ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ: ದೆಹಲಿಯಲ್ಲಿ 27,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

|
Google Oneindia Kannada News

ನವದೆಹಲಿ, ಜನವರಿ 23: ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕಾಗಿ ಸಿದ್ಧತೆ ಭರದಿಂದ ಸಾಗಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಚಳಿ ಗಾಳಿ, ಥಂಡಿ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪ್ರತಿಕೂಲ ಹವಾಮಾನದ ನಡುವೆ ಗಣತಂತ್ರದಿನಕ್ಕಾಗಿ ರಿಹರ್ಸಲ್ ಸಾಗಿದೆ. ದೆಹಲಿಯಲ್ಲಿ ಎಲ್ಲೆಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಟ್ಟು 27,723 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ಮುಖ್ಯಸ್ಥ ರಾಕೇಶ್ ಆಸ್ತಾನ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಒಟ್ಟು ಪಡೆಗಳಲ್ಲಿ 71 ಉಪ ಪೊಲೀಸ್ ಆಯುಕ್ತರು (ಡಿಸಿಪಿಗಳು), 213 ಎಸಿಪಿಗಳು, 713 ಇನ್ಸ್‌ಪೆಕ್ಟರ್‌ಗಳು, ದೆಹಲಿ ಪೊಲೀಸ್ ಕಮಾಂಡೋಗಳು, ಸಶಸ್ತ್ರ ಬೆಟಾಲಿಯನ್ ಅಧಿಕಾರಿಗಳು ಮತ್ತು ಜವಾನರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 65 ಕಂಪನಿಗಳು ಸೇರಿವೆ ಎಂದು ಅವರು ಹೇಳಿದರು.

ಕಳೆದ ಎರಡು ತಿಂಗಳಿನಿಂದ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.

Republic Day update: Over 27,000 security personnel deployed in Delhi

"ದೆಹಲಿ ಯಾವಾಗಲೂ ಸಮಾಜ ವಿರೋಧಿ ಶಕ್ತಿಗಳಿಗೆ ಗುರಿಯಾಗಿದೆ. ಈ ವರ್ಷವೂ ನಾವು ಅಲರ್ಟ್ ಆಗಿದ್ದೇವೆ. ಕಳೆದ ಎರಡು ತಿಂಗಳಿನಿಂದ ನಾವು ಇತರ ಭದ್ರತಾ ಏಜೆನ್ಸಿಗಳೊಂದಿಗೆ ಸಮನ್ವಯದೊಂದಿಗೆ ದೆಹಲಿಯಲ್ಲಿ ತೀವ್ರವಾದ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಅಸ್ತಾನಾ ಹೇಳಿದರು.

ಗಮನಾರ್ಹವೆಂದರೆ, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ಪಡೆದ ನಂತರ ದೆಹಲಿಯು ಪ್ರಸ್ತುತ ಭಾರೀ ಭದ್ರತೆಯ ಅಡಿಯಲ್ಲಿದೆ.

ಇತ್ತೀಚೆಗೆ ದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಚೀಲವೊಂದರಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿ ಆತಂಕ ಮೂಡಿಸಿತ್ತು. ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ತುಂಬಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇದು ಎಂಬುದು ದೃಢಪಟ್ಟಿತ್ತು. ಆದರೆ, ಪೊಲೀಸರು, ಎನ್ ಎಸ್ ಜಿ ತಂಡದ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿತ್ತು.

Republic Day update: Over 27,000 security personnel deployed in Delhi

"ದೆಹಲಿ ಪೊಲೀಸರು ಮತ್ತು ಎನ್‌ಎಸ್‌ಜಿ ಇಂದು ಪೂರ್ವ ದೆಹಲಿಯ ಗಾಜಿಪುರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಗಣರಾಜ್ಯೋತ್ಸವದ ಮುನ್ನವೇ ಒಂದು ದೊಡ್ಡ ದಾಳಿಯನ್ನು ತಪ್ಪಿಸಲಾಗಿದೆ. ಅವರು ಎಲ್ಲವನ್ನೂ ಅಪಾಯಕ್ಕೆ ಸಿಲುಕಿಸಿ ನಾವು ಬದುಕುತ್ತೇವೆ! #ರಕ್ಷಕರು" ಎಂದು ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದರು.

ವಿದೇಶಿ ಅತಿಥಿಗಳಿಲ್ಲ:
ಸತತ ಎರಡನೇ ವರ್ಷವೂ ಕೊರೊನಾ ಭೀತಿಯಿಂದಾಗಿ ವಿದೇಶಿ ಅತಿಥಿಗಳಿಲ್ಲದೆ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನಾಯಕರನ್ನು ಭಾರತ ಆಹ್ವಾನಿಸುತ್ತದೆ. ಆದರೆ ಈ ಬಾರಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

Recommended Video

IND vs SA: KL Rahul ಹಾಗು Kohli ನಡುವೆ ಮೈದಾನದಲ್ಲಿ ನಡೆದಿದ್ದೇನು | Oneindia Kannada

ಈ ಬಾರಿ ಗಣರಾಜೋತ್ಸವಕ್ಕೆ ವಿಶೇಷವಾಗಿ ಕೊರೊನಾ ಜಾಗೃತಿ ಮೂಡಿಸಲು ಒತ್ತು ನೀಡಲಾಗುತ್ತದೆ. ಗಣರಾಜೋತ್ಸವ ಆಹ್ವಾನ ಪತ್ರಿಕೆಯಲ್ಲಿ ಔಷಧೀಯ ಬೀಜಗಳಿವೆ. ಇವುಗಳನ್ನು ಹೂವಿನ ಮಡಕೆ ಅಥವಾ ಉದ್ಯಾನದಲ್ಲಿ ಬಿತ್ತಬಹುದು. ಜೊತೆಗೆ ಈ ಬಾರಿ ಡ್ರೋನ್ ಪ್ರದರ್ಶನ ನಡೆಯಲಿದೆ. ಸಾವಿರ ಡ್ರೋನ್‌ಗಳು ಪ್ರದರ್ಶನ ನೀಡಲಿವೆ. ಚೀನಾ, ರಷ್ಯಾ ಹಾಗೂ ಯುನೈಟೆಡ್ ಕಿಂಗ್‌ ಡಮ್ ನಂತರ ನಾಲ್ಕನೇ ದೇಶವಾಗಿ ಭಾರತದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ.

ಈ ವರ್ಷದ ಗಣ ರಾಜ್ಯೋತ್ಸವ ಮೊದಲಿಗಿಂತ ಹೆಚ್ಚು ರೋಚಕವಾಗಿರಲಿದೆ. ಜನವರಿ 26 ರಂದು "ಆಜಾದಿ ಕಾ ಅಮೃತ್ ಮಹೋತ್ಸವ"ದ ಅಂಗವಾಗಿ 75 ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಇದು ರಾಜ್‌ಪಥ್‌ನಲ್ಲಿ ನಡೆದ ಅತಿ ದೊಡ್ಡ ಫ್ಲೈ ಪಾಸ್ಟ್ ಆಗಲಿದೆ ಎಂದು ವಾಯುಪಡೆಯ ಪ್ರೊ ವಿಂಗ್ ಕಮಾಂಡರ್ ಇಂದ್ರನೀಲ್ ನಂದಿ ಅವರು ಸೋಮವಾರ ತಿಳಿಸಿದ್ದಾರೆ.

ಈವರೆಗೆ ರಾಜ್‌ಪಥ್‌ನಲ್ಲಿ ನಡೆದ ಎಲ್ಲ ಪರೇಡ್‌ಗಳಿಗಿಂತ ಈ ಬಾರಿ ಅತ್ಯಂತ ಭವ್ಯವಾದ ಫ್ಲೈ ಪಾಸ್ಟ್ ಸೇನೆ ಪ್ರದರ್ಶನ ಮಾಡಲಿದೆ. 17 ಜಾಗ್ವಾರ್ ವಿಮಾನಗಳು 75 ನೇ ವರ್ಷದ ಅಮೃತ ಮಹೋತ್ಸವದ ಆಕಾರವನ್ನು ಆಗಸದಲ್ಲಿ ರೂಪಿಸಲಿದೆ" ಎಂದರು.

English summary
Delhi Police Commissioner Rakesh Asthana on Sunday said that over 27,000 personnel have been deployed in the national capital in view of Republic Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X