ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೋಕ್ ವಿರುದ್ಧದ ತನಿಖೆ ಪೂರ್ಣ : ಕ್ಷಮೆಯೊಂದಿಗೆ ವರದಿ ಸಲ್ಲಿಕೆ

|
Google Oneindia Kannada News

ನವದೆಹಲಿ, ನವೆಂಬರ್ 12 : ಕೇಂದ್ರ ಸರಕಾರದಿಂದ ಪದಚ್ಯುತರಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲೆ ಹೇರಲಾಗಿರುವ ಭ್ರಷ್ಟಾಚಾರದ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ 'ಕ್ಷಮೆ'ಯ ಸಹಿತ ಕೇಂದ್ರ ಜಾಗೃತ ದಳ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?

ತನಿಖೆ ನಡೆಸಿ ವರದಿ ಸಲ್ಲಿಸಲು ಹನ್ನೆರಡು ದಿನಗಳ ಕಾಲ ಸುಪ್ರೀಂ ಕೋರ್ಟ್ ನೀಡಿತ್ತು. ಭಾನುವಾರವೇ ವರದಿಯನ್ನು ಸಿವಿಸಿ ಸಲ್ಲಿಸಬೇಕಾಗಿತ್ತು. ತಡವಾಗಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತೀವ್ರವಾಗಿ ತರಾಟೆಗೂ ತೆಗೆದುಕೊಂಡಿದ್ದರು. ಆದಕಾರಣ, ಕ್ಷಮೆಯಾಚಿಸಿ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ

ಕೇಂದ್ರ ಸರಕಾರ ಅಲೋಕ್ ವರ್ಮಾ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಆರೋಪ ಸಾಬೀತಾಗುವುದಾ, ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕರನ್ನು ಸಮಾಲೋಚಿಸದೆ ಅಲೋಕ್ ವರ್ಮಾ ಅವರನ್ನು ಬಲವಂತದ ರಜೆಯ ಮೇಲೆ ಕಳಿಸಿದ್ದಕ್ಕೆ ಕೇಂದ್ರ ಸರಕಾರವೇ ಕ್ಷಮೆ ಕೇಳುವುದಾ ಎನ್ನುವುದು ವಿಚಾರಣೆಯ ನಂತರ ತಿಳಿದುಬರಲಿದೆ.

ತಡ ಮಾಡಿದ್ದಕ್ಕೆ ಸುಪ್ರೀಂನಿಂದ ಚಾಟಿ

ತಡ ಮಾಡಿದ್ದಕ್ಕೆ ಸುಪ್ರೀಂನಿಂದ ಚಾಟಿ

ಆದರೆ, ವರದಿಯನ್ನು ಸಲ್ಲಿಸಲು ಒಂದು ದಿನ ತಡಮಾಡಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ಸಿವಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಭಾನುವಾರ ಬೆಳಗ್ಗಿನಿಂದಲೇ ರಿಜಿಸ್ಟ್ರಿಯನ್ನು ತೆರೆದಿಟ್ಟಿದ್ದೆವು. ಆದರೂ ನೀವು ಬರಲಿಲ್ಲ. ಬರದೇ ಇರುವುದಕ್ಕೆ ಕಾರಣವನ್ನೂ ತಿಳಿಸಲಿಲ್ಲ ಮತ್ತು ಮಾಹಿತಿಯನ್ನೂ ನೀಡಲಿಲ್ಲ ಎಂದು ಸಿವಿಸಿಯನ್ನು ನ್ಯಾಯಮೂರ್ತಿ ರಂಜನ್ ಗೊಗೊಯ್ ಝಾಡಿಸಿದ್ದಾರೆ.

ಸಿಬಿಐ ವಿವಾದ: ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ ಸಿವಿಸಿ ಸಿಬಿಐ ವಿವಾದ: ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ ಸಿವಿಸಿ

ತಡ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ ಸಿವಿಸಿ

ತಡ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ ಸಿವಿಸಿ

ದೇಶದ ಅತ್ಯುನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾಗಿರುವ ಕೇಂದ್ರ ಜಾಗೃತ ದಳ, ನಾವು ವರದಿಯನ್ನು ಶನಿವಾರವೇ ಸಿದ್ಧಪಡಿಸಿದ್ದೆವು. ಆದರೆ, ದುರಾದೃಷ್ಟವಶಾತ್ ವರದಿ ಸಲ್ಲಿಸಲಾಗಲಿಲ್ಲ. ಆದರೆ ನಾವು ವರದಿ ಸಲ್ಲಿಸಲು ಭಾನುವಾರವೇ ತಂದಿದ್ದೆವು. ರಿಜಿಸ್ಟ್ರಿ ಭಾನುವಾರ ಬೆಳಿಗ್ಗೆ 11.30ರವರೆಗೆ ಮಾತ್ರ ತೆರೆದಿತ್ತು. ನಾವು ಒಂದು ಗಂಟೆ ತಡವಾಗಿ ಬಂದಿದ್ದೆವು. ಅದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಸಂಸ್ಥೆಯನ್ನು ಪ್ರತಿನಿಧಿಸುವ ತುಷಾರ್ ಮೆಹ್ತಾ ಅವರು ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕರ ಪದಚ್ಯುತಿ ನ್ಯಾಯಸಮ್ಮತವೆ? ಸುಪ್ರೀಂ ವಿಚಾರಣೆ ಸಿಬಿಐ ನಿರ್ದೇಶಕರ ಪದಚ್ಯುತಿ ನ್ಯಾಯಸಮ್ಮತವೆ? ಸುಪ್ರೀಂ ವಿಚಾರಣೆ

ಹೋಲ್ ಸೇಲ್ ವರ್ಗಾವಣೆಯ ವರದಿ

ಹೋಲ್ ಸೇಲ್ ವರ್ಗಾವಣೆಯ ವರದಿ

ಅಲೋಕ್ ಕುಮಾರ್ ಅವರನ್ನು ಬಲವಂತದ ರಜೆಯ ಮೇಲೆ ಮನೆಗೆ ಕಳಿಸಿದ ನಂತರ, ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಎಂ ನಾಗೇಶ್ವರ ರಾವ್ ಅವರು ಹಲವಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಕೂಡ ಪ್ರತ್ಯೇಕವಾಗಿ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಜಾಗೃತ ದಳ ಸಲ್ಲಿಸಿದೆ. ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್ ಅವರು, ರಾಕೇಶ್ ಅಸ್ಥಾನಾ ಮತ್ತು ಅಲೋಕ್ ವರ್ಮಾ ಅವರ ವಿರುದ್ಧ ತನಿಖೆ ನಡೆಸುತ್ತಿದ್ದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿ

ನಿರ್ದೇಶಕರ ಪರಸ್ಪರ ಭ್ರಷ್ಟಾಚಾರದ ಆರೋಪ

ನಿರ್ದೇಶಕರ ಪರಸ್ಪರ ಭ್ರಷ್ಟಾಚಾರದ ಆರೋಪ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರು ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ ನಂತರ, ಇಬ್ಬರನ್ನೂ ಬಲವಂತದ ರಜೆಯ ಮೇಲೆ ಕಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ಇದು ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಏಕೆಂದರೆ, ಈ ನಿರ್ಣಯ ತೆಗೆದುಕೊಳ್ಳುವಾಗ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆಯನ್ನು ತೆಗೆದುಕೊಳ್ಳಲಾಗಿರಲಿಲ್ಲ.

ಹಣ ಕೀಳುವ ದಂಧೆಗಿಳಿದಿದ್ದ ರಾಕೇಶ್ ಅಸ್ಥಾನಾ : ಸಿಬಿಐ ಶಾಕಿಂಗ್ ಹೇಳಿಕೆಹಣ ಕೀಳುವ ದಂಧೆಗಿಳಿದಿದ್ದ ರಾಕೇಶ್ ಅಸ್ಥಾನಾ : ಸಿಬಿಐ ಶಾಕಿಂಗ್ ಹೇಳಿಕೆ

English summary
Report submitted by Central Vigilance Committee to Supreme Court of India against exiled CBI director Alok Verma with apolozy, as CVC delayed submitting report by a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X