ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ : ಹಿಗ್ಗಾಮುಗ್ಗಾ ಟೀಕಿಸಿದ ಬಗ್ಗಾ

|
Google Oneindia Kannada News

ನವದೆಹಲಿ, ಡಿಸೆಂಬರ್ 18 : "ಎಲ್ಲಿಯವರೆಗೆ ಸಿಖ್ಖರನ್ನು 'ಹತ್ಯೆ' ಮಾಡಿದ ಕಮಲ್ ನಾಥ್ ಅವರನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದಿಲ್ಲವೋ, ಅಲ್ಲಿಯವರೆಗೆ ನಾವು ಹೋರಾಟ ನಿಲ್ಲುವುದಿಲ್ಲ" ಎಂದು ಬಿಜೆಪಿಯ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಸಿಎಂ ಆದ ಬಳಿಕ, ಸಾಲಮನ್ನಾ ಘೋಷಿಸಿದ ಕಮಲ್ ನಾಥ್! ಸಿಎಂ ಆದ ಬಳಿಕ, ಸಾಲಮನ್ನಾ ಘೋಷಿಸಿದ ಕಮಲ್ ನಾಥ್!

1984ರ ಸಿಖ್ ವಿರೋಧಿ ದಂಗೆಯಲ್ಲಿ ಹತ್ಯೆಗೀಡಾದ ಮೂರು ಸಾವಿರಕ್ಕೂ ಹೆಚ್ಚು ಸಿಖ್ಖರ ರಕ್ತ ಕಮಲ್ ನಾಥ್ ಅವರಿಗೂ ಅಂಟಿಕೊಂಡಿದೆ. ಅವರನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಿಎಂ ಆಗಲು ಹೊರಟಿರುವ ಕಮಲ್ ನಾಥ್ ಮೇಲೆ ಏನಿದು ಗುರುತರ ಆರೋಪ?ಸಿಎಂ ಆಗಲು ಹೊರಟಿರುವ ಕಮಲ್ ನಾಥ್ ಮೇಲೆ ಏನಿದು ಗುರುತರ ಆರೋಪ?

2004ರಲ್ಲಿ ಕೂಡ ಕಾಂಗ್ರೆಸ್ ನಾಯಕರಾದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ಆದರೆ, ನಮ್ಮ ಪ್ರತಿಭಟನೆಗೆ ಹೆದರಿ ನಂತರ ಟಿಕೆಟ್ ವಾಪಸ್ ಪಡೆಯಲಾಯಿತು. ಅವರು ಕಮಲ್ ನಾಥ್ ಅವರನ್ನು ಪಂಜಾಬ್ ಘಟಕದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದನ್ನು ಕೂಡ ವಾಪಸ್ ಪಡೆಯಬೇಕಾಯಿತು ಎಂದು ತೇಜಿಂದರ್ ಪಾಲ್ ಸಿಂಗ್ ಬಗ್ಗೆ ಹೇಳಿದ್ದಾರೆ.

Remove Kamal Nath as CM of Madhya Pradesh : Bagga demands

ಕಮಲ್ ನಾಥ್ ಅವರನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿ ಸಿಖ್ಖರಿಗೆ ಆಗಿರುವ ಗಾಯದ ಮೇಲೆ ಉಪ್ಪು ಸವರಿದೆ ಕಾಂಗ್ರೆಸ್ ಎಂದು ಅವರು ಆರೋಪಿಸಿದ್ದಾರೆ. ಗುರುದ್ವಾರಾವೊಂದರ ಮುಂದೆ ಕೆಲ ಸಿಖ್ಖರನ್ನು ಸಜೀವವಾಗಿ ದಹಿಸಿಹಾಕುತ್ತಿದ್ದಾಗ ಕಮಲ್ ನಾಥ್ ಅವರು ಜನಜಂಗುಳಿಯಲ್ಲೇ ಇದ್ದರು ಎಂಬುದು ಅವರ ಮೇಲಿರುವ ಆರೋಪ.

ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್? ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?

ಸಿಖ್ ಹತ್ಯಾಕಾಂಡದ ಕಳಂಕ ತಮ್ಮ ಮೇಲಿರುವುದನ್ನು ಕಮಲ್ ನಾಥ್ ಅವರು ನಿರಾಕರಿಸಿದ್ದಾರೆ. ತಮ್ಮ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಅಥವಾ ದೂರುಪಟ್ಟಿ ಸಲ್ಲಿಸಲಾಗಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿರುವುದು ಸ್ಪಷ್ಟ ಎಂದು ಕಮಲ್ ನಾಥ್ ತಿರುಗೇಟು ನೀಡಿದ್ದರು.

1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು

1984ರ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಿರಿಯ ನಾಯಕ ಸಜ್ಜನ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಡಿಸೆಂಬರ್ 17ರಂದು ಐತಿಹಾಸಿಕ ತೀರ್ಪು ನೀಡಿದೆ. 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಹತ್ಯೆ ನಡೆದ ನಂತರ, ಕಂಡಕಂಡಲ್ಲಿ ಸಿಖ್ಖರನ್ನು ಕೊಲ್ಲಲು ಸಜ್ಜನ್ ಕುಮಾರ್ ಬೆಂಬಲಿಗರಿಗೆ ಪ್ರೇರೇಪಿಸಿದ್ದರು ಎಂಬುದು ಅವರ ಮೇಲಿರುವ ಸಾಬೀತಾಗಿರುವ ಆರೋಪ.

English summary
BJP's Tajinder Pal Singh Bagga is holding a hunger strike in Delhi demanding removal of Kamal Nath as Madhya Pradesh CM for his alleged role in 1984 Anti-Sikh riots. Bagga says, until Sikhs' murderer Kamal Nath is removed from this post, our fight will continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X