸುಮಾರು 4.92 ಬಿಲಿಯನ್ಗಳಷ್ಟು 20 ರೂಪಾಯಿ ನೋಟುಗಳ ಪ್ರಸರಣವಿತ್ತು. 2018ರ ಮಾರ್ಚ್ನಲ್ಲಿ ಪ್ರಸರಣ ದ್ವಿಗುಣಕ್ಕೂ ಹೆಚ್ಚಾಗಿದ್ದು, 10 ಬಿಲಿಯನ್ ನೋಟುಗಳು ಸರ್ಕ್ಯೂಲೆಟ್ ಆಗುತ್ತಿವೆ ಎಂದು ಬ್ಯಾಂಕ್ ದಾಖಲೆ ತಿಳಿಸಿದೆ ಈಗ 20 ರೂಪಾಯಿ ನೋಟು ಕೂಡ ಶೀಘ್ರದಲ್ಲೇ ಹೊಸದಾಗಿ ಚಾಲ್ತಿಯಲ್ಲಿ ಬರಲಿದೆ.