ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿ

ಭಾರತದಲ್ಲಿ ಮತಾಂತರಕ್ಕಾಗಿ ಎನ್ ಜಿಒಗಳಿಗೆ 17,208 ಕೋಟಿ ರುಪಾಯಿ ಕ್ರಿಶ್ಚಿಯನ್ ಸಂಘಟನೆಗಳಿಂದ ಹರಿದುಬಂದಿದೆ ಎಂದು ಗೃಹಸಚಿವಾಲಯದ ವರದಿ ತಿಳಿಸಿದೆ. ಆ ಪೈಕಿ ಯಾವ ಸಂಘಟನೆ ಹೆಚ್ಚು ಹಣ ನೀಡಿದೆ ಎಂಬ ಮಾಹಿತಿ ಕೂಡ ಬಹಿರಂಗವಾಗಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 20: ದೇಶದ ಎನ್ ಜಿಒಗಳಿಗೆ ವಿವಿಧ ಸಂಘಟನೆಗಳಿಂದ 17,208 ಕೋಟಿ ರುಪಾಯಿ ಹಣ ಹರಿದುಬಂದಿದೆ. ಇದರಲ್ಲಿ ದೊಡ್ಡ ಪ್ರಮಾಣದ ಹಣವನ್ನು ನೀಡಿರುವುದು ಅಮೆರಿಕದ ಹೊರಗೆ ಕಾರ್ಯ ನಿರ್ವಹಿಸುವ ಕ್ರಿಶ್ಚಿಯನ್ ಸಂಘಟನೆಗಳು ಎಂದು ಗೃಹ ಸಚಿವಾಲಯದ ವರದಿಗಳು ತಿಳಿಸಿವೆ.

2015-16ರಲ್ಲಿ ಪ್ರಮುಖ ಹದಿನಾರು ಸಂಘಟನೆಗಳಿಂದ 17,208 ಕೋಟಿ ರುಪಾಯಿ ಬಂದಿದೆ. ಆ ಹದಿನಾರ ಪೈಕಿ ಹದಿನಾಲ್ಕು ಕ್ರಿಶ್ಚಿಯನ್ ಎನ್ ಜಿಒಗಳು ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ಐದು ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಮೊತ್ತ. 2013-14ರಲ್ಲಿ 13,092 ಕೋಟಿ ಹಾಗೂ 2011-12ರಲ್ಲಿ 10,334 ಕೋಟಿ ಹಣ ಹರಿದುಬಂದಿತ್ತು.[ಮತಾಂತರದ ವಿರುದ್ಧ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ]

Cross

ಅತಿ ಹೆಚ್ಚಿನ ಹಣ ಕ್ರಿಶ್ಚಿಯನ್ ಸಂಘಟನೆಗಳಿಂದ ಹಲವು ಎನ್ ಜಿಒಗಳಿಗೆ ಬಂದಿದ್ದು, ಅವು ಮತಾಂತರದಲ್ಲಿ ತೊಡಗಿವೆ ಎಂದು ಹೇಳಲಾಗಿದೆ. ಭಾರತದಲ್ಲಿ ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಹಣಕಾಸು ನೆರವು ನೀಡಲಾಗುತ್ತಿದೆ ಎಂಬ ಗುಮಾನಿ ಮೇಲೆ ಕಂಪ್ಯಾಷನ್ ಇಂಟರ್ ನ್ಯಾಷನಲ್ ಎಂಬ ಸಂಘಟನೆ ಮೇಲೆ ಕಣ್ಣಿಡಲಾಗಿತ್ತು.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]

ಈ ಸಂಘಟನೆಯೊಂದೇ 29 ಕೋಟಿ ರುಪಾಯಿ ಹಣವನ್ನು ನೀಡಿದೆ. ಇನ್ನು ವರ್ಲ್ಡ್ ವಿಷನ್ ಎಂಬ ಸಂಸ್ಥೆ 300 ಕೋಟಿ ರುಪಾಯಿ, ಟೂ ಏಷ್ಯಾ 105 ಕೋಟಿ, ಗಾಸ್ಪೆಲ್ ಫಾರ್ ಏಷ್ಯಾ 830 ಕೋಟಿ ರುಪಾಯಿ ಹಣವನ್ನು ನೀಡಿದೆ.

English summary
A whopping sum of Rs 17,208 crore was donated by several organisations to NGOs in India. A major share of this amount was donated by 14 Christian organisations based out of the US, a Home Ministry report states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X