ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ರದ್ದಾದರೆ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ರೀಫಂಡ್

By Nayana
|
Google Oneindia Kannada News

ನವದೆಹಲಿ, ಮೇ 10: ಒಂದು ವೇಳೆ ನೀವು ಹೊರಡುವ ರೈಲ್ವೆ ಸ್ಟೇಷನ್‌ನಿಂದ ಅಂತಿಮ ಸ್ಟೇಷನ್‌ವರೆಗೆ ಸಂಪೂರ್ಣವಾಗಿ ರೈಲು ಸೇವೆ ಸ್ಥಗಿತಗೊಂಡರೆ, ಪ್ರಯಾಣಿಕರ ಟಿಕೆಟ್ ರದ್ದಾಗುತ್ತದೆ. ಅದರ ಜತೆಗೆ ಆಟೋಮ್ಯಾಟಿಕ್ ಆಗಿ ಹಣವು ರೀಫಂಡ್ ಆಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವಿಟ್ಟರ್‌ನಲ್ಲಿ ಹೇಳಿದೆ.

ಟಿಕೆಟ್ ರದ್ದಾದರೆ ಪ್ರಯಾಣಿಕರ ಖಾತೆಗೆ ಹಣ ಜಮೆಯಾಗುತ್ತದೆ. ಟಿಕೆಟ್ ಖರೀದಿಗಾಗಿ ಹಣ ಪಾವತಿ ಮಾಡಿದ್ದ ಖಾತೆಗೆ, ಅಷ್ಟೇ ಮೊತ್ತ ಜಮೆಯಾಗುತ್ತದೆ. ಕಳೆದ ಕೆಲವು ತಿಂಗಳಿಂದ, ಪ್ರಯಾಣಿಕಸ್ನೇಹಿಯಾಗಿ ನಾನಾ ಕ್ರಮಗಳನ್ನು ರೈಲ್ವೆ ಇಲಾಖೆ ಪ್ರಕಟಿಸುತ್ತಿದೆ.

ಬೆಂಗಳೂರಲ್ಲಿ 68ಕಿ.ಮೀ ಎಲಿವೇಟೆಡ್ ರೈಲ್ವೆ ಹಳಿ : ಪಿಯೂಷ್ ಗೋಯಲ್ ಬೆಂಗಳೂರಲ್ಲಿ 68ಕಿ.ಮೀ ಎಲಿವೇಟೆಡ್ ರೈಲ್ವೆ ಹಳಿ : ಪಿಯೂಷ್ ಗೋಯಲ್

ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ರೈಲು ಬಂದರೆ, ಪ್ರಯಾಣ ದರ ಮತ್ತು ತತ್ಕಾಲ್ ಶುಲ್ಕವನ್ನು ರೀಫಂಡ್ ಪಡೆಯಲು ಪ್ರಯಾಣಿಕರು ಮುಂದಾಗಬಹುದು. ಒಂದು ವೇಳೆ ರೈಲಿನ ಮಾರ್ಗ ಬದಲಾದರೆ, ಆ ಮಾರ್ಗದಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರಿಗೆ ಇಷ್ಟವಿಲ್ಲದೇ ಹೋದರೆ, ಪೂರ್ಣ ಹಣವನ್ನು ಪಡೆಯಬಹುದಾಗಿದೆ.

Refund for train cancellation policy in railways now

ಪ್ರಯಾಣಿಕರನ್ನು ಲೋಯರ್ ಕ್ಲಾಸ್‌ಗೆ ವರ್ಗಾಯಿಸಿದ ಸಂದರ್ಭದಲ್ಲೂ ಅಲ್ಲಿ ಪ್ರಯಾಣ ಮಾಡಲು ಇಷ್ಟವಿಲ್ಲದೇ ಹೋದರೆ ಪೂರ್ಣ ರೀಫಂಡ್ ಗೆ ಅವಕಾಶವಿದೆ. ಒಂದು ವೇಳೆ ಆ ದರ್ಜೆಯಲ್ಲಿ ಪ್ರಯಾಣ ಮಾಡಲು ಇಚ್ಛಿಸಿದರ, ಎರಡೂ ದರ್ಜೆಯ ಟಿಕೆಟ್ ದರ ಹೋಲಿಸಿ ಉಳಿದ ಹಣವನ್ನು ನೀಡಲಾಗುತ್ತದೆ.

ರೈಲುಗಳು ತಮ್ಮ ನಿಗದಿತ ಸಮಯದಲ್ಲಿ ಸಂಚಚರಿಸುತ್ತಿಲ್ಲ ಹಾಗೂ ಇನ್ನೂ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

English summary
Indian Railways has decided to change in policy of traveling ticket cancellation as refund will be made if train schedule was cancelled now onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X