ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ಸಾವಿನ ಸುದ್ದಿ ಕೇಳಿ ಇನ್ನಷ್ಟು 'ತರುಣ' ನಾದೆ' : ಮಹಾಶಯ್

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ದೇಶದ ಎರಡನೇ ಅತಿದೊಡ್ಡ ಮಸಾಲ ಉತ್ಪನ್ನಗಳ ಮಾರಾಟ ಸಂಸ್ಥೆ ಎಂಡಿಎಚ್ ಮಸಾಲದ ಮಾಲೀಕ ಧರ್ಮಪಾ ಗುಲಾಟಿ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಬೆಳಗ್ಗೆಯಿಂದ ಹಬ್ಬಿತ್ತು. ಆದರೆ, ಈ ಬಗ್ಗೆ ಎಂಡಿಎಚ್ ಸಂಸ್ಥೆ ಸ್ಪಷ್ಟನೆ ನೀಡಿದೆ.

ಮಹಾಶಯ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಎಂಡಿಎಚ್ ಮಾಲೀಕ ಧರ್ಮಪಾಲ್ ಅವರು ಪ್ರತಿಕ್ರಿಯಿಸಿ, ನನ್ನ ಸಾವಿನ ಸುದ್ದಿ ಕೇಳಿ ನಾನು ಇನ್ನಷ್ಟು ತಾರುಣ್ಯತೆ ಪಡೆದುಕೊಂಡಿದ್ದೇನೆ.

ಶಿವಮೊಗ್ಗ: ಹೊಟ್ಟೆ ಬಿರಿಯುವಷ್ಟು ತಿನ್ನಿ, ಇಷ್ಟ ಬಂದಷ್ಟು ಹಣ ಕೊಡಿಶಿವಮೊಗ್ಗ: ಹೊಟ್ಟೆ ಬಿರಿಯುವಷ್ಟು ತಿನ್ನಿ, ಇಷ್ಟ ಬಂದಷ್ಟು ಹಣ ಕೊಡಿ

ದೇಶದ ವಿವಿಧೆಡೆಗಳಿಂದ ಜನರು ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವುದು ನೋಡಿ ನನ್ನ ಹೃದಯ ತುಂಬಿ ಬಂದಿದೆ. ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.

ಎಂಡಿಎಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಜ್ಜ ಬೇರೆ ಯಾರೂ ಅಲ್ಲ. ಎಂಡಿಎಚ್ ಸಂಸ್ಥೆಯ ಮಾಲೀಕ 'ಮಹಾಶಯ್' ಧರ್ಮಪಾಲ್ ಗುಲಾಟಿ. ಮಸಾಲ ಪಾಕೆಟ್ ಗಳ ಮೇಲೂ ಅವರ ಭಾವಚಿತ್ರ ಇರುತ್ತದೆ. 95 ವರ್ಷ ವಯಸ್ಸಿನ ಧರ್ಮಪಾಲ್ ಅವರು ಆರೋಗ್ಯದಿಂದಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಮಹಾಶಯ್ 1959ರಿಂದ ಸಂಸ್ಥೆಯ ನೇತೃತ್ವ

ಮಹಾಶಯ್ 1959ರಿಂದ ಸಂಸ್ಥೆಯ ನೇತೃತ್ವ

ಪಾಕಿಸ್ತಾನದ ಸಿಯೋಲ್ ಕೋಟ್ ಮೂಲದ ಗುಲಾಟಿ ಕುಟುಂಬದ ಚುನ್ನಿಲಾಲ್ ಅವರು 1919ರಲ್ಲಿ ಸ್ಥಾಪಿಸಿದ ಮಹಾಶಿಯನ್ ಡಿ ಹಟ್ಟಿ(ಎಂಡಿಎಚ್) ಮಸಾಲ ಪುಡಿ ಉತ್ಪಾದನಾ ಸಂಸ್ಥೆಗೆ 1959ರಿಂದ ಮಹಾಶಯ್ ಧರ್ಮ್ ಪಾಲ್ ಗುಲಾಟಿ ಅವರು ಮುಖ್ಯಸ್ಥರಾಗಿದ್ದಾರೆ.

FMCG ಕ್ಷೇತ್ರದಲ್ಲಿ ಧರ್ಮಪಾಲ್ ಅವರು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಸಿಇಒ ಆಗಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಧರ್ಮಪಾಲ್ ಅವರು 21 ಕೋಟಿ ರು ಸಂಬಳ ಪಡೆದಿದ್ದರು.
ಸಾವಿರಾರು ಕೋಟಿ ರೂಪಾಯಿ ವಹಿವಾಟು

ಸಾವಿರಾರು ಕೋಟಿ ರೂಪಾಯಿ ವಹಿವಾಟು

Fast Moving consumer goods (FMCG) ಕ್ಷೇತ್ರದ ಸೇರಿರುವ ರೆಡಿಮೇಡ್ ಮಸಾಲ ಪುಡಿ ಉತ್ಪಾದನಾ ಸಂಸ್ಥೆಯನ್ನು ಮುನ್ನಡೆಸಿರುತ್ತಿರುವ ಧರ್ಮಪಾಲ್ ಅವರು ಕಲ 5ನೇ ತರಗತಿ ತನಕ ಮಾತ್ರ ಓದಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಎಂಡಿಎಚ್ ಸುಮಾರು 62ಕ್ಕೂ ಅಧಿಕ ಉತ್ಪನ್ನಗಳನ್ನು 150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ ಮಾಡುತ್ತಿದೆ.

ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್

ಏನೆಂದು ಸುದ್ದಿ ಹಬ್ಬಿತ್ತು

ಏನೆಂದು ಸುದ್ದಿ ಹಬ್ಬಿತ್ತು

ಎಂಡಿಎಚ್ ಸಂಸ್ಥೆ ಮಾಲೀಕರಾದ ಮಹಾಶಯ್ ಧರ್ಮಪಾಲ್ ಗುಲಾಟಿ ಅವರು ವಯೋಸಹಜ ಅನಾರೋಗ್ಯರಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ ಎಂದು ಭಾನುವಾರ ಬೆಳಗ್ಗೆ ಪ್ರಮುಖ ಸುದ್ದಿ ವಾಹಿನಿಗಳ ವೆಬ್ ನಲ್ಲಿ ಪ್ರಕಟವಾಗಿತ್ತು. ಆದರೆ, ನಂತರ ಈ ಬಗ್ಗೆ ಎಂಡಿಎಚ್ ಸಂಸ್ಥೆಯಿಂದ ಸ್ಪಷ್ಟನೆ ಹೊರ ಬಂದಿತು. ಧರ್ಮಪಾಲ್ ಅವರು ಆರೋಗ್ಯದಿಂದಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಹೇಳಿದರು.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಧರ್ಮಪಾಲ್ ಅವರಿರುವ ವಿಡಿಯೋ

ಎಂಡಿಎಚ್ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಅವರು ಸ್ಪಷ್ಟಪಡಿಸಿ, ಇದೊಂದು ಆಧಾರ ರಹಿತ ಸುಳ್ಳು ಸುದ್ದಿ. ಇದು ಆಘಾತಕಾರಿಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಸುದ್ದಿ ಹಬ್ಬುತ್ತಿದೆ. ಆದರೆ, ಜನರು ಇಂಥ ಸುದ್ದಿಯನ್ನು ನಂಬುವುದು ಬೇಡ ಎಂದು ಹೇಳಿದ್ದಾರೆ.

ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ

English summary
MDH Spices on Sunday strongly denied media reports of the ‘death’ of its iconic owner ‘Mahashay’ Dharampal Gulati.MDH vice president vice-president Rajendra Kumar said : 'I appeal to the people not to fall prey to such rumours,” he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X