ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ, ಮಹಿಳಾ ವಿರೋಧಿ: ರೇಣುಕಾ ಚೌಧರಿ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಫೆಬ್ರವರಿ 08: 'ಪ್ರಧಾನಿ ಮೋದಿ, ಮಹಿಳಾ ವಿರೋಧಿ' ಎನ್ನುವ ಮೂಲಕ ತಮ್ಮನ್ನು ಆಡಿಕೊಂಡಿದ್ದ ನರೇಂದ್ರ ಮೋದಿಯವರಿಗೆ ಪ್ರತಿಕ್ರಿಯೆ ನೀಡಿದ್ದಾರೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ.

ನಿನ್ನೆ(ಫೆ.7) ರಾಜ್ಯ ಸಭೆಯಲ್ಲಿ ಮೋದಿಯವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಆಧಾರ್ ಥರದ ಗುರುತಿನ ಚೀಟಿಯ ಪರಿಕಲ್ಪನೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ್ದು ಎಂದಿದ್ದರು. ಇದನ್ನು ಕೇಳಿ ಗಹಗಹಿಸಿ ನಕ್ಕಿದ್ದ ರೇಣುಕಾ ಚೌಧರಿ ಅವರನ್ನು ನೋಡಿ, 'ಚೌಧರಿ ಅವರ ನಗುವನ್ನು ನೋಡಿ ನನಗೆ ರಾಮಾಯಣ ಧಾರಾವಾಹಿ ನೆನಪಿಗೆ ಬಂತು' ಎಂದು ಮೋದಿ ತಕ್ಷಣ ಕಿಚಾಯಿಸಿದ್ದರು.

ರೇಣುಕಾ ಚೌಧರಿ ಅವರ ನಗು ನೋಡಿ 'ರಾಮಾಯಣ' ನೆನಪಿಸಿಕೊಂಡ ಮೋದಿ!ರೇಣುಕಾ ಚೌಧರಿ ಅವರ ನಗು ನೋಡಿ 'ರಾಮಾಯಣ' ನೆನಪಿಸಿಕೊಂಡ ಮೋದಿ!

ರಾಮಾಯಣದ ಋಣಾತ್ಮಕ ಪಾತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಧಾನಿ ಮೋದಿ, ರೇಣುಕಾ ಚೌಧರಿಯನ್ನು ಆಡಿಕೊಂಡಿರುವ ಕುರಿತು ನಿನ್ನೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ರೇಣುಕಾ ಚೌಧರಿ, ಇಂದು ಪ್ರತಿಕ್ರಿಯೆ ನೀಡಿದ್ದಾರೆ.

Renuka Chowdhary brands PM Modi Govt 'anti-women'

"ಪ್ರಧಾನಿ ನರೇಂದ್ರ ಮೋದಿಯವರೇ ಒಂದು ಕಾಲದಲ್ಲಿ ಆಧಾರ್ ವಿರುದ್ಧ ಉದ್ದದ ಭಾಷಣ ಮಾಡಿದ್ದರು. ಆದರೆ ಇದೀಗ ಇದು ಬಿಜೆಪಿ ಸರ್ಕಾರದ ಪರಿಕಲ್ಪನೆ ಎನ್ನುತ್ತಿದ್ದಾರೆ. ಅವರು ಹಾಗೆ ಹೇಳಿದ್ದಕ್ಕೆ ನನಗೆ ನಗು ತಡೆಯಲಕ್ಕಾಗಲಿಲ್ಲ. ಇದು ಸಹಜ ತಾನೇ? ಆದರೆ ಇದನ್ನಿಟ್ಟುಕೊಂಡು ವೈಯಕ್ತಿಕ ಟೀಕೆ, ಅಪಹಾಸ್ಯ ಸಲ್ಲದು. ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ವಿರೋಧಿ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಒಬ್ಬ ಪ್ರಧಾನಿಯಾಗಿ ಅವರು ಈ ರೀತಿ ಮಾತನಾಡುವುದು ಸರಿಯೇ? ಇದು ಅವರ ಸಂಸ್ಕಾರವನ್ನು ತೋರಿಸುತ್ತೆ. ಆದರೆ ನಾನೂ ಅವರಂತೆ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ..." ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

"ಅವರು(ಮೋದಿ) ಈ ಮಾತನ್ನು ಸಂಸತ್ತಿನ ಆಚೆ ಮಾತನಾಡಿದ್ದರೆ ಅವರ ವಿರುದ್ಧ ಖಂಡಿತ ಕೇಸು ದಾಖಲಿಸುತ್ತಿದ್ದೆ" ಎಂದಿದ್ದಾರೆ ರೇಣುಕಾ ಚೌಧರಿ.

English summary
Retorting to Prime Minister Narendra Modi's remark against her loud laughter, Congress leader Renuka Chowdhury said that it denigrated the status of a woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X